ಮಡಿಕೇರಿ, ಮಾ. ೨೯: ಮೈಸೂರು ಜಿಲ್ಲೆಯ ಕೃಷ್ಣರಾಜನಗರ ತಾಲೂಕಿನ ಶ್ರೀ ಕ್ಷೇತ್ರ ಕಪ್ಪಡಿಯ ವಾರ್ಷಿಕ ಜಾತ್ರಾ ಮಹೋತ್ಸವ ಅಂಗವಾಗಿ ತಾ. ೨೬ ರಂದು ನಡೆದ ಗುರುವಂದನಾ ಕಾರ್ಯಕ್ರಮದ ಸಂದರ್ಭದಲ್ಲಿ ಹಲವಾರು ಹಿರಿಯ ಕಲಾವಿದರು ಮತ್ತು ಕವಿಗಳ ಜೊತೆಗೆ ಕೊಡಗಿನ ಕವಿ ವೈಲೇಶ್ ಪಿ. ಎಸ್. ಇವರನ್ನು ಶ್ರೀ ಮಠದ ಮಳವಳ್ಳಿ ಸ್ವಾಮಿಗಳು ಸನ್ಮಾನಿಸಿ ಗೌರವಿಸಿದರು.