ಶನಿವಾರಸಂತೆ, ಮಾ. ೨೯: ಸಮೀಪದ ದುಂಡಳ್ಳಿ ಗ್ರಾಮ ಪಂಚಾಯಿತಿ ಸೆಸ್ಕ್ ಇಲಾಖೆಗೆ ಲಕ್ಷಾಂತರ ರೂ. ಬಾಕಿ ಉಳಿಸಿಕೊಂಡಿದ್ದು, ಕಚೇರಿಯ ವಿದ್ಯುತ್ ಸಂಪರ್ಕವನ್ನು ಸೆಸ್ಕ್ ಸಿಬ್ಬಂದಿ ಕಡಿತಗೊಳಿಸಿದ ಘಟನೆ ನಡೆದಿದೆ.
ದುಂಡಳ್ಳಿ ಗ್ರಾಮ ಪಂಚಾಯಿತಿಯ ನೀರು ಸರಬರಾಜು ಹಾಗೂ ಬೀದಿ ದೀಪಗಳ ವಿದ್ಯುತ್ ಬಿಲ್ ರೂ. ೫ ಲಕ್ಷವನ್ನು ಪಾವತಿಸದರೆ ಉಳಿಸಿಕೊಂಡಿದೆ. ಪ್ರಬಾರ ಕಾರ್ಯಪಾಕ ಅಭಿಯಂತರ ಅಶೋಕ್ ಆದೇಶದನ್ವಯ ಶನಿವಾರಸಂತೆ ಸೆಸ್ಕ್ ಕಿರಿಯ ಸಂಪರ್ಕಾಧಿಕಾರಿ ಹೇಮಂತ್ ಸೂಚನೆ ಮೇರೆಗೆ ಲೈನ್‌ಮ್ಯಾನ್ ಪ್ರದೀಪ್ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದಾರೆ.