ವೀರಾಜಪೇಟೆ, ಮಾ. ೨೮: ಭಾರತ ಉಳಿಸಿ ಜನತೆಯನ್ನು ರಕ್ಷಿಸಿ ಎಂದು ಕೇಂದ್ರ ಕಾರ್ಮಿಕ ಸಂಘಟನೆಗಳು ದೇಶ ವ್ಯಾಪಿ ಕರೆ ನೀಡಿರುವ ಸಾರ್ವತ್ರಿಕ ಮುಷ್ಕರವನ್ನು ಬೆಂಬಲಿಸಿ ವೀರಾಜಪೇಟೆ ತಾಲುಕು ಮಟ್ಟದಲ್ಲಿ ತಹಶೀಲ್ದಾರ್ ಕಚೇರಿ ಎದುರು ಸಿಐಟಿಯುನ ಪ್ರಧಾನ ಕಾರ್ಯದರ್ಶಿ ಎ.ಸಿ ಸಾಬು ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಯೋಗಾನಂದ್ ಅವರಿಗೆ ಮನವಿ ಸಲ್ಲಿಸಿದರು.

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜನ ವಿರೋಧಿ ನೀತಿಯನ್ನು ಅನುಸರಿಸುತ್ತಿವೆ. ಕೋವಿಡ್ ಸಂದರ್ಭದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿಧಿಸಿದ ಲಾಕ್‌ಡೌನ್ ದುಡಿಯುವ ಜನರನ್ನು ಸಂಕಷ್ಟಕ್ಕೆ ಸಿಲುಕಿಸಿದವು. ಆ ಸಂದರ್ಭದಲ್ಲಿ ನೀಡಿದ ಪರಿಹಾರ ಪ್ಯಾಕೇಜ್‌ಗಳು ಬಡಜನರಿಗೆ ತಲುಪದೆ ಕಾರ್ಪೊರೇಟ್ ಹಾಗೂ ಬಂಡವಾಳ ಶಾಹಿಗಳ ಆಸರೆಯಾಯಿತು. ದಿನದಿಂದ ದಿನಕ್ಕೆ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲಗಳ ಬೆಲೆ ಗಗನಕ್ಕೇರುತ್ತಿದ್ದು ಅಗತ್ಯ ವಸ್ತುಗಳನ್ನು ಕೊಂಡುಕೊಳ್ಳದ ಸ್ಥಿತಿಗೆ ತಲುಪಿದೆ.

ಕೇಂದ್ರ ಸರ್ಕಾರ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಗಾಳಿಗೆ ತೂರಿ ಲೋಕಸಭೆಯಲ್ಲಿ ರೈತ ವಿರೋಧಿಯ ಮೂರು ಕೃಷಿ ಕಾಯ್ದೆ ಸೇರಿದಂತೆ ಅಸ್ತಿತ್ವದಲ್ಲಿದ್ದ ೨೯ ಕಾರ್ಮಿಕ ಕಾನೂನುಗಳನ್ನು ರದ್ದು ಗೊಳಿಸಿದೆ. ಅಂಸAಘಟಿತ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಬದಲಾಗಿ ಅವರಿಗೆ ಬೇಕಾದ ರೀತಿಯಲ್ಲಿ ಮಂಡಳಿಗಳನ್ನು ದುರ್ಬಲ ಗೊಳಿಸಿ ಎಲ್ಲವನ್ನೂ ಮರೆಮಾಚಲು ಜನರಲ್ಲಿ ಜಾತಿ, ಧರ್ಮ, ಭಾಷೆ, ಪ್ರಾದೇಶಿಕತೆ ಹೆಸರಿನಲ್ಲಿ ಮತೀಯ ದ್ವೇಷಗಳನ್ನು ಬೆಳೆಸಿ ದುಡಿಯುವ ಜನರ ಐಕ್ಯತೆಯನ್ನು ಮುರಿಯಲು ನಿರಂತರ ಪ್ರಯತ್ನ ನಡೆಯುತ್ತಿದೆ ಎಂದು ಹೇಳಿದರು.

