ಸಿದ್ದಾಪುರ, ಮಾ. ೨೬: ನೆಲ್ಲಿಹುದಿಕೇರಿಯ ಇತಿಹಾಸ ಪ್ರಸಿದ್ಧ ಶ್ರೀ ವಿಷ್ಣುಮೂರ್ತಿ ಸತ್ಯನಾರಾಯಣ ದೇವರ ವಾರ್ಷಿಕೋತ್ಸವ ಶ್ರದ್ಧಾಭಕ್ತಿಯಿಂದ ನೆರವೇರಿತು. ಈ ದೇವಾಲಯ ಸಾವಿರಾರು ವರ್ಷಗಳ ಇತಿಹಾಸ ಹೊಂದಿದ್ದು ಚೋಳ ವಂಶಸ್ಥರ ಕಾಲದ್ದಾಗಿದೆ.

ಉತ್ಸವದ ಮೊದಲ ದಿನ ಸಂಜೆ ತಕ್ಕರ ಮನೆಯಿಂದ ಭಂಡಾರ ಇಳಿಸಿ, ಭಾನುವಾರ ಮಧ್ಯಾಹ್ನ ಮಹಾಪೂಜೆ, ಪೊದಮ್ಮ ದೇವಸ್ಥಾನದಲ್ಲಿ ಅಕ್ಕಿ ಹೇರು, ದೇವರ ಮೆರವಣಿಗೆ ನಡೆಯಿತು. ಸೋಮವಾರ ಸಾರ್ವಜನಿಕ ಸಾಮೂಹಿಕ ಸತ್ಯನಾರಾಯಣ ಪೂಜೆ, ಗಣಪತಿ ಹೋಮ, ದೇವರಿಗೆ ಹೂವಿನ ಅಲಂಕಾರ, ಮಹಾಪೂಜೆ ನಡೆಯಿತು. ನಂತರ ಸಂಜೆ ಕಾವೇರಿ ನದಿಯಲ್ಲಿ ದೇವರ ಸ್ನಾನ ಮುಗಿಸಿ ದೇವಾಲಯದ ಸುತ್ತ ದೇವರು ಪ್ರದಕ್ಷಿಣೆ ನಡೆಸಿ ಮಹಾಮಂಗಳಾರತಿ ಮಾಡಲಾಯಿತು. ನೆರೆದಿದ್ದ ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.