(ವಿಶೇಷ ವರದಿ: ಹೆಚ್.ಕೆ. ಜಗದೀಶ್)

ಗೋಣಿಕೊಪ್ಪಲು, ಮಾ. ೨೬: ಅರಣ್ಯವನ್ನೇ ದೇವರೆಂದು ನಂಬಿ, ಕಾಡು ಮರಗಳನ್ನು ಭಕ್ತಿ ಭಾವದಿಂದ ಪೂಜಿಸುತ್ತಿದ್ದ ಅರಣ್ಯವಾಸಿಗಳು ಈ ಹಿಂದೆ ತಮ್ಮ ಹಕ್ಕಿಗಾಗಿ ನಡೆಸಿದ್ದ ಜಮ್ಮ ಪಾಳೆ ಹೋರಾಟವನ್ನು ಮತ್ತೊಮ್ಮೆ ಹಮ್ಮಿಕೊಳ್ಳಲು ವೇದಿಕೆ ಸಜ್ಜುಗೊಳಿಸುತ್ತಿದ್ದಾರೆ. ಅನಾದಿ ಕಾಲ ದಿಂದಲೂ ಅರಣ್ಯದ ಅಂಚಿನಲ್ಲಿ ಹಾಗೂ ಅರಣ್ಯದಲ್ಲಿ ವಾಸಿಸುತ್ತಿರುವ ಸಾವಿರಾರು ಸಂಖ್ಯೆಯ ಆದಿವಾಸಿಗಳು ಸಂವಿಧಾನಾತ್ಮಕವಾಗಿ, ಕಾನೂನಾತ್ಮಕ ವಾಗಿ ಸಿಗಬೇಕಾದ ಸವಲತ್ತುಗಳನ್ನು ಪಡೆಯಲು ಹೋರಾಟ ಹಮ್ಮಿಕೊಳ್ಳಲಿದ್ದಾರೆ.ಅರಣ್ಯ ಹಕ್ಕು ಕಾಯ್ದೆಯಲ್ಲಿ ಸಿಗಬೇಕಾದ ಸವಲತ್ತುಗಳನ್ನು ನೀಡಲು ಕೆಲವು ಅರಣ್ಯಾಧಿಕಾರಿಗಳು ವಿವಿಧ ಕಾರಣವೊಡ್ಡಿ ಆದಿವಾಸಿಗಳಿಗೆ ಸವಲತ್ತು ಕಲ್ಪಿಸದ ಹಿನೆÀ್ನಲೆಯಲ್ಲಿ ಹೋರಾಟ ಮಾಡಲು ನಿರ್ಧಾರ ಕೈಗೊಂಡಿದ್ದಾರೆ. ರಾಷ್ಟಿçÃಯ ಉದ್ಯಾನವನ ನಾಗರಹೊಳೆಯ ಅರಣ್ಯ ಕಚೇರಿಯ ಸಮೀಪವಿರುವ ವಿಶಾಲವಾದ ಮರಗಳ ನೆರಳಿನಲ್ಲಿ ತಮ್ಮ ಹಕ್ಕನ್ನು ಪಡೆಯುವ ನಿಟ್ಟಿನಲ್ಲಿ ಹೋರಾಟವನ್ನು ಹಮ್ಮಿಕೊಳ್ಳಲಿದ್ದಾರೆ.

ಈ ಹೋರಾಟಕ್ಕೆ ಆದಿವಾಸಿಗಳು ರಾಜ್ಯ ಮೂಲ ನಿವಾಸಿಗಳ ವೇದಿಕೆಯ ಉಪಾಧ್ಯಕ್ಷ ಜೆ.ಕೆ. ತಿಮ್ಮ ಮುಂದಾಳತ್ವ ವಹಿಸಲಿದ್ದಾರೆ. ಈಗಾಗಲೇ ಅರಣ್ಯ ಹಕ್ಕು ಮಸೂದೆ ಜಾರಿಯಲ್ಲಿನ ವಿಳಂಬ ನೀತಿಯ ಬಗ್ಗೆ ಹಾಗೂ ಕೆಲವು ಅಧಿಕಾರಿಗಳು ಆದಿವಾಸಿಗ ಳೊಂದಿಗೆ ನಡೆಸಿಕೊಳ್ಳುತ್ತಿರುವ ರೀತಿಯ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ತಮ್ಮ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವಂತೆ ಮನವಿ ಮಾಡಿದ್ದಾರೆ. ಆದರೆ ಇಲ್ಲಿಯ ತನಕ ಅರಣ್ಯ ವಾಸಿಗಳಿಗೆ ಕಾಯ್ದೆ ಅನ್ವಯ ಸಿಗಬೇಕಾದ ವೈಯಕ್ತಿಕ ಹಕ್ಕು, ಸಮುದಾಯದ ಹಕ್ಕು ಹಾಗೂ ಸಂಪನ್ಮೂಲದ ಒಡೆತನದ ಹಕ್ಕು ಸಿಕ್ಕಿಲ್ಲ. ಕಾಯ್ದೆಯಲ್ಲಿ ಮನೆ ನಿರ್ಮಾಣ ಮಾಡಿಕೊಳ್ಳುವ ಅವಕಾಶವಿದ್ದರೂ ಅರಣ್ಯ ಅಧಿಕಾರಿಗಳು ಮನೆ ನಿರ್ಮಾಣಕ್ಕೆ ಅಡ್ಡಿಪಡಿಸುತ್ತಿದ್ದಾರೆ. ಜಿಲ್ಲಾಧಿಕಾರಿಗಳ ಸಭೆಯಲ್ಲಿ

(ಮೊದಲ ಪುಟದಿಂದ) ಈ ಬಗ್ಗೆ ಸ್ಪಷ್ಟ ಆದೇಶ ನೀಡಿದರೂ ಅರಣ್ಯ ಅಧಿಕಾರಿಗಳು ಮಾತ್ರ ಮನೆ ನಿರ್ಮಾಣಕ್ಕೆ ಅವಕಾಶ ನೀಡುತ್ತಿಲ್ಲ.

ನಾಲ್ಕೇರಿ, ಕೆ. ಬಾಡಗ, ನಿಟ್ಟೂರು, ದೇವರಪುರ, ಕಾನೂರು ಹಾಗೂ ತಿತಿಮತಿ ಪಂಚಾಯಿತಿ ವ್ಯಾಪ್ತಿಯ ನಾಗರಹೊಳೆ, ಗದ್ದೆಹಾಡಿ, ಸಿದ್ದಾಪುರ, ಬಾಳೆಕೋವು, ನಾಣಚ್ಚಿ ಗದ್ದೆಹಾಡಿ, ಕರಡಿಕಲ್ಲು, ಅತ್ತೂರು ಕೊಲ್ಲಿಯಾಡಿ, ಚಂದನಕೆರೆ, ಗೋಣಿಗದ್ದೆ, ಬೊಮ್ಮಾಡು, ಕೊಡಂಗೆ, ಬ್ರಹ್ಮಗಿರಿ, ದಾಳಿಂಬೆಕೊಲ್ಲಿ ಹಾಡಿ, ಕೋಳಂಗೇರೆ, ತಟ್ಟೆಕೆರೆ, ಕುಂಬಾರಕಟ್ಟೆ, ಆಯೀರ ಸುಳಿ, ಚೇಣಿಹಡ್ಲು, ಮರಪಾಲ, ಜಂಗಲ್ ಹಾಡಿ, ಮಜ್ಜಿಗೆ ಹಳ್ಳ, ಆನೆ ಕ್ಯಾಂಪ್, ಕಾರೇಕಂಡಿ, ಬೊಮ್ಮಾಡು ಸೇರಿದಂತೆ ಇನ್ನಿತರ ಹಾಡಿಗಳಲ್ಲಿ ತಲತಲಾಂತರಗಳಿAದ ನೆಲೆಸಿರುವ ಆದಿವಾಸಿಗಳು ತಮ್ಮ ಸಾಂಸ್ಕೃತಿಕ ಉಡುಗೆತೊಡುಗೆಯಲ್ಲಿ ಮಹಿಳೆಯರು, ಮಕ್ಕಳಾದಿಯಾಗಿ ಹೋರಾಟದಲ್ಲಿ ಪಾಲ್ಗೊಳ್ಳುವ ಮೂಲಕ ಸರ್ಕಾರದ ಗಮನ ಸೆಳೆಯಲು ಸಿದ್ಧರಾಗಿದ್ದಾರೆ.

ನಾಗರಹೊಳೆ ರಾಷ್ಟಿçÃಯ ಉದ್ಯಾನವನದ ಒಳಗೆ, ಅರಣ್ಯದ ಅಂಚಿನಲ್ಲಿ ವಾಸಿಸುತ್ತಿರುವ ಆದಿವಾಸಿ ಬುಡಕಟ್ಟು ಜನಾಂಗದ ಜೇನುಕುರುಬ, ಬೆಟ್ಟಕುರುಬ, ಯರವ ಮುಂತಾದ ಬುಡಕಟ್ಟು ಜನಾಂಗದವರು ತಲತಲಾಂತರಗಳಿAದ ಪಾರಂಪಾರಿಕವಾಗಿ ತಮ್ಮ ವಾಸದ ಕಾಡಿನಲ್ಲಿ ತಮ್ಮದೆ ಆದ ಭಾಷೆ, ಉಡುಗೆತೊಡುಗೆ ಸಾಂಪ್ರದಾಯಿಕ ಪದ್ಧತಿ, ಸಂಸ್ಕೃತಿ, ಸಾಂಪ್ರದಾಯಿಕ ಕೆತ್ತನೆ, ಬಿತ್ತನೆ ರೂಪದಲ್ಲಿ ಭತ್ತ, ರಾಗಿ, ಜೋಳ, ಗೆಡ್ಡೆಗೆಣಸು, ತರಕಾರಿಗಳನ್ನು ‘ಕುಮುರಿ’ ಬೇಸಾಯದ ಕೃಷಿ ಪದ್ಧತಿಯಲ್ಲಿ ಕಾಡಿನಲ್ಲಿ ನೈಸರ್ಗಿಕವಾಗಿ ಸಿಗುವ ಕಿರು ಅರಣ್ಯ ಉತ್ಪನ್ನಗಳಾದ ಜೇನು, ಮರದ ಪಾಚಿ, ನೆಲ್ಲಿಕಾಯಿ, ಸೀಗೆಕಾಯಿ, ಅಂಟುವಾಳಕಾಯಿ, ಗೆಡ್ಡೆ ಗೆಣಸುಗಳು, ಸೊಪ್ಪುಗಳು, ನಾರುಬೇರುಗಳು, ಗಿಡಮೂಲಿಕೆ ಔಷಧಿ ಸಸ್ಯಗಳು ಮತ್ತು ಅನೇಕ ರೀತಿಯ ಕಿರುಅರಣ್ಯ ಉತ್ಪನ್ನಗಳನ್ನು ಬಳಕೆ ಮಾಡುತ್ತ, ಸಂರಕ್ಷಿಸುತ್ತ, ಪೋಷಿಸುತ್ತ ತಮ್ಮದೇ ಆದ ಪಾರಂಪರಿಕ ಜ್ಞಾನದಿಂದ ವಂಶಪಾರAಪರಿಕವಾಗಿ ಅಂದಿನಿAದ ಇಂದಿನವರೆಗೂ ಕಾಡಿನಲ್ಲಿಯೇ ವಾಸಿಸುತ್ತಿರುವುದು ಸತ್ಯವಾಗಿದೆ.

