ಗೋಣಿಕೊಪ್ಪ ವರದಿ, ಮಾ. ೨೬: ರಷ್‌ಅವರ್ ಫುಟ್ಬಾಲ್ ಕ್ಲಬ್ ವತಿಯಿಂದ ಹಾತೂರು-ಕೆಬ್ಬಮಾನಿ ಮೈದಾನದಲ್ಲಿ ಆಯೋಜಿಸಿದ್ದ ಜಿಲ್ಲಾಮಟ್ಟದ ಫುಟ್ಬಾಲ್ ಪಂದ್ಯಾಟದಲ್ಲಿ ನೆಹರು ಎಫ್‌ಸಿ(ಎ) ಪ್ರಥಮ, ನೆಹರು ಎಫ್‌ಸಿ(ಬಿ) ದ್ವಿತೀಯ ಸ್ಥಾನ ಪಡೆದುಕೊಂಡಿತು.

ಫೈನಲ್ ಪಂದ್ಯದಲ್ಲಿ ನೆಹರು ಎಫ್‌ಸಿ(ಎ) ತಂಡವು ಬಿ ತಂಡವನ್ನು ೨-೧ ಗೋಲುಗಳಿಂದ ಟೈಬ್ರೇಕರ್‌ನಲ್ಲಿ ಮಣಿಸಿ ಕಪ್ ಗೆದ್ದುಕೊಂಡಿತು. ಉಭಯ ತಂಡಗಳು ಪಂದ್ಯದ ಅವಧಿಯಲ್ಲಿ ಗೋಲು ದಾಖಲಿಸದೆ ಪರದಾಡಿತು. ನಂತರ, ಟೈಬ್ರೇಕರ್‌ನಲ್ಲಿ ಎ ತಂಡವು ೨-೧ ಗೋಲುಗಳಿಂದ ಸೋಲಿಸಿತು.

ಸೆಮಿಫೈನಲ್‌ನಲ್ಲಿ ಆಲ್ ಸ್ಟಾರ್ ಎಫ್‌ಸಿ ವಿರುದ್ಧ ನೆಹರು ಎಫ್‌ಸಿ(ಎ) ತಂಡವು ೩-೧ ಗೋಲುಗಳಿಂದ ಗೆಲುವು ಪಡೆದುಕೊಂಡಿತು. ವಿರಾಟ್ ಎಫ್‌ಸಿ ವಿರುದ್ಧ ನೆಹರು ಎಫ್‌ಸಿ(ಬಿ) ತಂಡವು ೨-೧ ಗೋಲುಗಳಿಂದ ಗೆದ್ದು ಬೀಗಿತು. ನೆಹರು ಎಫ್‌ಸಿ ಎ ಮತ್ತು ಬಿ ತಂಡಗಳು ಫೈನಲ್ ಪ್ರವೇಶ ಪಡೆಯುವ ಮೂಲಕ ವಿಶೇಷತೆ ಮೂಡಿಸಿದವು.

ಸೇನಾಧಿಕಾರಿ (ನಿವೃತ್ತ) ಕರ್ನಲ್ ಬಾಳೆಯಡ ಕಾಳಯ್ಯ ಸುಬ್ರಮಣಿ ಬಹುಮಾನ ವಿತರಿಸಿದರು.