ಚೆಟ್ಟಳ್ಳಿ, ಮಾ. ೨೯: ಚೇರಳ ಗೌಡ ಸಂಘ ಹಾಗೂ ಯುವ ಬಿಗ್ರೇಡ್ ಚೆಟ್ಟಳ್ಳಿ ಇವರ ವತಿಯಿಂದ ಚೆಟ್ಟಳ್ಳಿ ಪ್ರೌಢಶಾಲಾ ಮೈದಾನಲ್ಲಿ ನಡೆದ ಮೊದಲನೇ ವರ್ಷದ ಗೌಡ ಕುಟುಂಬಗಳ ನಡುವಿನ ಸೂಪರ್ ಫೈವ್ಸ್ ಕಾಲ್ಚೆಂಡು ಪಂದ್ಯಾವಳಿಯಲ್ಲಿ ಬಡುವಂಡ್ರ ತಂಡ ಚಾಂಪಿಯನ್ ತಂಡವಾಗಿ ಹೊರಹೊಮ್ಮಿದೆ.

ಮುಕ್ಕಾಟಿ ತಂಡ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ಜಿದ್ದಾಜಿದ್ದಿನಿಂದ ಕೂಡಿದ್ದ ಫೈನಲ್ ಪಂದ್ಯದಲ್ಲಿ ಬಡುವಂಡ್ರ ತಂಡವು ಮೊದಲಾರ್ಧದಲ್ಲಿ ಗೋಲುಗಳಿಸಿ ಮುನ್ನಡೆ ಪಡೆದಿತ್ತು. ಆದರೆ ದ್ವಿತೀಯಾರ್ಧದಲ್ಲಿ ಮುಕ್ಕಾಟಿ ತಂಡ ಗೋಲುಗಳಿಸಿ ಸಮಬಲ ಸಾಧಿಸಿತು. ಅಂತಿಮವಾಗಿ ಬಡುವಂಡ್ರ ತಂಡ ಪೆನಾಲ್ಟಿ ಶೂಟೌಟ್‌ನಲ್ಲಿ ೪-೨ ಗೋಲುಗಳ ಅಂತರದಿAದ ಗೆದ್ದಿತು. ಇದಕ್ಕೂ ಮೊದಲು ನಡೆದ ಮೊದಲ ಕ್ವಾಟರ್ ಫೈನಲ್ ಪಂದ್ಯದಲ್ಲಿ ಮುಕ್ಕಾಟಿ ತಂಡವು ಉಳುವಾರನ ತಂಡವನ್ನು ೨-೧ ಗೋಲುಗಳ ಅಂತರದಿAದ ಮಣಿಸಿ ಸೆಮಿಫೈನಲ್ ಪ್ರವೇಶಿಸಿತು.

ದ್ವಿತೀಯ ಕ್ವಾಟರ್ ಫೈನಲ್ ಪಂದ್ಯವು ಕೊಂಪುಳೀರ ಹಾಗೂ ನಂಗಾರು ತಂಡಗಳ ನಡುವೆ ನಡೆಯಿತು. ನಂಗಾರು ತಂಡವು ೨-೧ ಗೋಲುಗಳ ಅಂತರದಿAದ ಗೆದ್ದು ಸೆಮಿಫೈನಲ್ ಹಂತಕ್ಕೆ ಪ್ರವೇಶಿಸಿತು. ತೃತೀಯ ಕ್ವಾಟರ್ ಸೆಮಿಫೈನಲ್ ಪಂದ್ಯವು ಪೊನ್ನಚ್ಚನ ಹಾಗೂ ಪಾಣತ್ತಲೆ ಎ ತಂಡಗಳ ನಡುವೆ ನಡೆಯಿತು. ಪಾಣತ್ತಲೆ ಎ ತಂಡವು ೨-೧ ಗೋಲುಗಳ ಅಂತರದಿAದ ಗೆಲುವು ಸಾಧಿಸಿ ಸೆಮಿಫೈನಲ್ ಪ್ರವೇಶಿಸಿತು.

