*ಗೋಣಿಕೊಪ್ಪ, ಮಾ. ೨೭: ಯುಗಾದಿ ಹಬ್ಬದ ಪ್ರಯುಕ್ತ ಗೋಣಿಕೊಪ್ಪ ಶ್ರೀ ಉಮಾಮಹೇಶ್ವರಿ ದೇವಸ್ಥಾನದಲ್ಲಿ ಪಾರ್ವತಿ ದೇವಿಯ ವಾರ್ಷಿಕೋತ್ಸವ ನಡೆಯಲಿದೆ ಎಂದು ದೇವಸ್ಥಾನದ ಅಧ್ಯಕ್ಷ ಮನೆಯಪಂಡ ಮೇಜರ್ ಬೋಪಣ್ಣ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಏಪ್ರಿಲ್ ೨ ರಿಂದ ೫ ರವರೆಗೆ ಪಾರ್ವತಿ ದೇವಿಯ ಉತ್ಸವ ನಡೆಯಲಿದೆ. ಏ. ೨ ರಂದು ಬೆಳಿಗ್ಗೆ ೭.೩೦ಕ್ಕೆ ಸಾಮೂಹಿಕ ಪ್ರಾರ್ಥನೆ, ಗಣಪತಿ ಹೋಮ, ಮಹಾಮಂಗಳಾರತಿ, ರಾತ್ರಿ ೭ಕ್ಕೆ ದೀಪರಾಧನೆ, ೭.೩೦ಕ್ಕೆ ೫ ಸುತ್ತು ತೂಚಂಬಲಿ ನಂತರ ಮಹಾಮಂಗಳಾರತಿ, ಏ. ೩ ರಂದು ೫ ಗಂಟೆಗೆ ಇರುಬಳಕು, ನಂತರ ದುರ್ಗಾಹೋಮ, ಮಹಾಪೂಜೆ, ಅನ್ನದಾನ ಕಾರ್ಯಕ್ರಮಗಳು ನಡೆಯಲಿವೆೆ.
ರಾತ್ರಿ ೭ ಗಂಟೆಗೆ ದೇವರ ನೃತ್ಯ ಪ್ರದಕ್ಷಿಣೆ, ಸಾಮೂಹಿಕ ವಸಂತ ಪೂಜೆ, ೪ರ ಸೋಮವಾರದಂದು ಬೆಳಿಗ್ಗೆ ೧೦ ಗಂಟೆಗೆ ಸಾಮೂಹಿಕ ಪಂಚಾಮೃತಾಭಿಷೇಕ, ಮಳೆಗಾಗಿ ವಿಶೇಷ ಪ್ರಾರ್ಥನೆ, ಮಧ್ಯಾಹ್ನ ಮಹಾಮಂಗಳಾರತಿ, ಅನ್ನದಾನ, ೭ ಗಂಟೆಗೆ ದೇವಸ್ಥಾನದ ಕೆರೆಯಲ್ಲಿ ಅವಬೃತ ಸ್ನಾನ, ೧೧ ಸುತ್ತು ದೇವಿಯ ನೃತ್ಯ ಪ್ರದಕ್ಷಿಣೆ, ೫ ರಂದು ಕಲಶಾಭಿಷೇಕ, ಮಹಾಪೂಜೆ, ಮಂತ್ರಾಕ್ಷತೆ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮಂಡಳಿಯ ಪದಾಧಿಕಾರಿಗಳಾದ ಜಪ್ಪೆಕೊಡಿ ರಾಜ ಉತ್ತಪ್ಪ, ವಿ.ಟಿ. ವಾಸು, ಕೊಪ್ಪಿರ ಸನ್ನಿ ಸೋಮಯ್ಯ, ಶೋಬಿತ್. ಪಿ.ವಿ, ಪ್ರಮೋದ್ ಗಣಪತಿ, ಕಾಡ್ಯಮಾಡ ಚೇತನ್, ವ್ಯವಸ್ಥಾಪಕ ಮಧು ಉಪಸ್ಥಿತರಿದ್ದರು.