ಗೋಣಿಕೊಪ್ಪ ವರದಿ, ಮಾ. ೨೭: ಹಾಕಿ ಇಂಡಿಯಾ ವತಿಯಿಂದ ಆಂಧ್ರಪ್ರದೇಶದ ಕಾಕಿನಾಡದಲ್ಲಿ ನಡೆಯುತ್ತಿರುವ ೧೨ನೇ ವರ್ಷದ ಕಿರಿಯ ಬಾಲಕಿಯರ ರಾಷ್ಟçಮಟ್ಟದ ಹಾಕಿ ಟೂರ್ನಿಯಲ್ಲಿ ಕೊಡಗು ಆಟಗಾರರನ್ನು ಒಳಗೊಂಡಿರುವ ಕರ್ನಾಟಕ ರಾಜ್ಯ ತಂಡ ೨ನೇ ಗೆಲುವು ದಾಖಲಿಸಿದೆ.

ಭಾನುವಾರ ಆಂಧ್ರಪ್ರದೇಶ ವಿರುದ್ಧದ ಪಂದ್ಯದಲ್ಲಿ ೩-೨ ಗೋಲುಗಳ ಗೆಲುವು ದಾಖಲಿಸಿತು. ೩೯ನೇ ನಿಮಿಷದಲ್ಲಿ ಕಾವೇರಿ ಆರ್. ಲೆಂಕೆಣ್ಣವರ್, ೪೨ರಲ್ಲಿ ಬಿ. ಈ. ಜೀವಿತಾ, ೫೪ರಲ್ಲಿ ಪಾಂಡAಡ ದೇಚಮ್ಮ ಗಣಪತಿ ತಲಾ ಒಂದೊAದು ಗೋಲು ಹೊಡೆದರು. ಕೊನೆ ನಿಮಿಷದಲ್ಲಿ ದೇಚಮ್ಮ ಬಾರಿಸಿದ ಗೋಲು ಗೆಲುವು ತಂದುಕೊಟ್ಟಿತು.

ಕೊಡಗಿನ ೧೮ ಆಟಗಾರರು ತಂಡದಲ್ಲಿದ್ದು, ಕೋಮಲ ತರಬೇತುದಾರರಾಗಿದ್ದಾರೆ.