(ಕಾಯಪಂಡ ಶಶಿ ಸೋಮಯ್ಯ)
ಮಡಿಕೇರಿ, ಮಾ. ೨೭: ಕನೆಕ್ಟಿಂಗ್ ಕೊಡವಾಸ್ ಹೆಸರಿನ ಮೂಲಕ ಕಾರ್ಯನಿರ್ವಹಿಸುತ್ತಿರುವ ಸಂಘಟನೆಯ ಮೂಲಕ ವಿಶ್ವ ಕೊಡವ ಸಮ್ಮಿಲನ (ಗ್ಲೋಬಲ್ ಕೊಡವ ಸಮ್ಮಿಟ್) ಕಾರ್ಯ ಕ್ರಮವನ್ನು ಆಯೋಜಿಸುವ ನಿಟ್ಟಿನಲ್ಲಿ ಪ್ರಯತ್ನ ಆರಂಭಗೊAಡಿದೆ. ಕೊಡಗಿನಲ್ಲಿ ಮಾತ್ರವಲ್ಲದೆ ರಾಜ್ಯ, ರಾಷ್ಟçದ ವಿವಿಧೆಡೆಗಳಲ್ಲಿ ಹಾಗೂ ಪ್ರಪಂಚದ ನಾನಾ ರಾಷ್ಟçಗಳಲ್ಲಿ ನೆಲೆಸಿರುವ ಕೊಡವ ಜನಾಂಗ ದವರನ್ನು ಒಂದೆಡೆ ಬೆಸೆಯುವ ಚಿಂತನೆಯೊAದಿಗೆ ಈ ಪ್ರಯತ್ನಕ್ಕೆ ಕನೆಕ್ಟಿಂಗ್ ಕೊಡವಾಸ್ ಯುವ ತಂಡ ಮುಂದಾಗಿದೆ.
೨೦೧೭ನೇ ಇಸವಿಯಿಂದಲೇ ಈ ಕುರಿತ ರೂಪುರೇಷೆಗಳನ್ನು ಹಮ್ಮಿಕೊಳ್ಳಲಾಗಿದೆ. ಇದಕ್ಕೆ ಪೂರ್ವಸಿದ್ಧತೆಯ ಮಾದರಿಯಲ್ಲಿ ೨೦೨೧ರಲ್ಲಿ ಚಿಕ್ಕಮುಂಡೂರು ಗ್ರಾಮದಲ್ಲಿ ಅಪ್ಪಚ್ಚಕವಿ ವಿದ್ಯಾಸಂಸ್ಥೆಯಲ್ಲಿ ಕೋಯಿಮೆ-೨೦೨೧ ಎಂಬ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು. ಇದೀಗ ವಿಶ್ವ ಕೊಡವ ಸಮ್ಮಿಲನ ನಡೆಸುವ ನಿರ್ದಿಷ್ಟ ಸಮಯವನ್ನು ನಿಗದಿ ಮಾಡಲಾಗಿದೆ.
೨೦೨೩ರ ಡಿಸೆಂಬರ್‌ನಲ್ಲಿ ಕೊಡಗು ಜಿಲ್ಲಾ ಕೇಂದ್ರ ಮಡಿಕೇರಿ ಯಲ್ಲಿ ಕಾರ್ಯಕ್ರಮ ಆಯೋಜಿಸಲು ನಿರ್ಧರಿಸಲಾಗಿದೆ. ‘ಹೈಟೆಕ್’ ಮಾದರಿಯ ರೀತಿಯಲ್ಲಿ ಅರ್ಥಪೂರ್ಣ ಹಾಗೂ ಅರ್ಥಗರ್ಭಿತವಾಗಿ ಈ ಕಾರ್ಯಕ್ರಮ ನಡೆಸುವುದರೊಂದಿಗೆ ಇದು ಪ್ರಸ್ತುತ ಹತ್ತು ಹಲವಾರು ಸಮಸ್ಯೆಗಳನ್ನು ಎದುರಿಸುವಂತಾಗಿರುವ ಕೊಡವ ಜನಾಂಗಕ್ಕೆ ಮಹತ್ವವಾದ ತಿರುವನ್ನು ತಂದುಕೊಡಬೇಕು ಎಂಬ ಉದ್ದೇಶ ಆಯೋಜಕರದ್ದಾಗಿದೆ.
