ಬೆಲೆ ಏರಿಕೆ ವಿರುದ್ಧ ೩ ಹಂತದಲ್ಲಿ ದೇಶಾದ್ಯಂತ ಕಾಂಗ್ರೆಸ್ ಪ್ರತಿಭಟನೆ
ನವದೆಹಲಿ, ಮಾ. ೨೬: ಬೆಲೆ ಏರಿಕೆ ವಿರುದ್ಧ ಕಾಂಗ್ರೆಸ್ ಶನಿವಾರ ಮೂರು ಹಂತದ ಪ್ರತಿಭಟನಾ ಅಭಿಯಾನವನ್ನು ಘೋಷಿಸಿದ್ದು, ಮೆಹಂಗೈ-ಮುಕ್ತ್ ಭಾರತ್ ಅಭಿಯಾನ್‌ದ ಅಡಿಯಲ್ಲಿ ಮಾರ್ಚ್ ೩೧ ರಿಂದ ಏಪ್ರಿಲ್ ೭ ರವರೆಗೆ ದೇಶಾದ್ಯಂತ ರ‍್ಯಾಲಿಗಳು ಮತ್ತು ಮೆರವಣಿಗೆಗಳನ್ನು ಆಯೋಜಿಸಿದೆ. ಶನಿವಾರ ದೆಹಲಿಯಲ್ಲಿ ನಡೆದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳು ಮತ್ತು ರಾಜ್ಯ ಉಸ್ತುವಾರಿಗಳ ಸಭೆಯಲ್ಲಿ ಆಂದೋಲನವನ್ನು ಪ್ರಾರಂಭಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಈ ಕುರಿತಂತೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮತ್ತು ಮುಖ್ಯ ವಕ್ತಾರ ರಣದೀಪ್ ಸುರ್ಜೇವಾಲಾ ಅವರು ದೆಹಲಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಾಂಗ್ರೆಸ್ ಅಧ್ಯಕ್ಷರು, ಪಕ್ಷದ ಪ್ರಧಾನ ಕಾರ್ಯದರ್ಶಿಗಳು ಮತ್ತು ರಾಜ್ಯ ಉಸ್ತುವಾರಿಗಳೊಂದಿಗೆ ಸಮಾಲೋಚಿಸಿ, ಮೂರು-ಹಂತದ ಕಾರ್ಯಕ್ರಮ ಮೆಹಂಗೈ-ಮುಕ್ತ್ ಭಾರತ್' ಅಭಿಯಾನದಲ್ಲಿ ಜನರ ಪರವಾಗಿ ಹೋರಾಡಲು ನಿರ್ಧರಿಸ ಲಾಗಿದೆ ಎಂದು ಹೇಳಿದರು. ಏಪ್ರಿಲ್ ೨ ರಿಂದ ಏಪ್ರಿಲ್ ೪ ರವರೆಗೆ ಕಾಂಗ್ರೆಸ್, ಎನ್‌ಜಿಒಗಳು, ಧಾರ್ಮಿಕ, ಸಾಮಾಜಿಕ ಸಂಸ್ಥೆಗಳು ಮತ್ತು ನಿವಾಸಿ ಕಲ್ಯಾಣ ಸಂಸ್ಥೆ ಗಳೊಂದಿಗೆ ದೇಶಾದ್ಯಂತ ಜಿಲ್ಲಾ ಮಟ್ಟದಲ್ಲಿ ಧರಣಿ ಮತ್ತು ಮೆರವಣಿಗೆಗಳನ್ನು ಆಯೋಜಿ ಸುತ್ತದೆ. ಏಪ್ರಿಲ್ ೭ ರಂದು, ಕಾಂಗ್ರೆಸ್ ಪಕ್ಷವು ಸಾಮಾಜಿಕ ಮತ್ತು ಧಾರ್ಮಿಕ ಸಂಘಟನೆಗಳು, ಎನ್‌ಜಿಒಗಳು ಮತ್ತು ಜನರ ಸಹಾಯದಿಂದ “ಮೆಹಂಗೈ-ಮುಕ್ತ್ ಭಾರತ್” ಧರಣಿ ಮತ್ತು ಮೆರವಣಿಗೆಗಳನ್ನು ಎಲ್ಲಾ ರಾಜ್ಯ ಪ್ರಧಾನ ಕಚೇರಿಗಳಲ್ಲಿ ಆಯೋಜಿ ಸಲಿದೆ ಎಂದು ಸುರ್ಜೆವಾಲಾ ಹೇಳಿದರು.
