ಮಡಿಕೇರಿ, ಮಾ. ೨೬: ದಕ್ಷಿಣ ಕೊಡಗಿನ ಪಾಕೇರಿನಾಡು ಬಿರುನಾಣಿಯ ಶ್ರೀ ಪುತ್ತು ಭಗವತಿ ದೇವಸ್ಥಾನದ ವಾರ್ಷಿಕ ಉತ್ಸವ ಶ್ರದ್ಧಾಭಕ್ತಿಯಿಂದ ಜರುಗಿತು. ತಾ. ೧೮ರಂದು ಕೊಡಿಮರ ನಿಲ್ಲಿಸುವ ಮೂಲಕ ಉತ್ಸವ ಆರಂಭಗೊAಡಿದ್ದು, ತಾ.೨೫ರಂದು ಈ ದೇವಸ್ಥಾನದ ವಿಶಿಷ್ಟ ಆಚರಣೆ - ಹರಕೆಯಾಗಿರುವ ಪೊಮ್ಮಂಗಲ ಕಾರ್ಯ ಜರುಗಿತು. ಬಾಲಕರನ್ನು ವಧುವಿನಂತೆ ಹಾಗೂ ಬಾಲಕಿಯರನ್ನು ವರನ ಮಾದರಿಯಲ್ಲಿ ವೇಷ ಬದಲಿಸಿ ಕೊಡವ ಸಂಪ್ರದಾಯದ ವಿವಾಹದ ಮಾದರಿಯಲ್ಲಿ ಹರಕೆ ಸಲ್ಲಿಸುವುದು ಇಲ್ಲಿನ ವಿಶಿಷ್ಟತೆಯಾಗಿದೆ.

ಈ ಬಾರಿ ೨೪ ಮಂದಿ ಈ ರೀತಿ ಯಾಗಿ ಹರಕೆ ಒಪ್ಪಿಸಿದರು. ತಾ. ೧೮ ರಿಂದ ಎಲ್ಲಾ ದಿನಗಳಲ್ಲಿ ವಿವಿಧ ಪೂಜಾ ಕೈಂಕರ್ಯಗಳು

(ಮೊದಲ ಪುಟದಿಂದ) ಜರುಗಿದ್ದು, ನಿನ್ನೆ ಪೊಮ್ಮಂಗಲ ಹಾಗೂ ನೆರಪು ಜರುಗಿತು. ಅಂತಿಮ ದಿನವಾದ ಇಂದು ಬೆಳಿಗ್ಗೆಯಿಂದ ಮಹಾಪೂಜೆ, ತೀರ್ಥ ಪ್ರಸಾದ ವಿತರಣೆ, ದೇವರ ದರ್ಶನ, ಅವಭೃತ ಸ್ನಾನದಂತಹ ಕಾರ್ಯಗಳು ನೆರವೇರಿತು.

ದೇವಸ್ಥಾನ ಸಮಿತಿಯ ಅಧ್ಯಕ್ಷ ಕಾಳಿಮಾಡ ಮುತ್ತಣ್ಣ, ಕಾರ್ಯದರ್ಶಿ ಕಳಕಂಡ ಜಿತು ಕುಶಾಲಪ್ಪ, ದೇವತಕ್ಕರಾದ ಅಣ್ಣಳಮಾಡ ಗಿರೀಶ್, ವಿವಿಧ ಕುಟುಂಬಸ್ಥರು, ಆಡಳಿತ ಮಂಡಳಿಯವರು ಪಾಲ್ಗೊಂಡಿದ್ದರು.