ಸುಂಟಿಕೊಪ್ಪ, ಮಾ. ೨೭: ಸುಂಟಿಕೊಪ್ಪ ಗದ್ದೆಹಳ್ಳದ ಶ್ರೀ ಕೊಡಗಂಲ್ಲೂರ್ ಶ್ರೀ ಕುರಂಭ (ಭಗವತಿ) ದೇವಸ್ಥಾನದಲ್ಲಿ ತಾ. ೩೧ ಮತ್ತು ಏ. ೧ ರಂದು ವಿಶೇಷ ಪೂಜೆ ನಡೆಯಲಿದೆ.
೫೬ ವರ್ಷಗಳಿಂದ ಗದ್ದೆಹಳ್ಳದಲ್ಲಿ ನೆಲೆಗೊಂಡಿರುವ ಶ್ರೀ ಕೊಡಂಗಲ್ಲೂರ್ ಭದ್ರಕಾಳಿ ಶ್ರೀ ಕುರುಂಭ ಭಗವತಿ ದೇವಸ್ಥಾನದ ಮಹಾಪೂಜೆಯನ್ನು ತಾ. ೩೧ ರಂದು ಬೆಳಿಗ್ಗೆ ೬ ಗಂಟೆಗೆ ಗಣಪತಿ ಹೋಮ, ೬.೩೦ ಗಂಟೆಗೆ ಶ್ರೀ ಮುತ್ತಪ್ಪ ಪೈಂಗುತ್ತಿ, ಸಂಜೆ ೭ ಗಂಟೆಗೆ ಚಾಮುಂಡೇಶ್ವರಿ ದೇವಿ ಪೂಜೆ, ೭.೧೫ ಗಂಟೆಗೆ ಗುಳಿಗನ ಪೂಜೆ, ೭.೩೦ ಗಂಟೆಗೆ ಶ್ರೀ ಭದ್ರಕಾಳಿ ದೇವಿಗೆ ಅರ್ಚನೆ ನೈವೇದ್ಯ ಪೂಜೆ, ಸಂಜೆ ೮ ಗಂಟೆಗೆ ಶ್ರೀದೇವಿ ದರ್ಶನ, ೮.೧೫ ಗಂಟೆಗೆ ತಲಪುರಿ ಮೆರವಣಿಗೆ, ೮.೩೦ ಗಂಟೆಗೆ ವಸೂರಿ ಮಾಲೆ ದೇವರ ಬೆಳ್ಳಾಟಂ, ರಾತ್ರಿ ೯ ಗಂಟೆಯಿAದ ೧೦.೩೦ ಗಂಟೆಯವರೆಗೆ ದೇವಿ ದರ್ಶನ ನಂತರ ಮಹಾಮಂಗಳಾರತಿ, ಪ್ರಸಾದ ವಿನಿಯೋಗ ನಡೆಯಲಿದೆ.
ಏ. ೧ ರಂದು ೯ ಗಂಟೆಗೆ ದೇವಿಗೆ ಹರಕೆ ೧೦ ರಿಂದ ೧೧ ಗಂಟೆಯವರೆಗೆ ದೇವಿಗೆ ಅರ್ಪಣೆ ದೇವಾಲಯದಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನಡೆಯಲಿದೆ.