ಮಡಿಕೇರಿ, ಮಾ. ೨೭: ರಾಷ್ಟçದಲ್ಲಿ ಆಹಾರ ವಸ್ತುಗಳಿಗೆ ಸಂಬAಧಿಸಿದ ೮ ಕಾನೂನುಗಳನ್ನು ಕ್ರೋಢೀಕರಿಸಿ, ಜನರಿಗೆ ಸುರಕ್ಷತೆ ಹಾಗೂ ಗುಣಮಟ್ಟ ಆಹಾರ ಪದಾರ್ಥಗಳನ್ನು ನೀಡುವ ಉದ್ದೇಶದಿಂದ, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ -೨೦೦೬ ಹಾಗೂ ಅದರಡಿ ರಚಿಸಲಾಗಿರುವ ನಿಯಮ, ನಿಬಂಧನೆಗಳು ೨೦೧೧, ೫ನೇ ಆಗಸ್ಟ್ ೨೦೧೧ ರಿಂದ ಜಾರಿಗೆ ಬಂದಿದೆ.
ಈ ಕಾಯ್ದೆಯ ಉದ್ದೇಶವು ಆಹಾರ ಪದಾರ್ಥಗಳ ವ್ಯವಹಾರಸ್ಥರನ್ನು ಒಂದೇ ಸೂರಿನಡಿಯಲ್ಲಿ ನಿಬಂಧನೆ ಮತ್ತು ಪರಿವೀಕ್ಷಣೆಗೆ ಒಳಪಡಿಸುವುದಾಗಿದೆ. ಆಹಾರ ಮತ್ತು ಆಹಾರ ಪದಾರ್ಥಗಳ ತಯಾರಿಕೆಯಲ್ಲಿ ಬಳಕೆ ಮಾಡುವ ವಿವಿಧ ಪದಾರ್ಥಗಳ ಸುರಕ್ಷತೆ ಮತ್ತು ಗುಣಮಟ್ಟವನ್ನು ಕಾಯ್ದುಕೊಂಡು, ಮಾನವನ ಸೇವನೆಗೆ ಯೋಗ್ಯವಾದ ಆಹಾರವನ್ನು ಪೂರೈಸುವುದು ಈ ಕಾಯ್ದೆಯ ಮೂಲ ಉದ್ದೇಶವಾಗಿದೆ. ಈ ಕಾಯ್ದೆಯು ಜನಪರವಾಗಿದ್ದು, ಜನರ ಹಿತಾಸಕ್ತಿಯನ್ನು ಕಾಪಾಡುವಲ್ಲಿ ಒಂದು ದಿಟ್ಟ ಹೆಜ್ಜೆಯಾಗಿರುತ್ತದೆ.
ಕೊಡಗು ಜಿಲ್ಲಾ ವ್ಯಾಪ್ತಿಯ ಎಲ್ಲಾ ಆಹಾರ ವಸ್ತುಗಳ ಉತ್ಪಾದಕರು, ಪ್ಯಾಕರ್ಗಳು, ಸಾಗಣಿಕೆದಾರರು, ಸಗಟು-ಚಿಲ್ಲರೆ ಮಾರಾಟಗಾರರು, ವಿತರಕರು, ಹೊಟೇಲ್, ರೆಸಾರ್ಟ್, ಕ್ಯಾಂಟೀನ್, ಸಂಚಾರಿ ಸಿದ್ಧಪಡಿಸಿದ ಆಹಾರ ಮಾರಾಟಗಾರರು, ವೈನ್ ಸ್ಟೋರ್, ಕ್ಲಬ್ಗಳು, ಬಾರ್ ಅಂಡ್ ರೆಸ್ಟೋರೆಂಟ್ಗಳು, ಹೋಮ್ಸ್ಟೇಗಳು, ಬೇಕರಿ, ಸಿಹಿತಿಂಡಿ, ಹಾಲು, ಹಾಲಿನ ಉತ್ಪನ್ನ, ಪ್ಯಾಕೇಜ್ಡ್ ಕುಡಿಯುವ ನೀರು ಘಟಕ-ಮಾರಾಟಗಾರರು, ಹಣ್ಣು, ತರಕಾರಿಗಳು, ಕೋಳಿ, ಮೀನು, ಮಾಂಸ ಮಾರಾಟ, ರಸ್ತೆ ಬದಿ ಆಹಾರ ಪದಾರ್ಥ ಮಾರಾಟ, ಉಗ್ರಾಣಗಳು, ಸಂಸ್ಕರಣಾ ಘಟಕಗಳು, ಧಾರ್ಮಿಕ ಸ್ಥಳ, ಸಮುದಾಯ ಭವನ, ಕಲ್ಯಾಣ ಮಂಟಪಗಳಲ್ಲಿ ಪ್ರಸಾದ/ಊಟೋಪಚಾರ ಸಂಯೋಜಕರು, ಕ್ಯಾಟರಿಂಗ್ ವ್ಯವಹಾರಸ್ಥರು, ನ್ಯಾಯಬೆಲೆ ಅಂಗಡಿ, ಕಚೇರಿಗಳ ಕ್ಯಾಂಟೀನ್, ಸರ್ಕಾರಿ-ಸರ್ಕಾರೇತರ ವಸತಿ ನಿಲಯಗಳು, ಅಕ್ಷರ ದಾಸೋಹದ ಶಾಲೆಗಳು, ಅಂಗನವಾಡಿಗಳು ಹಾಗೂ ಎಲ್ಲಾ ರೀತಿಯ ಆಹಾರ ಪದಾರ್ಥ ವಹಿವಾಟುದಾರರು ಆಹಾರ ನೋಂದಣಿ, ಪರವಾನಗಿ, ನವೀಕರಣ ಪಡೆದುಕೊಳ್ಳುವುದು ಕಡ್ಡಾಯವಾಗಿದೆ.
