ಮಡಿಕೇರಿ, ಮಾ. ೨೬: ಕ್ರೀಡೆ, ನೃತ್ಯ, ಸಾಹಿತ್ಯ, ಕರಕುಶಲ, ಚಿತ್ರಕಲೆ, ನಾಟಕ ಸೇರಿದಂತೆ ೮ ಕ್ಷೇತ್ರಗಳಲ್ಲಿ ಅಸಾಧಾರಣ ಸಾಧನೆಯನ್ನು ರಾಜ್ಯ ಮತ್ತು ರಾಷ್ಟç ಮಟ್ಟದಲ್ಲಿ ಮಾಡಿದ ೧೮ ವರ್ಷದ ಒಳಗಿನ ಮಕ್ಕಳಿಗೆ “ಬಾಲಗೌರವ ಪ್ರಶಸ್ತಿ’ಗೆ ಅರ್ಜಿ ಆಹ್ವಾನಿಸಲಾಗಿದೆ. ಈ ಪ್ರಶಸ್ತಿಗೆ ರಾಜ್ಯ ಮತ್ತು ರಾಷ್ಟç ಮಟ್ಟದಲ್ಲಿ ವಿಶೇಷ ಸಾಧನೆಗೈದ ಪ್ರಶಸ್ತಿ ಪುರಸ್ಕೃತ ಮಗುವಾಗಿರಬೇಕು. ಮಕ್ಕಳು ಅಕಾಡೆಮಿ ಬಾಲಗೌರವ ಪ್ರಶಸ್ತಿಗಾಗಿ ತಮ್ಮ ಸ್ವಯಂ ದೃಢೀಕೃತ ನಕಲು ದಾಖಲೆಗಳೊಂದಿಗೆ ಹಾಗೂ ಸ್ವ-ವಿವರಗಳನ್ನೊಳಗೊಂಡ ಮನವಿಯೊಂದಿಗೆ ಅರ್ಜಿಯನ್ನು ಮಾರ್ಚ್, ೩೧ ರೊಳಗೆ ಯೋಜನಾಧಿಕಾರಿಗಳು, ಕರ್ನಾಟಕ ಬಾಲವಿಕಾಸ ಅಕಾಡೆಮಿ, ಚಂದ್ರಿಕಾ ಲೇಔಟ್ ಹಿಂಭಾಗ, ಕೆಎಚ್‌ಬಿ ಕಾಲೋನಿ, ಲಕಮನಹಳ್ಳಿ ಧಾರವಾಡ-೫೮೦೦೦೪ ಇಲ್ಲಿಗೆ ಕಳುಹಿಸುವುದು. ಅರ್ಜಿ ಸಲ್ಲಿಸುವಾಗ “ಅಕಾಡೆಮಿ ಬಾಲಗೌರವ ಪ್ರಶಸ್ತಿಗಾಗಿ ಅರ್ಜಿ” ಎಂದು ಲಕೋಟೆ ಮೇಲೆ ನಮೂದಿಸಿರಬೇಕು. ಹೆಚ್ಚಿನ ಮಾಹಿತಿಗೆ ದೂ.ಸಂ. ೦೮೩೬-೨೪೬೧೬೬೬ ನ್ನು ಸಂಪರ್ಕಿಸಬಹುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಮುದ್ದಣ್ಣ ತಿಳಿಸಿದ್ದಾರೆ.