ಸಿದ್ದಾಪುರ, ಮಾ. ೨೭: ಬಿಜೆಪಿ ಅಧಿಕಾರಕ್ಕೆ ಬಂದಾಗಿನಿAದಲೂ ಅಲ್ಪಸಂಖ್ಯಾತರು, ಹಿಂದುಳಿದವರು ಹಾಗೂ ದಲಿತರನ್ನುಅಭಿವೃದ್ಧಿ ವಿಚಾರದಲ್ಲಿ ಕಡೆಗಣಿಸಲಾಗುತ್ತಿದ್ದು, ವಿರೋಧ ಪಕ್ಷದ ಸ್ಥಾನದಲ್ಲಿರುವ ಕಾಂಗ್ರೆಸ್ ಈ ಬಗ್ಗೆ ಪ್ರಶ್ನಿಸದೆ ಮೌನ ವಹಿಸಿರುವುದಕ್ಕೆ ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಪಂಚಾಯಿತಿ ಜನಪ್ರತಿನಿಧಿಗಳ ಒಕ್ಕೂಟ ಖಂಡಿಸಿದೆ.
ಸಿದ್ದಾಪುರ ಸಮೀಪದ ಕೊಮ್ಮೆತೋಡು ಶಾದಿಮಹಲ್ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ವಿವಿಧ ಪಂಚಾಯಿತಿ ವ್ಯಾಪ್ತಿಯ ೪೦ಕ್ಕೂ ಹೆಚ್ಚು ಪಂಚಾಯಿತಿ ಜನ ಪ್ರತಿನಿಧಿಗಳು ಹಾಗೂ ಕಾಂಗ್ರೆಸ್ ಪಕ್ಷದ ಮೂರು ಬ್ಲಾಕ್ ಅಧ್ಯಕ್ಷರುಗಳು ಒಕ್ಕೂಟದ ಸಭೆಯಲ್ಲಿ ಭಾಗವಹಿಸಿ ಕಾಂಗ್ರೆಸ್ ಹಾಗೂ ಬಿಜೆಪಿಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ವೀರಾಜಪೇಟೆ ವಿಧಾನಸಭೆ ಕ್ಷೇತ್ರದ ಗ್ರಾಮ ಪಂಚಾಯಿತಿ ಜನಪ್ರತಿನಿಧಿಗಳ ಒಕ್ಕೂಟದ ಅಧ್ಯಕ್ಷ ಹನೀಫ್ ಮಾತನಾಡಿ. ಬಿಜೆಪಿ ಸರಕಾರದಿಂದ ಜನವಿರೋಧಿ ನೀತಿಯೊಂದಿಗೆ ಜಾತಿರಾಜಕಾರಣ ಮಾಡುತ್ತಿದ್ದು, ಅಲ್ಪಸಂಖ್ಯಾತರು, ಹಿಂದುಳಿದವರು ಹಾಗೂ ದಲಿತ ಸಮುದಾಯ ಹೆಚ್ಚಾಗಿ ವಾಸಿಸುವ ಗ್ರಾಮಗಳಿಗೆ ಯಾವುದೇ ಸೌಲಭ್ಯಗಳನ್ನು ನೀಡದೆ ವಂಚಿಸುತ್ತಿದೆ.
ನೂರಾರು ಮಂದಿ ವಾಸಿಸುವ ಗ್ರಾಮಗಳಿಗೆ ಬೆರಳೆಣಿಕೆಯ ಮನೆಗಳನ್ನು ನೀಡುತ್ತಿದ್ದು ವಸತಿ ಯೋಜನೆಗಳಲ್ಲೂ ಅನ್ಯಾಯ ಮಾಡುತ್ತಿದ್ದಾರೆ. ಅಭಿವೃದ್ಧಿ ವಿಚಾರದಲ್ಲಿ ಎಲ್ಲಾ ರೀತಿಯಲ್ಲೂ ಕಡೆಗಣಿಸಲಾಗುತ್ತಿದ್ದು, ವಿರೋಧ ಪಕ್ಷ ಸ್ಥಾನದಲ್ಲಿರುವ ಕಾಂಗ್ರೆಸ್ ಮುಖಂಡರುಗಳು ಗಂಭೀರವಾಗಿ ಪರಿಗಣಿಸದೆ ಅಸಹಾಯಕತೆ ತೋರುವ ಮೂಲಕ ಮೌನವಹಿಸಿದ್ದಾರೆ ಎಂದು ಆರೋಪಿಸಿದ ಅವರು ಅಲ್ಪಸಂಖ್ಯಾತರರು ಹಿಂದುಳಿದವರ ಮೇಲೆ ಸಂಘ ಪರಿವಾರ ಹಾಗೂ ಬಿಜೆಪಿ ನಿರಂತರ ದೌರ್ಜನ್ಯ ಎಸಗುತ್ತಿದ್ದರೂ ಕಾಂಗ್ರೆಸ್ ನಾಯಕರುಗಳು ತಮಗೆ ಸಂಬAಧವಿಲ್ಲದ ರೀತಿಯಲ್ಲಿ ಮೌನವಹಿಸಿದೆ.