ನಾಲ್ಕನೇ ಸೆಮಿಫೈನಲ್ ಪಂದ್ಯವು ಬಡುವಂಡ್ರ ಹಾಗೂ ಬೊಳ್ಳೂರು ತಂಡಗಳ ನಡುವೆ ನಡೆಯಿತು. ಬಡುವಂಡ್ರ ತಂಡವು ೩-೦ ಗೋಲುಗಳ ಅಂತರದಿAದ ಗೆದ್ದು ಸೆಮಿಫೈನಲ್ ಪ್ರವೇಶಿಸಿತು. ಮೊದಲನೆಯ ಸೆಮಿಫೈನಲ್ ಪಂದ್ಯವು ಮುಕ್ಕಾಟಿ ಹಾಗೂ ನಂಗಾರು ತಂಡಗಳ ನಡುವೆ ನಡೆಯಿತು. ಪೆನಾಲ್ಟಿ ಶೂಟೌಟ್‌ನಲ್ಲಿ ಮುಕ್ಕಾಟಿ ತಂಡ ೩-೨ ಗೋಲುಗಳ ಅಂತರದಿAದ ಗೆಲುವು ಸಾಧಿಸಿ ಫೈನಲ್ ಪ್ರವೇಶಿಸಿತು.

ಎರಡನೇ ಸೆಮಿಫೈನಲ್ ಪಂದ್ಯವು ಪಾಣತ್ತಲೆ ಎ ಹಾಗೂ ಬಡುವಂಡ್ರ ತಂಡಗಳ ನಡುವೆ ನಡೆಯಿತು. ಬಡುವಂಡ್ರ ತಂಡದ ನಾಯಕ ಸುಜಯ್ ಅವರ ಅಮೋಘ ಎರಡು ಗೋಲುಗಳ ನೆರವಿನಿಂದ ೨-೧ ಗೋಲುಗಳ ಅಂತರದಿAದ ಬಡುವಂಡ್ರ ತಂಡ ಗೆದ್ದು ಫೈನಲ್ ಪ್ರವೇಶಿಸಿತು.

ತೃತೀಯ ಸ್ಥಾನಕ್ಕೆ ನಡೆದ ಪಂದ್ಯದಲ್ಲಿ ಪಾಣತ್ತಲೆ ಎ ತಂಡ ನಂಗಾರು ತಂಡವನ್ನು ೧-೦ ಗೋಲುಗಳಿಂದ ಸೋಲಿಸಿ ತೃತೀಯ ಸ್ಥಾನ ಪಡೆಯಿತು.

ಹಾಗೂ ನಂಗಾರು ತಂಡ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು.

ಪಂದ್ಯಾವಳಿಯ ಅತ್ಯುತ್ತಮ ತಂಡವಾಗಿ ಬೊಳ್ಳೂರು, ಬೆಸ್ಟ್ ಅಸಿಸ್ಟ್ ಆಟಗಾರನಾಗಿ ಪಾಣತ್ತಲೆ ತಂಡದ ಮಧು, ಟಾಪ್ ಸ್ಕೋರರ್ ಆಗಿ ವಿಕ್ರಮ್ ಪಾಣತ್ತಲೆ, ಬೆಸ್ಟ್ ಡಿಫೆಂಡರ್ ನಂಗಾರು ತಂಡದ ಅಭಿಷೇಕ್, ಬೆಸ್ಟ್ ಸ್ಕೋರರ್ ಆಗಿ ಬಡುವಂಡ್ರ ತಂಡದ ನಾಯಕ ಸುಜಯ್, ಸ್ಟೆöÊಲಿಶ್ಟ್ ಆಟಗಾರನಾಗಿ ಬೊಳ್ಳೂರು ತಂಡದ ರೋಶನ್, ಪ್ಲೇಯರ್ ಆಫ್ ದಿ ಟೂರ್ನಮೆಂಟ್ ಆಗಿ ಬಡುವಂಡ್ರ ತಂಡದ ನಾಯಕ ಸುಜಯ್, ಬೆಸ್ಟ್ ಗೋಲ್‌ಕೀಪರ್ ಮುಕ್ಕಾಟಿ ತಂಡದ ಯಶ್ವನ್, ಬೆಸ್ಟ್ ಸ್ಟೆçöÊಕರ್ ವಿಕ್ರಮ್ ಪಾಣತ್ತಲೆ, ಬೆಸ್ಟ್ ಸೀನಿಯರ್ ಆಟಗಾರ ಬೊಳ್ತಾಜಿ ತಂಡದ ನಂದ, ಶಿಸ್ತಿನ ಆಟಗಾರ ನೂಜಿಬೈಲು ತಂಡದ ತಿಲಕ್, ಬೆಸ್ಟ್ ಮಿಡ್ ಫೀಲ್ಡರ್ ಆಗಿ ದಿಲೀಪ್ ಮುಕ್ಕಾಟಿ, ಫಿಟ್ನೆಸ್ ಆಟಗಾರನಾಗಿ ಕೊಳಂಬೆ ತಂಡದ ಗಿರೀಶ್, ಉದಯೋನ್ಮುಖ ಆಟಗಾರನಾಗಿ ಮರದಾಳು ತಂಡದ ಯುಗನ್ ಹಾಗೂ ಮುಕ್ಕಾಟಿ ತಂಡದ ಅಖುಲ್ ಪಡೆದುಕೊಂಡರು.

