ಸುಳ್ಯ, ಮಾ. ೨೬: ಏ. ೯-೧೭: ಸುಳ್ಯದಲ್ಲಿ ಕುಡೆಕಲ್ಲು ಗೌಡ ಕಪ್ -೨೦೨೨ ನಾಕೌಟ್ ಮಾದರಿಯ ಕ್ರಿಕೆಟ್ ಪಂದ್ಯಾಟ ಏರ್ಪಡಿಸಲಾಗಿದ್ದು, ಗೌಡ ಸಮುದಾಯದ ೧೦೦ ತಂಡಗಳು ಸೆಣಸಾಡಲಿವೆ.
ಕುಡೆಕಲ್ಲು ಗೌಡ ಕಮಿಟಿಯ ಆಶ್ರಯದಲ್ಲಿ ಏ. ೯ ರಿಂದ ೧೭ ರವರೆಗೆ "ಕುಡೆಕಲ್ಲು ಗೌಡ ಕಪ್ ೨೦೨೨" ಸುಳ್ಯ ಕೊಡಿಯಾಲಬೈಲು ಮಹಾತ್ಮ ಗಾಂಧಿ ಮಲ್ನಾಡು ಪ್ರೌಢಶಾಲೆಯ ಮೈದಾನದಲ್ಲಿ ಪಂದ್ಯಾಟ ನಡೆಯಲಿದೆ.
ಕೊಡಗು, ದಕ್ಷಿಣ ಕನ್ನಡ ಮತ್ತು ಕಾಸರಗೋಡು ಭಾಗz ಗೌಡ ಮನೆತನದ ಸುಮಾರು ೧೦೦ ತಂಡಗಳು ಪಂದ್ಯಾಟದಲ್ಲಿ ಸೆಣಸಾಡಲಿವೆ. ಪ್ರಥಮ ಬಹುಮಾನ ರೂ. ೩೦೦೦೧ ಹಾಗೂ ಟ್ರೊಫಿ, ದ್ವಿತೀಯ ಬಹುಮಾನ ರೂ. ೨೦೦೦೧ ಹಾಗೂ ಟ್ರೊಫಿ, ಸೆಮಿಫೈನಲ್ ಪ್ರವೇಶಿಸಿದ ಎರಡು ತಂಡಗಳಿಗೆ ವಿಶೇಷವಾಗಿ ತಲಾ ರೂ.೫೦೦೦ ಮತ್ತು ಟ್ರೋಫಿ ನೀಡಲಾಗುವುದು.
ಮೊದಲು ಹೆಸರು ನೋಂದಾಯಿಸಿದ ೧೦೦ ತಂಡಗಳಿಗೆ ಮಾತ್ರ ಅವಕಾಶ, ಪಂದ್ಯಾಟವು ೬ ಓವರ್ಗಳ ಟೆನ್ನಿಸ್ ಬಾಲ್ ಓವರ್ ಆರ್ಮ್ ನಾಕೌಟ್ ಮಾದರಿಯದ್ದಾಗಿರುತ್ತದೆ. ಭಾಗವಹಿಸುವ ತಂಡಗಳು ತಾ. ೩೧ ರ ಮುಂಚಿತವಾಗಿ ಹೆಸರು ನೋಂದಾಯಿಸಿಕೊಳ್ಳಬೇಕು. ನಂತರ ಬಂದ ಯಾವುದೇ ತಂಡಗಳಿಗೆ ಅವಕಾಶವಿಲ್ಲ. ಏಪ್ರಿಲ್ ೫ ರಂದು ತಂಡಗಳ ಟೈಸ್ ಬಿಡುಗಡೆ ಮಾಡಲಾಗುವುದು. ಭಾಗವಹಿಸುವ ತಂಡಗಳಿಗೆ ಸಮವಸ್ತç ಕಡ್ಡಾಯ ಇರುವುದಿಲ್ಲ. ಆದರೆ ಜೀನ್ಸ್ ಪ್ಯಾಂಟ್. ಟೈಟ್ ಫಿಟ್ಟ್ ಧರಿಸುವಂತಿಲ್ಲ.
ತಂಡಗಳು ಹೆಸರು ನೋಂದಾಯಿಸಲು ಮೊ. ೯೮೮೦೯೨೦೪೩೧ ಸಂಪರ್ಕಿಸುವAತೆ ಕುಡೆಕಲ್ಲು ಗೌಡ ಕಮಿಟಿ ಪಂದ್ಯಾಕೂಟದ ಸಂಚಾಲಕ ರಾಜೇಶ್ ಕುಡೆಕಲ್ಲು ತಿಳಿಸಿದ್ದಾರೆ.