ಹಿಜಾಬ್ ಬಗ್ಗೆ ಮಾತನಾಡಿಲ್ಲ ಸ್ವಾಮೀಜಿಗಳ ಬಗ್ಗೆ ಗೌರವವಿದೆ : ಸಿದ್ದರಾಮಯ್ಯ
ಮೈಸೂರು, ಮಾ. ೨೬: ಹಿಜಾಬ್ ಬಗ್ಗೆ ತಾವು ಮಾತ ನಾಡಿಯೇ ಇಲ್ಲ. ಸ್ವಾಮೀಜಿಗಳ ಬಗ್ಗೆ ಅಪಾರ ಗೌರವವಿದ್ದು, ಅವರನ್ನು ಅಗೌರವಿಸಿಲ್ಲ ಎಂದು ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ. ನಿನ್ನೆ ವಿಧಾನಸಭೆಯಲ್ಲಿ ಸಿದ್ದರಾಮಯ್ಯ ಅವರು ಹಿಜಾಬ್ ಕುರಿತು ಆಡಿದ್ದ ಮಾತುಗಳು ವ್ಯಾಪಕ ಚರ್ಚೆಗೆ ಗ್ರಾಸವಾಗಿತ್ತು. ಅಲ್ಲದೇ ಅವರ ಮಾತು ರಾಜ್ಯದ ಹಲವು ಮಠಗಳ ಶ್ರೀಗಳ ಕೆಂಗಣ್ಣಿಗೂ ಗುರಿಯಾಗಿತ್ತು. ಈ ಸಂಬAಧ ಕೆಲ ಸ್ವಾಮೀಜಿಗಳು ಬಹಿರಂಗವಾಗಿಯೇ ಮಾದ್ಯಮಗಳ ಎದುರು ಆಕ್ರೋಶ ಹೊರ ಹಾಕಿದ್ದರು. ಈ ಬೆಳವಣಿಗೆ ಬೆನ್ನಲ್ಲೇ ಬೆಂಗಳೂರಿನ ಟಿ.ಕೆ. ಲೇಔಟ್‌ನಲ್ಲಿರುವ ಅವರ ಮನೆಯಲ್ಲಿ ಸ್ಪಷ್ಟನೆ ನೀಡಿದ ಸಿದ್ದರಾಮಯ್ಯ ಅವರು, ನನ್ನ ಹೇಳಿಕೆಯನ್ನು ತಿರುಚಲಾಗಿದ್ದು, ನಾನು ಹಿಜಾಬ್ ಬಗ್ಗೆ ಮಾತನಾಡಿಲ್ಲ. ಸ್ವಾಮೀಜಿಗಳ ಬಗ್ಗೆ ಅಪಾರ ಗೌರವವಿದ್ದು, ಅವರನ್ನು ಅಗೌರವಿಸಿಲ್ಲ ಎಂದು ಹೇಳಿದ್ದಾರೆ. ಅಲ್ಲದೆ 'ನಮ್ಮ ಹೆಣ್ಣು ಮಕ್ಕಳು ಕೂಡ ದುಪ್ಪಟ್ಟಾ ಹಾಕುತ್ತಾರೆ ಎಂದಿದ್ದೆ. ನಾನು ಹೇಳಿದಷ್ಟು ತೋರಿಸಿ, ಇಲ್ಲದಿದ್ದರೆ ಸುಮ್ಮನಿರಿ. ನಾನು ಏನೂ ಹೋಲಿಕೆ ಮಾಡಿಲ್ಲ. ಹಿಜಾಬ್ ಪ್ರಸ್ತಾಪವನ್ನೇ ಮಾಡಿಲ್ಲ. ಅಸೆಂಬ್ಲಿಯಲ್ಲಿ ಕೂಡ ದುಪ್ಪಟ್ಟಾ ಹಾಕೋದಕ್ಕೆ ಅವಕಾಶ ಮಾಡಿಕೊಡಿ ಅಂತ ಹೇಳಿದ್ದೆ ಅಷ್ಟೇ. ಯಾವತ್ತೂ ಕೂಡ ಸ್ವಾಮೀಜಿ ಗಳಿಗೆ ಅಗೌರವವಾಗಿ ನಡೆದು ಕೊಂಡಿರುವ ನಿದರ್ಶನ ಇಲ್ಲ. ಅವರ ಜೊತೆ ಸಂಬAಧ ಮೊದಲಿ ನಿಂದಲೂ ಚೆನ್ನಾಗಿದೆ. ಸ್ವಾಮೀಜಿಗಳಿಗೆ ಯಾವತ್ತೂ ಗೌರವ ಕೊಡುತ್ತೇನೆ ಎಂದು ಹೇಳಿದರು.
