ಇಲ್ಲಿಯ ಅರ್ಚಕ ವಿಭಾಗದವರು ಅವರ ಬದಲಿಗೆ ಬೇರೆ ಬ್ರಾಹ್ಮಣರನ್ನು ಅರ್ಚನೆಗೆ ತೊಡಗಿಸುತ್ತಿರುವುದು ಕಂಡು ಬರುತ್ತದೆ. ಇದರಿಂದ ಶ್ರೀ ಕಾವೇರಿ ಮೂಲಮಂತ್ರ, ಧ್ಯಾನ, ಪೂಜಾ ನಿಯಮಗಳ ಬಗ್ಗೆ ಯಾವುದೇ ಉಪದೇಶ ಕೊಡದೇ, ಪಡೆದುಕೊಳ್ಳದೇ, ಒಟ್ಟಾರೆ ಧನಾರ್ಜನೆಯೇ ಮುಖ್ಯ ಗುರಿ ಯಾಗಿರುವುದು, ಶ್ರೀ ಕಾವೇರಿ ತೀರ್ಥ ಜಲವು ಕೇವಲ ಮಾರಾಟದ ಸರಕಾಗಿರುವುದೂ ಕೂಡ ಇಲ್ಲಿ ಶ್ರೀ ಕಾವೇರಿ ಮಾತೆಗೆ ಹಿತವಾಗಿರುವುದಿಲ್ಲ.
ಏಕೆಂದರೆ ಶ್ರೀ ಕಾವೇರಿ ಮಾತೆಯ ಪೌರಾಣಿಕ, ವೈದಿಕ, ಪಾರಮಾರ್ಥಿಕ ಹಿನ್ನೆಲೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ, ಭಕ್ತಿ ಶ್ರದ್ಧಾಪೂರ್ವಕವೇ ಪೂಜೆ ಪುನÀಸ್ಕಾರಗಳು ಆಗಬೇಕಾಗಿರುತ್ತದೆ ಎಂಬದಾಗಿ ಕಂಡು ಬರುತ್ತದೆ. ಪರಂಪರೆಯ ಅರ್ಚಕರೇ ಇರಲಿ, ಪೂಜಿಸಬೇಕಾದ್ದು ಅಗತ್ಯವಾದರೂ, ಕೆಲವು ಅನಿವಾರ್ಯ ಸಂದರ್ಭಗಳಲ್ಲಿ, ಸೂತಕಾದಿಗಳಲ್ಲಿ, ಕ್ಷೇತ್ರ ಸಂವಿಧಾನದಲ್ಲಿ ತಿಳಿಯಪಡಿಸಿದಂತೆ ಮುಂದುವರೆಯಬೇಕಾಗಿರುವುದು ಮುಖ್ಯವಾಗಿದೆ ಎಂದು ತಿಳಿದು ಬರುತ್ತದೆ.
ಹಿಂದೆ ಅರ್ಚಕರಲ್ಲಿ ಮಂತ್ರವಾದಿಗಳಾಗಿದ್ದವರು, ಇಲ್ಲಿ ಶ್ರೀಕಾವೇರಿ ಮಾತೆಯನ್ನು ಅನ್ಯ ಮಂತ್ರಗಳು ಹಾಗೂ ಉಗ್ರದೇವತಾ ಮಂತ್ರಗಳಿAದ ಆರಾಧಿಸಿರುವುದೂ ಕಂಡು ಬರುತ್ತದೆ. ಇದಲ್ಲದೆ, ಅರ್ಚಕರು ಅವರ ಬದಲಿಗೆ ಬಂದ ಬ್ರಾಹ್ಮಣರಿಗೆ ಪೂಜಾ ಕ್ರಮಗಳನ್ನು ಸರಿಯಾಗಿ ಮಾರ್ಗದರ್ಶನ ಕೊಡದೇ ಮಾಡಿಸಿದ್ದರಿಂದುAಟಾದ ದುರ್ಘಟನೆಯೂ ಸೇರಿರುತ್ತದೆ. ಕೆಲವು ಅರ್ಚಕ ವಿಭಾಗದವರು, ನಿಷಿದ್ಧ ವಸ್ತುಗಳ ವ್ಯಾಪಾರ-ವ್ಯವಹಾರದಲ್ಲಿ ತೊಡಗಿರುವುದೂ ಕಂಡು ಬರುತ್ತಿರುವುದರಿಂದ ಪರಂಪರೆಯ ಕುಟುಂಬದ ಪೂಜಾಧಿಕಾರ, ಪಾವಿತ್ರö್ಯ ಹಾಗೂ ಹಕ್ಕು ಇರುವವರು ಸಂಖ್ಯೆ ಯಲ್ಲಿ ಇಳಿಮುಖವಾಗುತ್ತಿರುವುದೂ ಕಂಡು ಬಂದಿದೆ.
