ಕೂಡಿಗೆ, ಮಾ. ೨೭: ಸೋಮವಾರಪೇಟೆ ತಾಲೂಕು ಸಾಮಾಜಿಕ ಅರಣ್ಯ ಇಲಾಖೆಯ ವತಿಯಿಂದ ಕೃಷಿ ಅರಣ್ಯ ಉಪ ಅಭಿಯಾನದ ಅಡಿಯಲ್ಲಿ ರೈತರಿಗೆ ನೀಡುವ ಪ್ರೋತ್ಸಾಹ ಧನದ ಬಗ್ಗೆ ಮತ್ತು ಅರಣ್ಯದ ಬಗ್ಗೆ ಜಾಗೃತಿ ಮೂಡಿಸುವ ಮತ್ತು ಪರಿಸರ ಸಂರಕ್ಷಣೆ ಬಗ್ಗೆ ಬೀದಿ ನಾಟಕ ಕಾರ್ಯಕ್ರಮ ವಿಧ್ಯಾ ಸಾಗರ ಕಲಾ ತಂಡದ ವತಿಯಿಂದ ಕೂಡಿಗೆ, ಹೆಬ್ಬಾಲೆ, ಐಗೂರು, ಹುದುಗೂರು, ಯಡವನಾಡು ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿ ಅರಿವು ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಸೋಮವಾರಪೇಟೆ ತಾಲೂಕು ವಲಯ ಸಾಮಾಜಿಕ ಅರಣ್ಯಾಧಿಕಾರಿ ರವೀಂದ್ರ, ಕೂಡಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಂಗಳಾ ಪ್ರಕಾಶ್ ಉಪಾಧ್ಯಕ್ಷೆ ಮೋಹಿನಿ ತಮ್ಮಣೆಗೌಡ, ಸದಸ್ಯರಾದ ಟಿ.ಪಿ. ಹಮೀದ್, ಶಿವಕುಮಾರ್ ಅರುಣ್ ರಾವ್ ಚಂದ್ರು, ಅಭಿವೃದ್ಧಿ ಅಧಿಕಾರಿ ಅಯಿಷಾ, ಕಂದಾಯ ವಸೂಲಿಗಾರ ಅನಿಲ್, ಬಾಬು, ಹುದುಗೂರು ಸಾಮಾಜಿಕ ಅರಣ್ಯ ಉಪ ವಲಯ ಅಧಿಕಾರಿ ಖಾನ್, ಪ್ರೇಮಕುಮಾರ್, ಅರಣ್ಯ ಇಲಾಖೆಯ ಸಂಪನ್ಮೂಲ ವ್ಯಕ್ತಿ ಗೋವಿಂದರಾಜ್, ಸೇರಿದಂತೆ ಕಲಾ ತಂಡದ ಸದಸ್ಯರು ಹಾಜರಿದ್ದರು.