*ಗೋಣಿಕೊಪ್ಪ, ಮಾ. ೨೬: ರೂ. ೯೮.೧೫ ಲಕ್ಷ ಅನುದಾನದಲ್ಲಿ ತಿತಿಮತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೊಖ್ಯ, ದೇವಮಚ್ಚಿ ಅರಣ್ಯದಂಚಿನ ನಿವಾಸಿಗಳಿಗೆ ಜಲ್‌ಜೀವನ್ ಮಿಷನ್ ಯೋಜನೆಯಡಿ ಕುಡಿಯುವ ನೀರಿನ ಸಂಪರ್ಕಕ್ಕೆ ಸಂಸದ ಪ್ರತಾಪ್ ಸಿಂಹ ಚಾಲನೆ ನೀಡಿದರು.
ಕಾರೆಕಂಡಿ ಹಾಡಿಯ ೩೬೩ ಮನೆಗಳಿಗೆ ಕುಡಿಯುವ ನೀರಿನ ಸಂಪರ್ಕವನ್ನು ಈ ಸಂದರ್ಭ ಒದಗಿಸಲಾಯಿತು.
ಈ ಸಂದರ್ಭ ರಾಜ್ಯ ಸರ್ಕಾರಿ ಜಮೀನು ಸಂರಕ್ಷಣಾ ಸಮಿತಿ ಅಧ್ಯಕ್ಷ, ಶಾಸಕ ಕೆ.ಜಿ. ಬೋಪಯ್ಯ, ವಿಧಾನ ಪರಿಷತ್ ಸದಸ್ಯ ಮಂಡೇಪAಡ ಸುಜಾ ಕುಶಾಲಪ್ಪ, ರಾಜ್ಯ ಪಶ್ಚಿಮಘಟ್ಟ ಕಾರ್ಯಪಡೆ ಸಮಿತಿ ಅಧ್ಯಕ್ಷ ಶಾಂತೆಯAಡ ರವಿಕುಶಾಲಪ್ಪ, ತಾಲೂಕು ಬಗರ್‌ಹುಕುಂ ಸಕ್ರಮೀಕರಣ ಸಮಿತಿ ಅಧ್ಯಕ್ಷ ಕಾಡ್ಯಮಾಡ ಗಿರೀಶ್ ಗಣಪತಿ, ಜಿಲ್ಲಾ ಮೂಡ ಅಧ್ಯಕ್ಷ ರಮೇಶ್ ಹೊಳ್ಳ, ಜಿಲ್ಲಾ ದಿಶಾ ಸಮಿತಿ ಸದಸ್ಯೆ ಮಾಪಂಗಡ ಯಮುನಾ ಚಂಗಪ್ಪ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಆಶಾ, ಉಪಾಧ್ಯಕ್ಷೆ ವಿಜಯ, ಸದಸ್ಯರುಗಳಾದ ಎನ್.ಎನ್. ಅನೂಪ್ ಕುಮಾರ್, ಶಂಕರ, ಸುಬ್ರು, ಶ್ಯಾಮಲ, ಆಫ್ರೋಸ್, ರಾಜೇಶ್ವರಿ, ಚಂದ್ರಶೇಖರ, ಸರಸ್ವತಿ, ವಿ.ಎಸ್.ಎಸ್.ಎನ್ ನಿರ್ದೇಶಕರು ಗಳಾದ ಗೋವಿಂದ, ಮಂಜುಳಾ, ಜಲಜೀವನ್ ಯೋಜನೆಯ ಹಿರಿಯ ಅಭಿಯಂತರ ಯೋಗೇಶ್‌ಗೌಡ, ಜಿ.ಪಂ. ಇಂಜಿನಿಯರ್ ಮಹಾದೇವ್, ಗುತ್ತಿಗೆದಾರ ಮಂಜು ಬೋಪಣ್ಣ, ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಮಮತಾ ಜಗದೀಶ್, ಪಂಚಾಯಿತಿ ಸಿಬ್ಬಂದಿಗಳು, ಹಾಡಿ ನಿವಾಸಿಗಳು ಹಾಗೂ ಸಾರ್ವಜನಿಕರು ಇದ್ದರು.