ಅಲ್ಲದೆ, ಇಲ್ಲಿಯ ಪೂಜೆಗೆ ಅತ್ಯಂತ ಗೌಪ್ಯವಾದ ತಂತ್ರಿಗಳು ಮತ್ತು ಅರ್ಚಕರು ಮಾತ್ರವೇ ತಿಳಿದಿರಬೇಕಾದ ಕೆಲವು ಮಂತ್ರಗಳ ಜಪ, ಕ್ರಮ, ನಿಯಮಗಳು ಪುರಾತನ ಸಂಕಲ್ಪದಿAದ ನಡೆದುಕೊಂಡು ಬಂದಿದ್ದುದು ಇತ್ತೀಚೆಗೆ ಕೆಲವಾರು ವರ್ಷಗಳಿಂದ ಕಂಡುಬರುತ್ತಿಲ್ಲವಾಗಿದೆ. ಇದು ಇಲ್ಲಿಯ ಆಚಾರ-ವಿಚಾರಗಳ ಬಗ್ಗೆ ಆಚಾರ್ಯರಾದ ತಂತ್ರಿಗಳೊಡನೆ ಯಾವುದೇ ಸಂದರ್ಭದಲ್ಲಿಯೂ ಸಮಾಲೋಚನೆ, ನಡೆಸದೆ ಮಾರ್ಗದರ್ಶನ ಪಡೆಯದೆ ಇರುವುದರ ಫಲಿತಾಂಶವಾಗಿದ್ದು, ತಂತ್ರಿಗಳು, ಅರ್ಚಕರು, ಆಡಳಿತ ಮಂಡಳಿಯವರು ಸಮಾನ ವೇದಿಕೆಯಲ್ಲಿ ಚರ್ಚಿಸಿದ್ದರ ಫಲವಾಗಿರುತ್ತದೆ. ಪೂಜಾಕರ್ಮಗಳಲ್ಲಿ ಲೋಪ, ಅಶುದ್ಧಿ, ಸಂಪ್ರದಾಯದ ಉಲ್ಲಂಘನೆ, ಮಾತ್ರವಲ್ಲ ಬದಲಿ ವ್ಯಕ್ತಿಗಳಿಂದ, ಆಗಾಗ ಬದಲಾವಣೆ ಮಾಡಿಕೊಂಡು ಮುಂದುವರೆಯುವ ಅರ್ಚಕರಿಂದ ಇಲ್ಲಿನ ಸಾನ್ನಿಧ್ಯವು ಅತ್ಯಂತ ಗಂಭೀರ ವಾಗಿ ಕ್ಷಯಿಸುತ್ತಿರುವುದು ಕಂಡು ಬರುತ್ತದೆ.
ಶ್ರೀ ಕಾವೇರಿ ಮಾತೆಗೆ ಮೂರ್ತಿ (ಬಿಂಬ)ಯು ಬೇಡವಾಗಿದ್ದು, ತೀರ್ಥ ಕುಂಡಿಕೆಯ ತಳಕ್ಕೆ ಕ್ಷುದ್ರ ಜಂತುಗಳು ಬಿದ್ದು ಮರಣ ಪಡುವುದು ಕಾಣುತ್ತಿದ್ದು, ಇದರಿಂದ ಪೂರ್ಣ ರಕ್ಷಿಸುವುದಲ್ಲದೆ, ತಳ ಮತ್ತು ತೀರ್ಥದ ಒಸರು ಸ್ಥಳದ ಪರಿಶೋಧನೆ ಸ್ಪರ್ಶನ ಮಾಡದೇ ಅತ್ಯಂತ ಶ್ರದ್ಧಾಭಕ್ತಿ ಹಾಗೂ ಶುದ್ಧ ಮುದ್ರಿಕೆಯಿಂದ ಅದರ ಆಯ ಪ್ರಮಾಣಕ್ಕೆ ಕಿಂಚಿತ್ತೂ ಭಂಗÀ ಬಾರದಂತೆ, ಶಿಲ್ಪ ಶಾಸ್ತಿçÃಯ ರೀತ್ಯಾ, ಭದ್ರವಾಗಿ, ದೃಢವಾಗಿ ಮತ್ತು ಸುಂದರವಾಗಿ ಶ್ರೀ ಕಾವೇರಿ ತೀರ್ಥಕುಂಡಿಕೆಯನ್ನು ಉತ್ತಮ ಶಿಲೆಗಳಿಂದ ಕಟ್ಟತಕ್ಕದ್ದು ಬಹಳ ಮುಖ್ಯವಾಗಿದೆ.
ಈ ತೀರ್ಥ ಕುಂಡಿಕೆಗೆ ನಾಣ್ಯಗಳು ಆಧುನಿಕ ಪದ್ಧತಿಯಲ್ಲಿ ತಯಾರಾದ ರಾಸಾಯನಿಕ ಕುಂಕುಮ, ಹೂವು, ತುಳಸಿ ಇತ್ಯಾದಿಗಳನ್ನು ನಿತ್ಯವೂ ಆಗಮಿಸುವ ಬಹುಸಂಖ್ಯೆಯ ಭಕ್ತರು ಹಾಕುವುದರಿಂದ ಶ್ರೀ ಕಾವೇರಿ ತೀರ್ಥದ ಒಸರು ಪ್ರದೇಶದ ಅತ್ಯಂತ ಸೂಕ್ಷö್ಮವೂ, ಪರಿಶುದ್ಧವೂ, ದೈವಿಕವೂ ಆದ ಆಯಾಕಟ್ಟಿನ ಸ್ಥಳಕ್ಕೆ ಆಘಾತವನ್ನು ನೀಡಬಹುದಾದ್ದರಿಂದ ಭಕ್ತಿಯ ಆವೇಶದಲ್ಲಿ ನಡೆಯುತ್ತಿರುವ, ಶ್ರೀಕಾವೇರಿ ತೀರ್ಥದ ಪಾವಿತ್ರö್ಯಕ್ಕೆ ಆಗುತ್ತಿರುವ ಈ ಗಂಡಾAತರವನ್ನು ಅವಶ್ಯವಾಗಿ, ಯೋಗ್ಯವಾಗಿ ನಿಭಾಯಿಸಬೇಕಾಗಿರು ವುದು ಮುಖ್ಯವಾಗಿದೆ. ಅಲ್ಲದೆ, ತೀರ್ಥಕುಡಿಕೆಯ ಜೀರ್ಣೋದ್ಧಾರವೂ ಅಗತ್ಯವಾಗಿದೆ. ಈ ಶ್ರೀ ತಲಕಾವೇರಿ ಕ್ಷೇತ್ರದಲ್ಲಿರುವ ಸಾನ್ನಿಧ್ಯಗಳ ಸಂಖ್ಯೆ ಐದು. ಶ್ರೀ ಕಾವೇರಿ ಮಾತೆ, ಶ್ರೀ ಅಗಸ್ತೆö್ಯÃಶ್ವರ, ಶ್ರೀ ಶಾಸ್ತಾವು (ವನಶಾಸ್ತಾವು), ಶ್ರೀ ಅಗಸ್ತö್ಯ ಮಹರ್ಷಿ (ಗುರು), ಶ್ರೀ ಮಹಾಗಣಪತಿ.
