ವೀರಾಜಪೇಟೆ, ಮಾ. ೨೭: ಯಾಂತ್ರಿಕೃತ ಜೀವನದಲ್ಲಿ ಸಾಹಿತ್ಯ, ಸಂಸ್ಕöÈತಿಯ ಮೂಲಕ ಒಂದಿಷ್ಟು ಸ್ಪೂರ್ತಿಯನ್ನು ದೊರಕಿಸಿ ಕೊಡಬೇಕು, ಮುಖ್ಯವಾಗಿ ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳಲ್ಲಿ ಸಾಹಿತ್ಯಕ ಚಟುವಟಿಕೆಗಳನ್ನು ಪ್ರೋತ್ಸಾಹಿಸಬೇಕು ಎಂದು ಹಿರಿಯ ಸಾಹಿತಿ ವಿಜಯಾ ವಿಷ್ಣುಭಟ್ ಅಭಿಪ್ರಾಯಪಟ್ಟರು.
ವಿಜಯ ವಿಷ್ಣುಭಟ್ ಅವರ ನೇತೃತ್ವದಲ್ಲಿ ಕುಶಾಲನಗರದ ಸರಕಾರಿ ಪರಿವೀಕ್ಷಣಾ ಮಂದಿರದಲ್ಲಿ ನಡೆದ ಕರ್ನಾಟಕ ರಾಜ್ಯ ಲೇಖಕಿಯರ ಸಂಘದ ಕೊಡಗು ಶಾಖೆಯ ಲೇಖಕಿಯರ ಪ್ರಥಮ ಸಭೆ ಉದ್ಘಾಟಿಸಿ ಮಾತನಾಡಿದ ಅವರು ಸಾಹಿತ್ಯದಲ್ಲಿ ಸಕ್ರಿಯರಾಗಿರುವವರು ಜೀವನದಲ್ಲಿ ಏನನ್ನಾದರೂ ಸಾಧಿಸುವರು, ಮಕ್ಕಳಲ್ಲಿ ಸಾಹಿತ್ಯ ಅಭಿರುಚಿ ಹೆಚ್ಚಿಸುವ ನಿಟ್ಟಿನಲ್ಲಿ ಮಕ್ಕಳ ಆಸಕ್ತಿಯ ಅಭಿರುಚಿಯ ಕಲೆಗಳಿಗೆ ಪೋಷಕರು-ಶಿಕ್ಷಕರು ಪ್ರೋತ್ಸಾಹಿಸಬೇಕು ಎಂದರು.
ಇದೇ ಸಂದರ್ಭ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ರಾಜ್ಯ ಸಂಘದಿAದ ನಿಯೋಜಿತಗೊಂಡಿದ್ದ ಸಾಹಿತಿಗಳಾದ ವಿಜಯಾ ವಿಷ್ಣುಭಟ್ ಅಧ್ಯಕ್ಷರಾಗಿ, ಉಪಾಧ್ಯಕ್ಷರಾಗಿ ಮಂಡೇಪAಡ ಗೀತಾ ಮಂದಣ್ಣ, ಹಂಚೇಟ್ಟೀರ ಫ್ಯಾನ್ಸಿ ಮುತ್ತಣ್ಣ, ಪ್ರಧಾನ ಕಾರ್ಯದರ್ಶಿಯಾಗಿ ಶರ್ಮಿಳಾ ರಮೇಶ್, ಕಾರ್ಯದರ್ಶಿಯಾಗಿ ಉಳುವಂಗಡ ಕಾವೇರಿ ಉದಯ, ಖಜಾಂಚಿಯಾಗಿ ಮಾಲಾದೇವಿ, ನಿರ್ದೇಶಕರಾಗಿ ಕನ್ನಡ ಜಾಗೃತಿ ಸಮಿತಿ ಸದಸ್ಯೆ, ರಜಿತಾ ಕಾರ್ಯಪ್ಪ, ಸುನೀತಾ ಸಾಗರ್, ಲೇಖಕಿ ಉಷಾ ರಾಣಿ, ಜಯಲಕ್ಷಿö್ಮ, ರಾಣಿ ರವೀಂದ್ರ, ದೀಪಿಕಾ ಸುದರ್ಶನ್, ಡಿ. ಹೆಚ್. ಪುಷ್ಪ ಆಯ್ಕೆಯಾದರು. ಸಭೆಗೆ ಜಿಲ್ಲಾ ಕಸಾಪ ನಿಕಟಪೂರ್ವ ಅಧ್ಯಕ್ಷ ಲೋಕೇಶ್ ಸಾಗರ್ ಆಗಮಿಸಿ ಕೆಲವು ಸಲಹೆಗಳನ್ನು ನೀಡಿದರು.
ಸಭೆಯ ಬಳಿಕ ಕಿತ್ತೂರು ರಾಣಿ ಚೆನ್ನಮ್ಮ ಸನ್ಮಾನಕ್ಕೆ ಭಾಜನರಾದ ಉಳುವಂಗಡ ಕಾವೇರಿ ಉದಯ ಅವರನ್ನು ಸನ್ಮಾನಿಸಲಾಯಿತು. ಲೇಖಕಿಯರ ಸಂಘದಿAದ ಮಹಿಳಾ ದಿನಾಚರಣೆ ಅಂಗವಾಗಿ ಆಯೋಗಿಸಲಾಗಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಮಾಡಲಾಯಿತು.