ಮಡಿಕೇರಿ, ಮಾ. ೨೬: ಸ್ಕೀಯಿಂಗ್ ಸಾಹಸಿ ಕ್ರೀಡೆಯಲ್ಲಿ ಸಾಧನೆ ತೋರುತ್ತಿರುವ ಕೊಡಗಿನ ಯುವತಿ ತೆಕ್ಕಡ ಭವಾನಿ ನಂಜುAಡ ಇದೀಗ ಈ ಕ್ರೀಡೆಯಲ್ಲಿ ಮತ್ತೊಂದು ಮಿಂಚು ಹರಿಸಿದ್ದಾಳೆ. ಜಮ್ಮು ಮತ್ತು ಕಾಶ್ಮೀರದ ಗುಲ್‌ಮಾರ್ಗ್ನಲ್ಲಿ ಮೊನ್ನೆ ನಡೆದ ಬಯಥ್ಲಾನ್ ರಾಷ್ಟಿçÃಯ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗಳಿಸಿದ ಇವರು ಇದೀಗ ನಿನ್ನೆ ಜರುಗಿದ ಸ್ಕೀಯಿಂಗ್ ಕ್ರಾಸ್ ಕಂಟ್ರಿ ರಾಷ್ಟಿçÃಯ ಚಾಂಪಿಯನ್‌ಶಿಪ್‌ನಲ್ಲಿ ಒಂದು ಚಿನ್ನ ಹಾಗೂ ಎರಡು ಬೆಳ್ಳಿ ಪದಕದ ಸಾಧನೆ ಮಾಡಿದ್ದಾರೆ. ಗುಲ್‌ಮಾರ್ಗ್ ನಲ್ಲಿ ಜರುಗಿದ ೧.೫ ಕಿ.ಮೀ., ೧೦ ಕಿ.ಮೀ. ಹಾಗೂ ೫ ಕಿ.ಮೀ.ನ ಕ್ರಾಸ್ ಕಂಟ್ರಿ ಸ್ಕೀಯಿಂಗ್‌ನಲ್ಲಿ ಈ ಪದಕ ಪಡೆದುಕೊಂಡಿದ್ದಾರೆ.
ಕ್ರಾಸ್ ಕಂಟ್ರಿ ಸ್ಕೀಯಿಂಗ್ ವಿಂಟರ್ ಒಲಂಪಿಕ್ಸ್ ಕ್ರೀಡಾಕೂಟದ ಒಂದು ಭಾಗವಾಗಿದೆ. ೨೦೨೬ರಲ್ಲಿ ಇಟಲಿಯಲ್ಲಿ ವಿಂಟರ್ ಒಲಂಪಿಕ್ಸ್ ಕ್ರೀಡಾಕೂಟ ಜರುಗಲಿದ್ದು ಇದರಲ್ಲಿ ಪಾಲ್ಗೊಳ್ಳುವುದು ತಮ್ಮ ಗುರಿಯಾಗಿದೆ ಎಂದು ಭವಾನಿ ‘ಶಕ್ತಿ’ಯೊಂದಿಗೆ ಪ್ರತಿಕ್ರಿಯಿಸಿದರು.
ಈ ಸಾಹಸಮಯವಾದ ಕ್ರೀಡೆಯಲ್ಲಿ ಇಡೀ ದಕ್ಷಿಣ ಭಾರತದಿಂದ ಸ್ಪರ್ಧಿಸುತ್ತಿರುವ ಏಕೈಕ ಕ್ರೀಡಾಪಟು ಇವರಾಗಿದ್ದಾರೆ. ಈ ಕ್ರೀಡೆಯಲ್ಲಿ
(ಮೊದಲ ಪುಟದಿಂದ) ಸಾಧನೆ ಮಾಡಲು ಸಾಕಷ್ಟು ಪರಿಶ್ರಮ, ತರಬೇತಿಯ ಅಗತ್ಯವಿದ್ದು, ಅಪಾರ ವೆಚ್ಚವೂ ಎದುರಾಗಲಿದೆ. ಕರ್ನಾಟಕ ಸರಕಾರದಿಂದ ಈ ತನಕ ರೂ. ೨ ಲಕ್ಷ ಹಣ ಸಹಾಯ ಮಾತ್ರ ದೊರೆತಿದೆ. ಉತ್ತರ ಭಾರತದ ರಾಜ್ಯಗಳ ಕ್ರೀಡಾಪಟುಗಳೇ ಈ ಕ್ರೀಡೆಯಲ್ಲಿ ಪಾಲ್ಗೊಳ್ಳುತ್ತಿದ್ದು, ಅಲ್ಲಿನ ಸರಕಾರಗಳು ಸಾಕಷ್ಟು ಉತ್ತೇಜನ ನೀಡುತ್ತಿವೆ. ದಕ್ಷಿಣ ಭಾರತದಿಂದ ತಾವೊಬ್ಬರೇ ಇದ್ದು ಸರಕಾರದ ಹೆಚ್ಚಿನ ಸಹಾಯವನ್ನು ನಿರೀಕ್ಷಿಸುವುದಾಗಿ ಭವಾನಿ ಹೇಳಿದ್ದಾರೆ. ಇವರು ನಾಪೋಕ್ಲು ಪೇರೂರುವಿನವರಾದ ತೆಕ್ಕಡ ನಂಜುAಡ ಹಾಗೂ ಪಾರ್ವತಿ ದಂಪತಿಯ ಪುತ್ರಿಯಾಗಿದ್ದಾರೆ.