ನಿಯಮಗಳಂತೆ ಹಕ್ಕು ನೀಡಲು ೨೦೦೯ರಿಂದ ಆದಿವಾಸಿ ಬುಡಕಟ್ಟು ಸಮುದಾಯಗಳು ನಿಗದಿತ ನಮೂನೆಗಳಲ್ಲಿ ಅರ್ಜಿಗಳನ್ನು ಸಲ್ಲಿಸಿದ್ದರೂ ಸರ್ಕಾರದ ಅಧಿಕಾರಿಗಳು ನಿರ್ಲಕ್ಷö್ಯ ವಹಿಸಿದ್ದಾರೆ. ಕೇವಲ ವಾಸಕ್ಕಾಗಿ ಹಕ್ಕು ಪತ್ರ ನೀಡಿ ಕಾನೂನನ್ನು ಉಲ್ಲಂಘಿಸಿದ್ದಾರೆ. ವೈಯಕ್ತಿಕ ಹಕ್ಕಿನಲ್ಲಿ ಬೇಸಾಯಕ್ಕಾಗಿ ಭೂಮಿ ನೀಡಿಲ್ಲ. ನಮೂನೆ ‘ಬಿ’ಯಲ್ಲಿ ಸಮುದಾಯದ ಹಕ್ಕಿಗಾಗಿ, ೨೦೦೯ರಲ್ಲಿ ಸಲ್ಲಿಸಿರುವ ಅರ್ಜಿಗಳನ್ನು ಇಲ್ಲಿಯವರೆಗೆ ಪರಿಶೀಲನೆ ನಡೆಸಿ ಹಕ್ಕು ಪತ್ರ ನೀಡಿಲ್ಲ. ನಮೂನೆ ‘ಸಿ’ಯಲ್ಲಿ ಸಮುದಾಯದ ಸಂಪನ್ಮೂಲದ ಹಕ್ಕಿಗಾಗಿ ಸಲ್ಲಿಸಿರುವ ಅರ್ಜಿಗಳಿಗೆ ಇನ್ನೂ ಹಕ್ಕು ಪತ್ರ ಲಭಿಸಿಲ್ಲ. ಕಾನೂನಿನಲ್ಲಿ ಕಾಲಾವಕಾಶವನ್ನು ರೂಪಿಸಿದ್ದರೂ. ಅಧಿಕಾರಿಗಳಿಂದ ಕಾನೂನು ಪಾಲನೆಯಾಗುತ್ತಿಲ್ಲ..

ಆದಿವಾಸಿ ಬುಡಕಟ್ಟು ಜನರು ವಾಸಿಸುವ ಕಾಡುಗಳು ಸಾಂಪ್ರದಾಯಿಕ ಆರಾಧನಾ ಸ್ಥಳಗಳು, ಸ್ಮಶಾನ, ಕಿರು ಅರಣ್ಯ ಉತ್ಪನ್ನದ ಕಾಡುಗಳು ಆಗಿರುವುದರಿಂದ ನಾಗರಹೊಳೆ ಕಾಡನ್ನು ೫ನೇ ಮತ್ತು ೬ನೇ ಅನುಸೂಚಿತ ಬುಡಕಟ್ಟು ಪ್ರದೇಶ ಎಂದು ಘೋಷಿಸಿ ೨೦೦೬ರ ಅರಣ್ಯ ಹಕ್ಕು ಕಾಯ್ದೆಯನ್ನು ಸಮರ್ಪಕವಾಗಿ ಜಾರಿಗೊಳಿಸಿ ಹಕ್ಕುಗಳನ್ನು ನಿಯಮಗಳಂತೆ ನೀಡಬೇಕು ಮತ್ತು ಡಾ. ಮುಜಾಫರ್ ಅಸ್ಸಾದಿ ವರದಿ ೨೦೧೪ರ ಶಿಫಾರಸ್ಸನ್ನು ಸಮಪÀðಕವಾಗಿ ಜಾರಿಗೊಳಿಸಬೇಕು ಎಂಬ ಒತ್ತಾಯದೊಂದಿಗೆ ಮತ್ತೊಂದು ಜಮ್ಮ - ಪಾಳೆ ಹೋರಾಟವನ್ನು ಸದ್ಯದಲ್ಲೆ ಹಮ್ಮಿಕೊಳ್ಳಲಿದ್ದಾರೆ.