ಶ್ರೀ ಮಹಾಗಣಪತಿಯ ಗುಡಿಯ ಪುನರ್‌ಪ್ರತಿಷ್ಠೆ ಇಪ್ಪತ್ತೆöÊದು ವರ್ಷಗಳಿಗೆ ಮೊದಲು ಆಗುವಾಗ ಆಯ ದೋಷ ಉಂಟಾಗಿರುತ್ತದೆ. ಈ ಗಣಪತಿಗೆ ಸರಿಯಾದ ವಾಣಿಪೀಠವಿಲ್ಲ. ಶ್ರೀ ಗಣಪತಿಯ ಬಿಂಬವು ಚೈತನ್ಯ ಪೂರ್ಣವಾಗಿದ್ದು, ಪೀಠವನ್ನು ಬದಲಾಯಿಸಲೇಬೇಕು ಎಂಬುದಾಗಿ ಕಂಡಿರುತ್ತದೆ ಹಾಗೂ ನೈವೇದ್ಯದಲ್ಲಿ ಭಾರೀ ಭಂಗದೋಷ, ಗಣಪತಿಗೆ ಹೊಟ್ಟೆ ತುಂಬಾ ನೈವೇದ್ಯವು ಸಿಗುತ್ತಿಲ್ಲ. ಶುದ್ಧವಾದ ದನದ ತುಪ್ಪದಿಂದ ಅಪ್ಪ, ಕಜ್ಜಾಯಗಳನ್ನು ಬೇಯಿಸದೆ, ವಿಶಿಷ್ಟ ವನಸ್ಪತಿ, ಡಾಲ್ಡಾಗಳನ್ನು ಬಳಸುತ್ತಿರುವದು ಕಂಡುಬರುತ್ತಿದ್ದು, ಈ ಬಗ್ಗೆ ತೀವ್ರ ಗಮನ ಹರಿಸತಕ್ಕದ್ದಾಗಿದೆ ಹಾಗೂ ಸಂಪಡಿಸಬೇಕಾಗಿದ್ದಿದೆ.
ಪ್ರತಿ ಮಂಗಳವಾರ, ಶುಕ್ರವಾರದಲ್ಲಿ, ವಿಶೇಷ ನೈವೇದ್ಯಗಳನ್ನು ಗಣಪತಿಗೆ ಮಾಡತಕ್ಕದ್ದು ಎಂಬುದಾಗಿ ಕಂಡು ಬಂದಿದೆ.
ಈ ಗಣಪತಿಯ ಮೂರ್ತಿಯ ಹತ್ತಿರ ಒಂದು ಗುಂಡುಕಲ್ಲು ಇದ್ದು, ಇದು "ಅಯ್ಯಪ್ಪ ಕಾಡು"ವಿನಲ್ಲಿಯ ವನಶಾಸ್ತಾವಿನ ಬಿಂಬವಾಗಿರುತ್ತೆ, ಅಯ್ಯಪ್ಪ ಕಾಡಿಗೆ ಹೋಗಿ ಪೂಜೆ ಮಾಡಿ ಬರಲು ಅನಾನುಕೂಲವಾಗುತ್ತದೆಂಬ ಕಾರಣದಿಂದ ಅರ್ಚಕ ವರ್ಗದವರಲ್ಲೊಬ್ಬರು ಇಲ್ಲಿಗೆ ತಂದು ಇಟ್ಟಿದ್ದಾಗಿದೆ. ಇದರಿಂದಾಗಿ ಗಣಪತಿಗೆ ಅರ್ಪಿಸಿದ ವೈವೇದ್ಯ ಎರಡು ಪಾಲಾಗುವುದ ರಿಂದಲೂ ಶಿಲ್ಪಶಾಸ್ತಿçÃಯ ನಿಯಮಗಳಿಗೆ ವಿರೋಧವಾಗಿ "ವನಶಾಸ್ತಾರ"ನ ಗುಂಡುಕಲ್ಲು ಇದ್ದು ಗಣಪÀತಿಗೆ ತಡೆಯೊಡ್ಡುತ್ತಿರುವುದರಿಂದಲೂ ಸಾನ್ನಿಧ್ಯ ಸಂಘರ್ಷ ಏರ್ಪಟ್ಟಿರುತ್ತದೆ.
ಶ್ರೀ ಗಣಪತಿ ದೇವರ ಗರ್ಭಗೃಹದ ಸಮೀಪ ಚಾಮುಂಡಿ ಪ್ರತಿಷ್ಠೆಯಿದ್ದು, ಇದಕ್ಕೆ ನೂತನ ಕಟ್ಟೆ ನಿರ್ಮಿಸಿ ಪ್ರತಿಷ್ಠಾಕಲಶ ಮಾಡಿರುವುದು ಕಂಡು ಬರುತ್ತದೆ. ಇಲ್ಲಿ ಸಮೀಪದ ಈಶಾನ್ಯ ಭಾಗದ ಕಾಡಿನಲ್ಲಿ ಕೂಡ ಚಾಮುಂಡಿ ಸ್ಥಾನವಿದೆ. ಅಲ್ಲಿಗೆ ಹೋಗಿ, ಆರಾಧನೆ ಮಾಡುವುದು ಲೋಪವಾಗುತ್ತಾ ಇದೆ. ಇನ್ನು ಮುಂದೆ ಸರಿಪಡಿಸ ಬೇಕು. ಆಟಿ, ಅಮಾವಾಸ್ಯೆ, ನವಾನ್ನ, ಧನುರ್ವ್ಯತೀಪಾತ, ಷಷ್ಠಿ, ಶಿವರಾತ್ರಿ, ವಸಂತೋತ್ಸವ, ಎಳ್ಳಮಾವಾಸ್ಯೆಗಳಲ್ಲಿ ಅನ್ನದಾನವು ವಿಶಿಷ್ಟ ರೀತಿಯಲ್ಲಿ ಶ್ರೀ ತಲಕಾವೇರಿ ಕ್ಷೇತ್ರದಲ್ಲಿ ಆಗುತ್ತಿ ದ್ದುದು ಈಗ ಕಡಿಮೆಯಾಗುತ್ತಾ ಬಂದಿರುತ್ತದೆ. ಈ ಅನ್ನದಾನ ಗಳಿಗೆ ಕಾವೇರಿಗದ್ದೆ ಎಂಬ ಹೆಸರಿನ ಜಾಗೆಯಿರುವ ತೊಡಿಕಾನ ಹಾಗೂ ಪೆರಾಜೆ ಪ್ರದೇಶದಿಂದಲೂ ಅಕ್ಕಿಯು ಬರುವ ಸಂಪ್ರದಾಯವಿತ್ತು.
ಇಲ್ಲಿಯ ನೈವೇದ್ಯ ಶಾಲೆಯು ಸರಿಯಾಗಿ ಇಲ್ಲದಿರುವುದರಿಂದ ಶಿಲ್ಪ ಶಾಸ್ತಾçನುಸಾರವಾಗಿ ಜೀರ್ಣೋದ್ಧಾರ, ನವೀಕರಣಾದಿಗಳನ್ನು ಈ ಕ್ಷೇತ್ರದಲ್ಲಿ ಮಾಡುವಾಗ ಹೊಸ ಪಾಕಶಾಲೆಯನ್ನೂ ನಿರ್ಮಾಣ ಮಾಡಬೇಕು. ನೈವೇದ್ಯಗಳ ಶುದ್ಧಿ-ಪಾವಿತ್ರö್ಯಗಳ ದೃಷ್ಟಿಯಿಂದ ನೂತನ ಪಾಕಶಾಲೆ ಅತ್ಯಗತ್ಯವಾಗಿರುತ್ತದೆ.
ಇಲ್ಲಿ ದೇವರಿಗೆ ಸಮರ್ಪಿತವಾದ ನೈವೇದ್ಯವನ್ನು ಕ್ರಯ-ವಿಕ್ರಯ ಮಾಡುವುದು, ಪಾಕ ಮಾಡಲು ಅಪವಿತ್ರ ದ್ರವ್ಯಗಳ ಉಪಯೋಗ, ವಿಶಿಷ್ಟ ಡಾಲ್ಡಾ-ವನಸ್ಪತಿಗಳ ಸಂಯೋಗಗಳೇ ಮೊದಲಾದವುಗಳು ಅತ್ಯಂತ ಗಂಭೀರ ವಾದ ತಪ್ಪುಗಳಾಗಿದ್ದು, ಇದರಿಂದ ಶ್ರೀ ದೇವರಿಗೆ ನೈವೇದ್ಯ ಲೋಪವುಂಟಾಗಿ ಸಾನ್ನಿಧ್ಯ ಕ್ಷಯವಾಗುತ್ತಾ ಬಂದಿರುತ್ತದೆ. ಅಪೂರ್ವ, ಉತ್ತಮ ಪುಷ್ಪವೃಕ್ಷಗಳು ಇಲ್ಲಿ ಪೂಜೆಯ ಉಪಯೋಗಕ್ಕಾಗಿ ಇದ್ದದ್ದು ನಾಶವಾಗಿ ಹೋಗಿದ್ದು, ಅಂತಹ ಹಲವು ವೃಕ್ಷಗಳನ್ನು ನೆಟ್ಟು ಬೆಳೆಸತಕ್ಕದ್ದು ಅತ್ಯಗತ್ಯವಾಗಿರುತ್ತದೆ. ಈ ಕ್ಷೇತ್ರದಲ್ಲಿ ಉತ್ತಮ ಸರ್ಪಗಳನ್ನು ಹಿಂಸಿಸಿ ನಾಶಪಡಿಸಿದ್ದು ಮತ್ತು ಗೋವುಗಳಿಗೆ ಕೂಡ ಹಿಂಸೆ ಮಾಡಿದ್ದೂ ಕಂಡು ಬಂದಿರುತ್ತದೆ.
ಬ್ರಹ್ಮಗಿರಿ ಹಾಗೂ ಇಲ್ಲಿಯ ಸಪ್ತರ್ಷಿಗಳ ಆವಾಸಸ್ಥಾನವು ಅತ್ಯಂತ ಪವಿತ್ರ ಪ್ರದೇಶವಾದ ಕಾರಣ, ಅಪವಿತ್ರ ವ್ಯಕ್ತಿಗಳು, ಮದ್ಯ ಮಾಂಸ ಹಾಗೂ ಇನ್ನಿತರ ಅನೈತಿಕ ವ್ಯಸನವುಳ್ಳ ವ್ಯಕ್ತಿಗಳು ಸಂತೋಷ ವಿಹಾರಾರ್ಥವಾಗಿ, ಮೋಜಿಗಾಗಿ ತಿರುಗಾಟ ಮತ್ತು ಕೂಟ, ಮನೋರಂಜನೆಗಾಗಿ ಆಟೋಟ, ಊಟ ಇತ್ಯಾದಿಗಳನ್ನು ಮಾಡಿ, ಪರಿಸರ ಮಾಲಿನ್ಯಗೊಳಿಸುವವರೂ ಇತ್ಯಾದಿ ವ್ಯಕ್ತಿಗಳಿಗೆ ಪ್ರವೇಶವನ್ನು ನಿಷೇಧಿಸಬೇಕೆಂಬುದು ಕಂಡು ಬರುತ್ತದೆ. ಇಲ್ಲಿ ಯಾವುದೇ ಕಾಂಕ್ರೀಟ್ ನಿರ್ಮಾಣಗಳನ್ನು ಮಾಡದೇ ಆಶ್ರಮ ಪರಿಸರದಂತೆ ಕಾಯ್ದುಕೊಳ್ಳುವದು ಅಗತ್ಯವಾಗಿದೆಯೆಂದು ಕಂಡಿರುತ್ತದೆ.
ದೇವಾAಗನೆಯರು, ದೇವತೆಗಳು, ವಿವಿಧ ವಿಶಿಷ್ಟರಾದ ದೇವತಾ ಚೈತನ್ಯ ಸ್ವರೂಪಿಗಳು, ಋಷಿ, ಮಹರ್ಷಿಗಳು, ರಾತ್ರಿ ಕಾಲದಲ್ಲಿ ಸಪ್ತರ್ಷಿಗಳ ವಾಸಭೂಮಿ ಮತ್ತು ಯಾಗಭೂಮಿಯಾದ ಶ್ರೀ ತಲಕಾವೇರಿ ಸಮುಚ್ಛಯದಲ್ಲಿ ಶ್ರೀ ಕಾವೇರಿಯ ದೈವಿಕವಾದ, ದಿವ್ಯವಾದ ಅಮೃತ ಪ್ರಭಾ ವಲಯದ ಶಕ್ತಿ ಸಂಚಯನಕ್ಕಾಗಿ ಸಂಚರಿಸುವದು, ಶ್ರೀ ಕಾವೇರಿ ಪುಣ್ಯಜಲದಲ್ಲಿ ಸ್ನಾನ ಮಾಡುವುದೂ, ಧ್ಯಾನ, ಯೋಗಗಳಲ್ಲಿ ಮಗ್ನರಾಗಿ ತಪಸ್ಸು ಗೈಯುವುದು ಇರುವ ಕಾರಣ ಮನುಷ್ಯ ವಾಸವು ಇಲ್ಲಿ ರಾತ್ರಿ ಕಾಲದಲ್ಲಿ ಖಂಡಿತಾ ನಿಷೇಧವಾಗಿರುತ್ತದೆಯಾದುದರಿಂದ ಕಾವಲು-ಭದ್ರತೆ ಯವರು, ಬೇರೆ ಅಗತ್ಯ ವ್ಯಕ್ತಿಗಳು ಬಾಹ್ಯ ಪರಿಧಿಯಲ್ಲಿ ನಿಲ್ಲಬಹುದೆಂದು ಕಂಡುಬAದಿರುತ್ತದೆ. ಈ ಬಗ್ಗೆ ಗಮನ ಹರಿಸತಕ್ಕದ್ದು.
