ಮಡಿಕೇರಿ, ಮಾ. ೨೬: ಕನ್ನಡ ಪುಸ್ತಕ ಪ್ರಾಧಿಕಾರದ ವತಿಯಿಂದ ಏಪ್ರಿಲ್ ೮ ರಿಂದ ೧೩ ರವರೆಗೆ “ಕನ್ನಡ ಪುಸ್ತಕಗಳ ರಿಯಾಯಿತಿ ಮಾರಾಟ ಮೇಳ”ವನ್ನು ಕರ್ನಾಟಕ ಕಾಲೇಜು ಆವರಣ ಧಾರವಾಡ ಇಲ್ಲಿ ಏರ್ಪಡಿಸಲಾಗುವುದು.
ಈ ಪುಸ್ತಕ ಮೇಳದಲ್ಲಿ ಕನ್ನಡ ಪ್ರಕಾಶಕರು/ಮಾರಾಟಗಾರರು ಭಾಗವಹಿಸಬಹುದಾಗಿದ್ದು, ಮಳಿಗೆಯೊಂದಕ್ಕೆ ಒಂದು ದಿನಕ್ಕೆ ರೂ.೫೦೦ ರಂತೆ ಆರು (೬) ದಿನಗಳಿಗೆ ರೂ.೩ ಸಾವಿರ ಬಾಡಿಗೆ ಹಾಗೂ ಒಂದು ಮಳಿಗೆಗೆ ರೂ.೧ ಸಾವಿರ ಠೇವಣಿ ಮೊತ್ತದ ಪ್ರತ್ಯೇಕ ಡಿ.ಡಿ.ಯನ್ನು ಆಡಳಿತಾಧಿಕಾರಿ, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು ಇವರ ಹೆಸರಿನಲ್ಲಿ ಸಲ್ಲಿಸುವುದು.
ಮೇಳದಲ್ಲಿ ಭಾಗವಹಿಸಲು ಇಚ್ಚಿಸುವ ಪ್ರಕಾಶಕರು/ ಮಾರಾಟಗಾರರು ನಿಗದಿತ ಅರ್ಜಿ ನಮೂನೆಯನ್ನು ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಭವನ, ಜೆ.ಸಿ. ರಸ್ತೆ, ಬೆಂಗಳೂರಿನ ಕಚೇರಿ ಅಥವಾ ಆಯಾಯ ಜಿಲ್ಲೆಯಲ್ಲಿರುವ ಸಹಾಯಕ ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ಅಥವಾ ಪ್ರಾಧಿಕಾರದ ವೆಬ್ಸೈಟ್ನಲ್ಲಿ ತಿತಿತಿ.ಞಚಿಟಿಟಿಚಿಜಚಿ ಠಿusಣಚಿಞಚಿಠಿಡಿಚಿಜhiಞಚಿಡಿಚಿ.ಛಿom ನಲ್ಲಿ ಉಚಿತವಾಗಿ ಪಡೆದು ಕೊಳ್ಳಬಹುದಾಗಿದೆ.
ಭರ್ತಿ ಮಾಡಿದ ಅರ್ಜಿಯನ್ನು ಡಿ.ಡಿ.ಯೊಂದಿಗೆ ಏಪ್ರಿಲ್ ೬ ರಂದು ಸಂಜೆ ೫ ಗಂಟೆಯೊಳಗೆ ಆಡಳಿತಾಧಿಕಾರಿಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು ಅವರ ಹೆಸರಿಗೆ ಅಂಚೆಯ ಮೂಲಕ ಹಾಗೂ ಇ-ಮೇಲ್ ಞಚಿಟಿಟಿಚಿಜಚಿಠಿಡಿಚಿಜhiಞಚಿಡಿಚಿ @gmಚಿiಟ.ಛಿom ರ ಮೂಲಕ ಸಲ್ಲಿಸಲು ಕೋರಿದೆ. ನಿರ್ಮಿಸಲಾಗುವ ೬೦ ಮಳಿಗೆಗಳನ್ನು ಆದ್ಯತೆಯ ಮೇರೆಗೆ ಹಂಚಿಕೆ ಮಾಡಲಾಗುವುದು.
ಹೆಚ್ಚಿನ ಮಾಹಿತಿಗೆ ಕನ್ನಡ ಪುಸ್ತಕ ಪ್ರಾಧಿಕಾರದ ವೆಬ್ಸೈಟ್ ತಿತಿತಿ.ಞಚಿಟಿಟಿಚಿಜಚಿ ಠಿusಣಚಿಞಚಿಠಿಡಿಚಿಜhiಞಚಿಡಿಚಿ.ಛಿom ನಲ್ಲಿ ಅಥವಾ ಆಡಳಿತಾಧಿಕಾರಿಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು-೫೬೦೦೦೨ ದೂ:೦೮೦-೨೨೪೮೪೫೧೬ / ೨೨೧೦೭೭೦೪ ಅನ್ನು ಸಂಪರ್ಕಿಸಬಹುದು ಎಂದು ಆಡಳಿತಾಧಿಕಾರಿ ಕೆ.ಬಿ.ಕಿರಣ್ ಸಿಂಗ್ ಅವರು ತಿಳಿಸಿದ್ದಾರೆ.