ಮ್ಯಾರಿಡ್ ತಂಡಕ್ಕೆ ಗೆಲುವು

ಚೇರಳ ಗೌಡ ಸಂಘ ಹಾಗೂ ಯುವ ಬಿಗ್ರೇಡ್ ನಲ್ಲಿರುವ ಮಹಿಳೆಯರಿಗೆ ಚೆಟ್ಟಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಲ್ಲಾರಂಡ ಮಣಿ ಉತ್ತಪ್ಪನವರು ಫುಟ್ಬಾಲ್ ಪಂದ್ಯಾಟವನ್ನು ಆಯೋಜಿಸಿದ್ದರು.

ಈ ಪಂದ್ಯದಲ್ಲಿ ಮ್ಯಾರಿಡ್ ತಂಡ ಪೆನಾಲ್ಟಿ ಶೂಟೌಟ್‌ನಲ್ಲಿ ೩-೧ ಗೋಲುಗಳ ಅಂತರದಿAದ ಅನ್ ಮ್ಯಾರಿಡ್ ತಂಡವನ್ನು ಮಣಿಸಿ ಗೆಲುವು ಸಾಧಿಸಿತು.

ಯುವ ಬಿಗ್ರೇಡ್ ತಂಡಕ್ಕೆ ಗೆಲುವು

ಚೆಟ್ಟಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಹಾಗೂ ಶಕ್ತಿ ಕೇಂದ್ರದ ಬಲ್ಲಾರಂಡ ಕಂಠಿ ಕಾರ್ಯಪ್ಪ ಚೇರಳ ಗೌಡ ಸಂಘ ಯುವ ಬಿಗ್ರೇಡ್ ಚೆಟ್ಟಳ್ಳಿ ಸದಸ್ಯರ ನಡುವೆ ಕಾಲ್ಚೆಂಡು ಪಂದ್ಯಾಟವನ್ನು ಆಯೋಜಿಸಿದ್ದರು. ಈ ಪಂದ್ಯದಲ್ಲಿ ಯುವ ಬ್ರಿಗೇಡ್ ತಂಡ ಗೆಲುವು ಸಾಧಿಸಿತು. ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಚೇರಳ ಗೌಡ ಸಂಘದ ಅಧ್ಯಕ್ಷ ಅಯ್ಯಂಡ್ರ ರಾಘವಯ್ಯ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಕೊಡಗು ಗೌಡ ಒಕ್ಕೂಟದ ಅಧ್ಯಕ್ಷ ಸೂರ್ತಲೆ ಸೋಮಣ್ಣ, ಕೊಡಗು ಗೌಡ ಸಮಾಜದ ಅಧ್ಯಕ್ಷ ಪೇರಿಯನ ಜಯಾನಂದ, ಉದ್ಯಮಿ ಪೊನ್ನಚ್ಚನ ಮಧು, ಚೇರಳ ಗೌಡ ಸಂಘದ ಖಜಾಂಚಿ ಮುಕ್ಕಾಟಿ ಪಳಂಗಪ್ಪ, ಕಾರ್ಯದರ್ಶಿ ಆಜೀರ ಧನಂಜಯ, ಉಪಾಧ್ಯಕ್ಷ ಹೊಸಮನೆ ಪೂವಯ್ಯ ಹಾಗೂ ಇನ್ನಿತರರು ಇದ್ದರು. ಚೇರಳ ಗೌಡ ಸಂಘ ಕೋಶಾಧಿಕಾರಿ ಹಾಗೂ ಯುವ ಬ್ರಿಗೇಡ್ ಕಾರ್ಯದರ್ಶಿ ಪೇರಿಯನ ಉದಯ ಸ್ವಾಗತಿಸಿದರು.

ಆರ್ಜೆ ತ್ರಿಶೂಲ್ ಕಾರ್ಯಕ್ರಮ ನಿರೂಪಿಸಿದರು. ಪಂದ್ಯಾವಳಿಯ ತೀರ್ಪುಗಾರರಾಗಿ ಇಬ್ರಾಹಿಂ ಸುಂಟಿಕೊಪ್ಪ ಹಾಗೂ ದರ್ಶನ್ ಮರಗೋಡು ಕಾರ್ಯನಿರ್ವಹಿಸಿದರು. - ಕೆ.ಎಂ ಇಸ್ಮಾಯಿಲ್ ಕಂಡಕರೆ