ಮಡಿಕೇರಿ, ಮಾ. ೨೯: ಕೊಡವ ಜನಾಂಗ ಹಾಗೂ ಜಮ್ಮಾಹಿಡುವಳಿ ದಾರರಿಗೆ ಕೋವಿ ವಿನಾಯಿತಿ ಹಕ್ಕು ವಿಚಾರಕ್ಕೆ ಸಂಬAಧಿಸಿದAತೆ ಈ ಹಿಂದೆ ರಾಜ್ಯ ಉಚ್ಚ ನ್ಯಾಯಾಲಯ ನೀಡಿರುವ ತೀರ್ಪು ಹಾಗೂ ಕೇಂದ್ರ ಗೃಹ ಸಚಿವಾಲಯದ ಮೂಲಕ ಹೊರಡಿಸಲಾಗಿರುವ ಆದೇಶವನ್ನು ಪ್ರಶ್ನಿಸಿ ನಿವೃತ್ತ ಕ್ಯಾಪ್ಟನ್ ಯಾಲದಾಳು ಕೆ. ಚೇತನ್ ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ.

ನ್ಯಾಯಾಲಯ ಈ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಂಡಿದ್ದು, ಇಂದು ಪರಿಶೀಲನೆಗೆ ಬಂದಿದೆ. ಈ ಬಗ್ಗೆ ಪ್ರತಿವಾದಿಗಳಿಗೆ ನೋಟೀಸ್ ಜಾರಿಗೊಳಿಸಲು ಸರ್ವೋಚ್ಚ ನ್ಯಾಯಾಲಯ ಸೂಚನೆಯನ್ನು ನೀಡಿದೆ. ಸುಪ್ರೀಂಕೋರ್ಟ್ನ ಮುಖ್ಯ ನ್ಯಾಯಾಧೀಶರಾದ ಎನ್.ವಿ. ರಮಣ, ಜಸ್ಟೀಸ್ ಕೃಷ್ಣಮೂರ್ತಿ ಹಾಗೂ ಜಸ್ಟೀಸ್ ಹಿಮಕೊಹ್ಲಿ ಅವರುಗಳ ಮುಂದೆ ಈ ಅರ್ಜಿ ವಿಚಾರಣೆಗೆ ಬಂದಿದೆ. ಅರ್ಜಿದಾರರಾದ ಚೇತನ್ ಪರ ಸುಪ್ರೀಂಕೋರ್ಟ್ ವಕೀಲರು ಗಳಾದ ಜಯಂತ್ ಮೆಹ್ತಾ, ಅನುಪಮ್ ಸಿಂಹ, ಅವಿನಾಶ್ ಶರ್ಮ ಹಾಗೂ ಅಪೂರ್ವ್ ಜಾ ವಕಾಲತ್ತು ವಹಿಸಿದ್ದಾರೆ.

ಕೋವಿ ಹಕ್ಕು ವಿನಾಯಿತಿ ಕುರಿತಂತೆ ಈ ಹಿಂದೆ ಚೇತನ್ ದಾವೆ ಹೂಡಿದ್ದರು. ಇದರ ವಿಚಾರಣೆ ಹಾಗೂ ನ್ಯಾಯಾಲಯದ ಸೂಚನೆಯಂತೆ ಪ್ರಸ್ತುತ ಇರುವ ವಿನಾಯಿತಿ ಹಕ್ಕನ್ನು ೨೦೨೯ರ ತನಕ ಯಥಾ ಸ್ಥಿತಿಯಲ್ಲಿ ಮುಂದುವರಿಸು ವಂತೆ ಕೇಂದ್ರ ಗೃಹ ಸಚಿವಾಲಯ ಆದೇಶ ಹೊರಡಿಸಿತ್ತು. ಈ ಆದೇಶವನ್ನು ಮತ್ತೆ ಪ್ರಶ್ನಿಸಿ ಚೇತನ್ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಕೆಲವು ತಿಂಗಳ ಹಿಂದೆ ರಾಜ್ಯ ಉಚ್ಚನ್ಯಾಯಾಲಯದ ಮುಖ್ಯ

(ಮೊದಲ ಪುಟದಿಂದ) ನ್ಯಾಯಾಧೀಶರನ್ನು ಒಳಗೊಂಡ ಪೀಠ ಈ ಬಗ್ಗೆ ತೀರ್ಪು ಪ್ರಕಟಿಸಿದ್ದ ಈ ಹಿಂದಿನ ತೀರ್ಮಾನವನ್ನು ಎತ್ತಿ ಹಿಡಿದಿತ್ತು.

ಇದೀಗ ಇದರ ವಿರುದ್ಧವೂ ಪ್ರಶ್ನಿಸಿ ಚೇತನ್ ಸುಪ್ರೀಂಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಇದು ಪ್ರಸ್ತುತ ವಿಚಾರಣೆಗೆ ಬಂದಿದ್ದು, ದೂರುದಾರರ ಅರ್ಜಿಯಂತೆ ಪ್ರತಿವಾದಿಗಳಿಗೆ ನೋಟೀಸ್ ಜಾರಿಗೊಳಿಸಲು ಸೂಚನೆ ನೀಡಿದೆ. ಪ್ರತಿವಾದಿಗಳನ್ನಾಗಿ ಯೂನಿಯನ್ ಆಫ್ ಇಂಡಿಯಾ, ರಾಜ್ಯ ಸರಕಾರ, ಯುಕೋ, ಸಿಎನ್‌ಸಿ, ಕೊಡವ ಸಮಾಜ ಬೆಂಗಳೂರ್, ಫೆಡರೇಷನ್ ಆಫ್ ಕೊಡವ ಸಮಾಜ, ಅಖಿಲಕೊಡವ ಸಮಾಜ, ಫೆಡರೇಷನ್ ಆಫ್ ಗೌಡ ಸಮಾಜ, ಕೊಡಗು ಹೆಗ್ಗಡೆ ಸಮಾಜ, ಜಿಲ್ಲಾ ಸಣ್ಣ ಬೆಳೆಗಾರರ ಸಂಘ, ಕೊಡವ ಮುಸ್ಲಿಂ ಅಸೋಸಿಯೇಷನ್, ಜಿಲ್ಲಾ ಒಕ್ಕಲಿಗರ ಸಂಘ, ಕಾವೇರಿ ಸೇನೆ, ಕೆಂಬಟ್ಟಿ ಸಮಾಜ, ಕುಡಿಯ ಸಮಾಜ, ಬೂಣೆಪಟ್ಟ ಸಮಾಜ, ಕೋಲಯ ಸಮಾಜ, ಮಲೆಯ ಸಮಾಜ, ಕೊಡಗು ಸವಿತಾ ಸಮಾಜ, ಕೆಂಬಟ್ಟಿ ಸಮಾಜ, ಐರಿ ಸಮಾಜ, ಕೊಯವ ಸಮಾಜ, ಕಣಿಯ ಸಮಾಜ, ಪಣಿಕ ಸಮಾಜ, ಕೊಡಗು ನಾಯರ್ ಸಮಾಜ, ಕೊಡಗು ಬಣ್ಣ ಸಮಾಜದ ಪ್ರಮುಖರು ( ಈ ಹಿಂದೆ ಇಂಪ್ಲೀಡ್ ಆಗಿದ್ದವರು) ಸೇರಿದಂತೆ ಒಂದೆರಡು ವೈಯಕ್ತಿಕ ಅರ್ಜಿದಾರರನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿದೆ.

ಈ ವಿಚಾರವಾಗಿ ಪ್ರತಿಕ್ರಿಯಿಸಿರುವ ಬೆಂಗಳೂರಿನ ವಕೀಲ ಮಲ್ಲೇಂಗಡ ಬಿ. ಗಣಪತಿ ಅವರು ಈ ಹಿಂದೆ ಬೆಂಗಳೂರು ಕೊಡವ ಸಮಾಜ ಹಾಗೂ ಫೆಡರೇಷನ್ ಆಫ್ ಕೊಡವ ಸಮಾಜದ ಮೂಲಕ ಯಶಸ್ವಿ ಕಾನೂನು ಹೋರಾಟ ನಡೆಸಲಾಗಿದೆ. ಇದೀಗ ಮತ್ತೆ ಇದು ಸುಪ್ರೀಂ ಕೋರ್ಟ್ನಲ್ಲಿ ವಿಚಾರಣೆಗೆ ಬರುವ ಸಂದರ್ಭವೂ ವಕೀಲರ ತಂಡ ಕಾನೂನು ಹೋರಾಟ ನಡೆಸಲಿದೆ ಎಂದು ತಿಳಿಸಿದ್ದಾರೆ.