ಶನಿವಾರಸಂತೆ, ಮಾ. ೨೯: ಸಮಾಜದಲ್ಲಿ ಒಗ್ಗಟ್ಟು ಅತಿಮುಖ್ಯವಾಗಿದ್ದು, ಅದರಿಂದ ಸಾಮರಸ್ಯ ಸಾಧಿಸಬಹುದಾಗಿದೆ ಎಂದು ಕೊಡ್ಲಿಪೇಟೆ ಕಿರಿಕೊಡ್ಲಿ ಮಠಾಧೀಶ ಸದಾಶಿವ ಸ್ವಾಮೀಜಿ ಅಭಿಪ್ರಾಯಪಟ್ಟರು.
ಸಮೀಪದ ತಪೋವನ ಕ್ಷೇತ್ರ ಮನೆಹಳ್ಳಿ ಮಠದಲ್ಲಿ ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ಜಿಲ್ಲಾ ಘಟಕಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ರಾಜ್ಯದಲ್ಲಿ ಹಲವು ಸಂಘಟನೆಗಳು ವೀರಶೈವ ಲಿಂಗಾಯತ ಸಮಾಜದ ಅಭಿವೃದ್ಧಿಗಾಗಿ ಶ್ರಮಿಸುತ್ತಿವೆ. ಅತ್ಯಂತ ಕಡಿಮೆ ಅವಧಿಯಲ್ಲಿ ಈ ವೇದಿಕೆ ರಾಷ್ಟç ಹಾಗೂ ಅಂರ್ರಾಷ್ಟಿçÃಯ ಘಟಕಗಳನ್ನು ಹೊಂದಿರುವುದು ಅಭಿನಂದನಾರ್ಹ ಎಂದರು.
ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ರಾಷ್ಟಿçÃಯ ಅಧ್ಯಕ್ಷ ಪ್ರದೀಪ್ ಕಂಕನಾಡಿ ಮಾತನಾಡಿ, ಸಂಘಟನೆಯಿAದ ಸಮಾಜ ಬಲಿಷ್ಠವಾಗುತ್ತದೆ. ವೇದಿಕೆ ಆರಂಭವಾದ ಕೆಲವೇ ವರ್ಷಗಳಲ್ಲಿ ೪ ಲಕ್ಷ ಸದಸ್ಯರನ್ನು ಹೊಂದಿದ್ದು, ವಿದೇಶದಲ್ಲೂ ಸಂಘಟನೆ ರಚನೆಯಾಗಿದೆ. ಸಮಾಜದ ಬಡವರು, ಅಸಹಾಯಕರ ಏಳಿಗೆಗಾಗಿ ದುಡಿಯಬೇಕು. ಕಳೆದ ೨ ವರ್ಷಗಳಿಂದ ರಾಜ್ಯ ಮತ್ತು ರಾಷ್ಟçಮಟ್ಟದಲ್ಲಿ ವೀರಭದ್ರ ಜಯಂತಿಯನ್ನು ಆಚರಿಸಿಕೊಂಡು ಬರುತ್ತಿದ್ದು, ಉತ್ತಮ ಸ್ಪಂದನ ದೊರೆತಿದೆ. ಹಂಪೆಯ ನದಿ ತಟದಲ್ಲಿ ವೀರಭದ್ರ ಸ್ವಾಮಿಯ ೧೦೮ ಅಡಿ ವಿಗ್ರಹವನ್ನು ಪ್ರತಿಷ್ಠಾಪಿಸಲು ಉದ್ದೇಶಿಸಲಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಮನೆಹಳ್ಳಿ ಮಠಾಧೀಶ ಮಹಾಂತ ಶಿವಲಿಂಗ ಸ್ವಾಮೀಜಿ ಮಾತನಾಡಿ, ಸಂಘಟನೆಗಳನ್ನು ಹುಟ್ಟು ಹಾಕುವುದು ಮುಖ್ಯವಲ್ಲ. ಅವುಗಳು ಸಮಾಜದ ಅಭಿವೃದ್ಧಿಗಾಗಿ ಶ್ರಮಿಸಬೇಕು. ಹೆಸರಿಗಾಗಿ ಜವಾಬ್ದಾರಿ ವಹಿಸಿಕೊಳ್ಳದೇ ಸಮಾಜದ ಏಳಿಗೆಗಾಗಿ ದುಡಿಯುವ ಮನಸ್ಸಿದ್ದರಷ್ಟೇ ಮುಂದೆ ಬನ್ನಿ. ಇಂದಿನ ಮಕ್ಕಳಲ್ಲಿ ಧರ್ಮದ ಆಚಾರ-ವಿಚಾರಗಳನ್ನು ಬಿತ್ತಿ ಬೆಳೆಸುವ ಹಿನ್ನೆಲೆಯಲ್ಲಿ ವೇದಿಕೆ ಕಾರ್ಯಪ್ರವೃತ್ತವಾಗಲಿ ಎಂದು ಕರೆ ನೀಡಿದರು.
ಸಂಘಟನಾ ಕಾರ್ಯದರ್ಶಿ ಎಸ್. ಮಹೇಶ್, ಜಿಲ್ಲಾ ಘಟಕದ ನಿಯೋಜಿತ ಅಧ್ಯಕ್ಷ ಎ.ಎಸ್. ಮಲ್ಲೇಶ್, ಮಹಿಳಾ ಘಟಕದ ಗೌರವಾಧ್ಯಕ್ಷೆ ಭುವನೇಶ್ವರಿ, ಅಧ್ಯಕ್ಷೆ ಉಷಾರಾಣಿ ಗುರುರಾಜ್, ತಾಲೂಕು ಘಟಕದ ಅಧ್ಯಕ್ಷ ಜಯರಾಜ್, ಇತರ ಪದಾಧಿಕಾರಿಗಳು ಹಾಜರಿದ್ದರು.