ಈ ನಿಟ್ಟಿನಲ್ಲಿ ಕೊಡವ ಜನಾಂಗದ ಮಾಹಿತಿ, ಆಚಾರ-ವಿಚಾರ, ಸಂಸ್ಕೃತಿ, ಪರಂಪರೆಗಳನ್ನು ಐತಿಹಾಸಿಕ ಹಿನ್ನೆಲೆ, ಪ್ರಸ್ತುತದ ಇತಿಹಾಸ ಈ ರೀತಿಯಾಗಿ ಎಲ್ಲಾ ಪ್ರಾಕಾರಗಳನ್ನು ಒಳಗೊಂಡAತೆ ಸಮಗ್ರವಾದ ವಿಚಾರಗಳನ್ನು ಒಂದೆಡೆ ಪ್ರತಿಬಿಂಬಿಸುವAತೆ ಮಾಡುವುದು, ರಾಜ್ಯ, ರಾಷ್ಟç ಹಾಗೂ ವಿದೇಶದ ಪ್ರಮುಖ ನೇತಾರರನ್ನು ಕರೆಸುವುದು ಹಾಗೂ ಎಲ್ಲೆಡೆ ಚದುರಿದಂತಿರುವ ಕೊಡವ ಜನಾಂಗದವರನ್ನು ಕುಟುಂಬ ಸಹಿತವಾಗಿ ಈ ಕಾರ್ಯಕ್ರಮಕ್ಕೆ ಬರುವಂತೆ ಮಾಡುವ ಕನಸಿನ ಕಾರ್ಯಕ್ರಮ ಇದಾಗಿದೆ.
ಪ್ರಸ್ತುತ ಜನಾಂಗದ ವಿಚಾರಕ್ಕೆ ಸಂಬAಧಿಸಿದAತೆ ವಿಭಿನ್ನ ನಿಲುವು-ಹೋರಾಟಗಳನ್ನು ನಡೆಸುತ್ತಿರುವವರನ್ನೂ ಒಂದೆಡೆ ಸೇರಿಸುವುದು ಈ ಮೂಲಕ ಜನ್ಮಭೂಮಿಯ ಉಳಿವು, ಆಚಾರ-ವಿಚಾರ, ಪದ್ಧತಿ-ಪರಂಪರೆಗಳನ್ನು ಉಳಿಸಿ-ಬೆಳೆಸುವ ನಿಟ್ಟಿನಲ್ಲಿ ಈ ವಿಶ್ವ ಕೊಡವ ಸಮ್ಮಿಲನ ಮಹತ್ವದ ಮೈಲಿಗಲ್ಲು ಆಗಬೇಕು ಎಂಬ ಉದ್ದೇಶದೊಂದಿಗೆ ದೊಡ್ಡಮಟ್ಟದ ಈ ಪ್ರಯತ್ನಕ್ಕೆ ಕೈಹಾಕಲಾಗಿದೆ ಎಂದು ಸಂಘಟಕರು ಮಾಹಿತಿ ನೀಡಿದ್ದಾರೆ.