ಸಿಐಟಿಯು ಜಿಲ್ಲಾಧ್ಯಕ್ಷ ಮಹಾದೇವ್ ಮಾತನಾಡಿ ಕೇಂದ್ರ ಹಾಗೂ ರಾಜ್ಯ ಸರ್ಕಾಗಳ ಆಸ್ತಿಗಳು ಇತರÀರಿಗೆ ಮಾರಾಟವಾಗುತ್ತಿದೆ. ಇದೇ ರೀತಿ ಆದ ಕಾರಣ ಪಕ್ಕದ ಶ್ರೀಲಂಕಾ ರಾಷ್ಟç ದಿವಾಳಿಯಾಗುತ್ತಿದೆ. ಮುಂದಿನ ದಿನಗಳಲ್ಲಿ ಭಾರತಕ್ಕೆ ಇದೇ ಪರಿಸ್ಥಿತಿ ಉಂಟಾಗುವುದರಲ್ಲಿ ಸಂದೇಹ ಇಲ್ಲ. ಭಾರತ ಇಂದು ಲಕ್ಷಾಂತರ ಕೋಟಿ ಸಾಲದಲ್ಲಿದೆ. ಕೇಂದ್ರದಿAದ ಬರಬೇಕಾಗಿದ್ದ ೫೬ ಸಾವಿರ ಕೋಟಿ ಜಿಎಸ್‌ಟಿ ಹಣ ಕರ್ನಾಟಕಕ್ಕೆ ಸಿಕ್ಕಿಲ್ಲ. ವಿಗ್ರಹ ಪ್ರತಿಮೆಗಳಿಗೆ ಕೋಟಿ ಹಣ ವ್ಯಯ ಮಾಡುವ ಸರ್ಕಾರಗಳು ಬಡವರ ಕಷ್ಟಕ್ಕೆ ಸ್ಪಂದಿಸುತ್ತಿಲ್ಲ. ಒಂದು ಕುಟುಂಬ ನಿರ್ವಹಣೆಗೆ ಸರ್ವೋಚ್ಚ ನ್ಯಾಯಾಲಯ ಅಂದಾಜು ೧೬ ಸಾವಿರ ನೀಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಿದೆ. ಆದರೆ ರಾಜ್ಯ ಸರ್ಕಾರ ಮಾತ್ರ ೧೦೬೩೫ ರೂಗಳನ್ನು ನಿಗದಿ ಪಡಿಸಿ ಜನ ವಿರೋಧಿ ನೀತಿಯನ್ನು ಪ್ರದರ್ಶಿಸುತ್ತಿದೆ. ಯಾವುದೇ ಚರ್ಚೆ ಇಲ್ಲದೆ ಶಾಸಕರುಗಳು ಅವರ ಸಂಬಳವನ್ನು ಹೆಚ್ಚಿಸಿಕೊಳ್ಳುತ್ತಾರೆ. ಸಿಐಟಿಯು ನಿಗದಿ ಪಡಿಸಿದ ೨೬ ಸಾವಿರ ವೇತನವನ್ನು ಸರ್ಕಾರ ಕಾರ್ಮಿಕರಿಗೆ ನೀಡಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಸಿಐಟಿಯು ಉಪಾಧ್ಯಕ್ಷ ಕುಟ್ಟಪ್ಪ, ಜಿಲ್ಲಾ ತೋಟ ಕಾರ್ಮಿಕರ ಸಂಘದ ಅಧ್ಯಕ್ಷ ಡಾ. ದುರ್ಗಾಪ್ರಸಾದ್, ಜಿಲ್ಲಾ ಅಕ್ಷರ ದಾಸೋಹ ಕಾರ್ಯಕರ್ತೆಯರ ಅಧ್ಯಕ್ಷೆ ಪ್ರಮೀಳಾ, ಕಾರ್ಯದರ್ಶಿ ಕುಸುಮಾ ಪಾಲ್ಗೊಂಡಿದ್ದರು.