ವಾರ್ಷಿಕ ರೂ. ೧೨ ಲಕ್ಷದ ಒಳಗೆ ವ್ಯಾಪಾರ ನಡೆಸುವವರು ಆಹಾರ ನೋಂದಣಿ ಮಾಡಬೇಕು. ರೂ. ೧೨ ಲಕ್ಷಕ್ಕಿಂತ ಹೆಚ್ಚಿನ ವ್ಯಾಪಾರ ನಡೆಸುವವರು ಆಹಾರ ಪರವಾನಗಿ ಅನ್ನು ಪಡೆದುಕೊಳ್ಳಬೇಕಿದೆ ಎಂದರು.
ತಪ್ಪಿದಲ್ಲಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ ೨೦೦೬ ರ ಸೆಕ್ಷನ್ ೩೧(೧) ಮತ್ತು ೨.೧.೧ ಮತ್ತು ೨.೧.೨ ರ ಅಡಿಯಲ್ಲಿ ಉಲ್ಲಂಘನೆ ಯಾಗುತ್ತದೆ ಹಾಗೂ ಶಿಕ್ಷಾರ್ಹ ಹಾಗೂ ರೂ. ೫ ಲಕ್ಷವರೆಗಿನ ದಂಡಾರ್ಹ ಅಪರಾಧವಾಗಿರುತ್ತದೆ. ಆಹಾರ ನೋಂದಣಿ ಹಾಗೂ ಪರವಾನೆಗಾಗಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ವ್ಯವಸ್ಥೆ ೨೦೧೪ ರ ಮಾರ್ಚ್ ೭ ರಿಂದ ಜಾರಿಗೊಂಡಿದೆ. ಕರ್ನಾಟಕ ರಾಜ್ಯದ ಎಲ್ಲಾ ಆಹಾರ ಪದಾರ್ಥಗಳ ವ್ಯವಹಾರಸ್ಥರು ಈ ಸವಲತ್ತನ್ನು hಣಣಠಿs://ಜಿosಛಿos.ಜಿssಚಿi.gov.iಟಿ ಅಂರ್ತಜಾಲ ತಾಣದಿಂದ ಪಡೆಯಬಹುದಾಗಿದೆ.
ಹೆಚ್ಚಿನ ಮಾಹಿತಿಗೆ ಡಾ. ಅನಿಲ್ ಧವನ್ ಇ, ಅಂಕಿತ ಅಧಿಕಾರಿಗಳು, ಎಫ್ಎಸ್ಎಸ್ಎ. ಕೊಡಗು ಜಿಲ್ಲೆ, ಮಡಿಕೇರಿ ೯೪೪೮೭೨೦೩೪೪, ನವೀನ್ ಕುಮಾರ್ ಕೆ.ಆರ್., ಆಹಾರ ಸುರಕ್ಷತಾ ಅಧಿಕಾರಿ, ಮಡಿಕೇರಿ ಮತ್ತು ಸೋಮವಾರಪೇಟೆ ತಾಲೂಕು ೮೮೬೧೮೭೦೦೨೯, ಶ್ರೀನಿವಾಸಮೂರ್ತಿ ಕೆ.ಟಿ. ಆಹಾರ ಸುರಕ್ಷತಾ ಅಧಿಕಾರಿ, ವೀರಾಜಪೇಟೆ ತಾಲೂಕು ೯೪೪೯೨೮೯೨೦೩ನ್ನು ಸಂಪರ್ಕಿಸಬಹುದು.