ಚುನಾವಣೆ ಸಂದರ್ಭದಲ್ಲಿ ಮಾತ್ರ ಅಲ್ಪಸಂಖ್ಯಾತರು ಹಿಂದುಳಿದವರು ನಮ್ಮೊಂದಿಗಿದ್ದಾರೆ ಎಂದು ಬಿಂಬಿಸಿ ನಂತರ ಮೂಲೆಗುಂಪು ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಕಾಂಗ್ರೆಸ್ ಪಕ್ಷದ ಸಿದ್ಧಾಂತ ವಿರುದ್ಧವಾಗಿ ನಡೆದುಕೊಳ್ಳುವ ಮುಖಂಡರುಗಳ ವಿರುದ್ಧ ಎಐಸಿಸಿ ಹಾಗೂ ಕೆಪಿಸಿಸಿಗೆ ದೂರು ನೀಡಲಾಗುವುದು ಎಂದು ಎಚ್ಚರಿಸಿದರು.
ಒಕ್ಕೂಟದ ಸದಸ್ಯ ಅಬ್ದುಲ್ ರೆಹಮಾನ್ ಅಂದಾಯಿ ಮಾತನಾಡಿ, ಅಲ್ಪಸಂಖ್ಯಾತರ ವ್ಯಾಪಾರ ವಹಿವಾಟುಗಳಿಗೆ ತಡೆಯೊಡ್ಡುವ ಮೂಲಕ ಸಂಘ ಪರಿವಾರ ಹಾಗೂ ಬಿಜೆಪಿ ಅಶಾಂತಿ ಸೃಷ್ಟಿಸಲು ಮುಂದಾಗಿದೆ. ಇದುವರೆಗೂ ಕಾಂಗ್ರೆಸ್ನಿAದ ಯಾವುದೇ ಉನ್ನತ ಸ್ಥಾನಮಾನಗಳು ಅಲ್ಪಸಂಖ್ಯಾತರರು ಹಾಗೂ ಹಿಂದುಳಿದವರಿಗೆ ಸಿಕ್ಕಿಲ್ಲ ಇತ್ತೀಚಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷದ ಸಿದ್ಧಾಂತವನ್ನು ಒಂದು ವರ್ಗಕ್ಕೆ ಸೀಮಿತಗೊಳಿಸುತ್ತಿರುವ ನಾಯಕರುಗಳ ವಿರುದ್ಧ ಮುಂದಿನ ದಿನಗಳಲ್ಲಿ ಅಲ್ಪಸಂಖ್ಯಾತರರು ತಕ್ಕ ಪಾಠ ಕಲಿಸಲಿದ್ದಾರೆ ಎಂದರು.
ಈ ಸಂದರ್ಭ ಹಾಲಗುಂದ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸೀತಮ್ಮ, ಪಾಲಿಬೆಟ್ಟ ಗ್ರಾಮ ಪಂಚಾಯಿತಿ ಅಧ್ಯಕ್ಷೆ ನೇತ್ರಾ, ಅಲ್ಪಸಂಖ್ಯಾತ ಘಟಕದ ಬ್ಲಾಕ್ಕಾಂಗ್ರೆಸ್ ಅಧ್ಯಕ್ಷರುಗಳಾದ ಕೋಳುಮಂಡ ರಫೀಕ್, ವೀರಾಜಪೇಟೆ, ಅಲೀರಾ ರಶೀದ್ ಪೊನಂಪೇಟೆ, ಸುಬೀರ್ ನಾಪೊಕ್ಲು, ಡಿಸಿಸಿ ಸದಸ್ಯರಾದ ಅಬ್ದುಲ್ ಶುಕೂರ್, ಹ್ಯಾರಿಸ್, ಅಲ್ಪಸಂಖ್ಯಾತ ಮಹಿಳಾ ಘಟಕದ ಜಿಲ್ಲಾ ಉಪಾಧ್ಯಕ್ಷೆ ಅಲೀಮಾ, ಒಕ್ಕೂಟದ ಪ್ರಮುಖರಾದ ಮೊಹಮ್ಮದ್, ನಿಯಾಝ್, ಸುಬೀರ್, ಎಂ.ಬಿ. ಅಬ್ದುಲ್ ನಾಸರ್, ಎಚ್. ಕೆ.ವೆಂಕಟೇಶ್, ಪ್ರಸಾದ್, ಹಂಸ, ಮಹಮ್ಮದಾಲಿ, ಇಸ್ಮಾಯಿಲ್, ಅನಿತಾ, ಜುನೈದ್, ರಜಾಕ್, ಅಫ್ಸಲ್, ಬಸೀರ್, ಗಫೂರ್ ಸೇರಿದಂತೆ ನಲವತ್ತಕ್ಕೂ ಹೆಚ್ಚು ಮಂದಿ ಸದಸ್ಯರುಗಳು ಹಾಜರಿದ್ದರು.