ಮಹರ್ಷಿ ಶ್ರೀ ಅಗಸ್ತö್ಯರ ಸಂಕಲ್ಪವಿರುವ, ಸಾನಿಧ್ಯವಿರುವ ಶ್ರೀ ತಲಕಾವೇರಿ ಕ್ಷೇತ್ರದ ನಿರ್ಮಾಣದ, ಪೌರಾಣಿಕ ಮಹಾತ್ಮೆಯ ಕರ್ಮಸಾಕ್ಷಿ ಯಾದ ಅಪೂರ್ವ ಪುರಾತನವಾಗಿದ್ದ ಅಶ್ವತ್ಥ ವೃಕ್ಷದ ಬೇರುಗಳನ್ನು ಭೇದ ಮಾಡಿ, ಅದರ ಅಸ್ತಿತ್ವವನ್ನು ನಿರ್ಲಕ್ಷಿಸಿ, ಪೂಜ್ಯ ವೃಕ್ಷದ ಬೆಳವಣಿಗೆಗೆ ತಡೆ ಮಾಡಿ ಇಟ್ಟುದ್ದರಿಂದ ಕ್ರಮೇಣ ಅದು ಒಣಗಿ ಹೋಗಿದೆ ಮತ್ತು ಅದರಲ್ಲಿಯ ಶ್ರೀ ಅಗಸ್ತö್ಯರ ಮಹಾಸಾನ್ನಿಧ್ಯಕ್ಕೇ ಭಂಗ ಬಂದಿದೆಯೆAದು ಕಂಡುಬರುತ್ತದೆ. ಇದೊಂದು ಅತ್ಯಂತ ಗಂಭೀರವಾದ ಮಹಾಪ್ರಮಾದ ವೆಂದು ತಿಳಿದು ಬರುತ್ತದೆ.
ಈಗಿನ ಅರ್ಚಕ ವಿಭಾಗದವರು ಅರ್ಚಕಾಧಿಕಾರವನ್ನು ವಿಭಾಗ ಮಾಡಿದ ಕಾರಣ ಅವರವರ ಹಕ್ಕು ಪ್ರಕಾರ ನಡೆಸುವ ಪೂಜಾ ವಿಧಾನ, ರ‍್ಯಾಯಗಳಲ್ಲಿ ಅಪರಿಚಿತರು, ಮಂತ್ರಹೀನರು ನಿಯಮ-ನಿಷ್ಠೆಗಳಿಲ್ಲದ ಅನುಷ್ಠಾನ ರಹಿತ ಬ್ರಾಹ್ಮಣರನ್ನು ಸಂಬಳಕ್ಕಾಗಿ ನೇಮಿಸಿ, ಅವರಿಂದ ಕರ್ಮಾದಿಗಳನ್ನು ಇನ್ನು ಮೇಲೆ ಮಾಡಿಸಬಾರದೆಂದು ಕಂಡು ಬಂದಿರುತ್ತದೆ. ಸಾಧ್ಯವಾದಷ್ಟು ಮಟ್ಟಿಗೆ ಅರ್ಚಕ ಕುಟುಂಬದವರೇ ಪೂಜಿಸತಕ್ಕದ್ದು, ಅನಾನುಕೂಲವಾದಲ್ಲಿ, ಸಂಧ್ಯಾವAದನಾದಿ ನಿಯಮ ನಿಷ್ಠೆ, ಅನುಷ್ಠಾನಗಳಿರುವ ವಿಶಿಷ್ಟ ಬ್ರಾಹ್ಮಣರಿಂದಲೇ ಪೂಜಾದಿಗಳ ಕಾರ್ಯಗಳನ್ನು ಮಾಡಿಸತಕ್ಕದ್ದು ಎಂಬುದಾಗಿ ತಿಳಿದು ಬರುತ್ತದೆ. ಅಲ್ಲದೆ ಮಹರ್ಷಿ ಶ್ರೀ ಅಗಸ್ತö್ಯರಿಗೆ ಶ್ರೀ ಅಶ್ವತ್ಥ ವೃಕ್ಷದಲ್ಲಿ ಸಲ್ಲಿಸುವ ಪೂಜಾ ವಿನಿಯೋಗಾದಿಗಳಲ್ಲಿ ಗಂಭೀರ ವಾದ ಲೋಪ, ಉಪೇಕ್ಷೆ, ದೋಷಗಳಿವೆಯೆಂದು ಕಂಡಿರುತ್ತದೆ. (ಮುಂದುವರಿಯುವುದು)
- ಜಿ. ರಾಜೇಂದ್ರ, ಮಡಿಕೇರಿ.