ಬಿರ್ಭೂಮ್ ಸಾಮೂಹಿಕ ಹತ್ಯೆ ಪ್ರಕರಣ ೨೧ ಶಂಕಿತರ ಹೆಸರು ದಾಖಲಿಸಿದ ಸಿಬಿಐ
ಕೊಲ್ಕತ್ತಾ, ಮಾ. ೨೬: ಬಿರ್ಭೂಮ್ ಅಗ್ನಿಸ್ಪರ್ಶ ಪ್ರಕರಣ ಸಂಬAಧ ಕೇಂದ್ರೀಯ ತನಿಖಾ ದಳವು (ಸಿಬಿಐ) ತನ್ನ ಎಫ್‌ಐಆರ್‌ನಲ್ಲಿ ೨೧ ಶಂಕಿತರನ್ನು ಹೆಸರಿಸಿದೆ. ಮಾರ್ಚ್ ೨೧ ರಂದು ಪಶ್ಚಿಮ ಬಂಗಾಳದ ಬಿರ್ಭೂಮ್ ನ ಬೊಗ್ಟುಯಿ ಗ್ರಾಮದಲ್ಲಿ, ದುಷ್ಕರ್ಮಿಗಳು ಹತ್ತು ಮನೆಗಳಿಗೆ ಬೆಂಕಿ ಹಚ್ಚಿದ ಪರಿಣಾಮ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಎಂಟು ಜನರು ಸಾವನ್ನಪ್ಪಿದರು. ಶುಕ್ರವಾರ ಕೊಲ್ಕತ್ತಾ ಹೈಕೋರ್ಟ್ ಈ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಿತ್ತು. ಸ್ಥಳೀಯ ಪಂಚಾಯತ್‌ನ ಟಿಎಂಸಿ 'ಉಪ-ಪ್ರಧಾನ್' ಆಗಿದ್ದ ಭದು ಶೇಖ್ ಹತ್ಯೆಗೆ ಪ್ರತೀಕಾರ ತೀರಿಸಿಕೊಳ್ಳಲು ನಡೆಸಿದ 'ಪ್ರತಿಕಾರ' ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಸಿಬಿಐ ತನ್ನ ಎಫ್‌ಐಆರ್‌ನಲ್ಲಿ ಹೇಳಿದೆ. ಇದಲ್ಲದೆ, '೭೦-೮೦ ಜನರ ಗುಂಪು' ಸಂತ್ರಸ್ತರ ಮನೆಗಳನ್ನು ಧ್ವಂಸ ಮಾಡಿದೆ. 'ಮನೆಯಲ್ಲಿದ್ದವರನ್ನು ಕೊಲ್ಲುವ ದೃಷ್ಟಿಯಿಂದ' ಬೆಂಕಿ ಹಚ್ಚಿದೆ ಎಂದು ಎಫ್‌ಐಆರ್‌ನಲ್ಲಿ ಹೇಳಿದೆ.