ಟೀಸರ್ ಬಿಡುಗಡೆ
ಈ ಕಾರ್ಯಕ್ರಮದ ಪ್ರಚಾರಕ್ಕಾಗಿ ಈಗಾಗಲೇ ಟೀಸರ್ ಒಂದನ್ನು ಬಿಡುಗಡೆ ಮಾಡಲಾಗಿದೆ. ಇದಕ್ಕೆ ದೇಶ-ವಿದೇಶಗಳಲ್ಲಿರುವ ಕೊಡವ ಸಂಘಟನೆಗಳಿAದ ಪ್ರತಿ ಸ್ಪಂದನವೂ ಕಂಡುಬರುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಏಪ್ರಿಲ್ ೧೪ರ ಬಳಿಕ (ಹೊಸ ವರ್ಷ) ಈ ಕುರಿತ ಕಾರ್ಯಚಟುವಟಿಕೆಯನ್ನು ಚುರುಕುಗೊಳಿಸಲಾಗುವುದು. ಸುಮಾರು ೧೦ ರಿಂದ ೧೫ ಮಂದಿ ಸಂಬಳ ಆಧಾರಿತವಾಗಿ ಈ ಕೆಲಸ ಕಾರ್ಯದಲ್ಲಿ ತೊಡಗಲಿದ್ದಾರೆ. ಸಂಘಟನೆಯ ಸುಮಾರು ೫೦ಕ್ಕೂ
(ಮೊದಲ ಪುಟದಿಂದ) ಅಧಿಕ ಮಂದಿ ಇದರ ಹಿಂದೆ ನಿಂತು ಕೆಲಸ ಮಾಡಲಿದ್ದಾರೆ. ವಿಶ್ವಮಟ್ಟದ ಕಾರ್ಯಕ್ರಮವಾದ್ದರಿಂದ ಈಗಿನಿಂದಲೇ ರೂಪು-ರೇಷೆಗಳ ಬಗ್ಗೆ ಹಾಗೂ ಆಯೋಜನೆಯ ಬಗ್ಗೆ ‘ಗ್ಲೋಬಲ್ ಮೀಟ್’ ಮೂಲಕ ಆಗಾಗ್ಗೆ ಸಭೆಗಳನ್ನು ನಡೆಸಲಾಗು ವುದು. ಒಟ್ಟಾರೆಯಾಗಿ ಈ ಕಾರ್ಯಕ್ರಮ ಪ್ರಶ್ನಾತೀತ ಮಾದರಿಯಲ್ಲಿ ನಡೆಯುವಂತಾಗ ಬೇಕು ಎಂಬುದು ಸಂಘಟನೆಯ ಚಿಂತನೆಯಾಗಿದೆ ಎಂದು ಇದರಲ್ಲಿ ಶ್ರಮಿಸುತ್ತಿರುವ ಯುವಕರು ತಿಳಿಸಿದ್ದಾರೆ. ದೊಡ್ಡಮಟ್ಟದ ಕಾರ್ಯಕ್ರಮವಾದ್ದರಿಂದ ಕೋಟಿಗಟ್ಟಲೆ ಹಣವೂ ಖರ್ಚಾಗಲಿದೆ. ಇದರ ಕ್ರೋಢೀಕರಣದ ಪ್ರಯತ್ನವೂ ಆರಂಭವಾಗಿದೆ. ಕನಿಷ್ಟ ಮಟ್ಟದಲ್ಲಿ ಸುಮಾರು ೫೦ ಸಾವಿರ ಮಂದಿಯನ್ನು ಖಂಡಿತವಾಗಿ ಈ ಕಾರ್ಯಕ್ರಮದಲ್ಲಿ ಭಾಗಿಯಾಗುವಂತೆ ಮಾಡುವುದಾಗಿ ಅವರುಗಳು ತಿಳಿಸಿದ್ದು, ಇದಕ್ಕೆ ಎಲ್ಲಾ ಕೊಡವ ಸಮಾಜ, ಸಂಘ-ಸAಸ್ಥೆಗಳು, ವಿದೇಶದಲ್ಲಿರುವವರ ಸಹಕಾರ ಕೋರುವುದಾಗಿ ತಿಳಿಸಿದ್ದಾರೆ. ಕಾರ್ಯಕ್ರಮದ ಜವಾಬ್ದಾರಿ ಹೊತ್ತ ತಂಡ ತಮ್ಮ ಹೆಸರುಗಳನ್ನು ಪ್ರಚಾರ ಮಾಡದಂತೆಯೂ ಮನವಿ ಮಾಡಿಕೊಂಡಿದ್ದಾರೆ.