ಮಡಿಕೇರಿ, ಮಾ. ೨೬: ವಿಶ್ವ ರಂಗಭೂಮಿ ದಿನದ ಅಂಗವಾಗಿ ಪ್ರತಿವರ್ಷ ನೀಡಲಾಗುವ ರಂಗಭೂಮಿ ಪ್ರತಿಷ್ಠಾನದ ರಂಗ ಪುರಸ್ಕಾರ ವಾರ್ಷಿಕ ಪ್ರಶಸ್ತಿಯನ್ನು ಜಿಲ್ಲೆಯ ಇಬ್ಬರು ಕಲಾವಿದರಿಗೆ ನೀಡಲು ಆಯ್ಕೆ ಮಾಡಲಾಗಿದೆ ಎಂದು ಟ್ರಸ್ಟ್ನ ಸಂಚಾಲಕಿ ಅನಿತಾ ಕಾರ್ಯಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಸಂಗೀತ ಕ್ಷೇತ್ರದ ಹಿರಿಯ ಕಲಾವಿದ.

ಶ್ರೀನಿವಾಸ್ ಮತ್ತು ಅಶೋಕ್‌ಗೆ ರಂಗ ಪುರಸ್ಕಾರ

(ಮೊದಲ ಪುಟದಿಂದ) ಹಾರ್ಮೋನಿಯಂ ಮತ್ತು ಕೀಬೋರ್ಡ್ ವಾದಕ. ಕೊಡಗಿನ ರಂಗಭೂಮಿ ಕ್ಷೇತ್ರದಲ್ಲಿ ಸಂಗೀತ ಸಂಯೋಜಿಸಿ ಸೇವೆ ಸಲ್ಲಿಸಿರುವ ಪ್ರತಿಷ್ಠಿತ ರಂಗಸAಸ್ಥೆ ``ಸೃಷ್ಟಿ ಕೊಡಗುರಂಗ’’ ಮತ್ತು ‘`ರಂಗಭೂಮಿ ಪ್ರತಿಷ್ಠಾನ ಟ್ರಸ್ಟ್’’ನಲ್ಲಿ ಸಂಗೀತ ನಿರ್ದೇಶಕರಾಗಿ ಅನೇಕ ವರ್ಷ ಸೇವೆ ಸಲ್ಲಿಸಿದ ೪೦ ವರ್ಷಗಳ ರಂಗಭೂಮಿ ಸೇವೆ ಗುರುತಿಸಿ ಗೋಣಿಕೊಪ್ಪದ ವಿ.ಟಿ. ಶ್ರೀನಿವಾಸ್ ಅವರಿಗೆ ಹಾಗೂ ಪ್ರತಿಭಾವಂತ ನಟ. ಕೊಡವ ನಾಟಕ ಕ್ಷೇತ್ರಕ್ಕೆ, ಆಧುನಿಕ ಕೊಡವ ರಂಗಭೂಮಿಗೆ ಸೇವೆ ಸಲ್ಲಿಸುತ್ತಿರುವ ಕೊಡವರಂಗ ರೆಪಟ್ರರಿಯಲ್ಲಿ ನಟರಾಗಿ ದಿವಾನ್ ಬೋಪಣ್ಣ, ಚೌರೀರ ಅಪ್ಪಣ ದಿವಾನ್, ದಂಗೆಯ ಮುಂಚಿನ ದಿನಗಳು, ಸೇರಿದಂತೆ ಕೊಡವ, ಕನ್ನಡ ನಾಟಕಗಳಲ್ಲಿ ಅಭಿನಯಿಸಿರುವ ಮೂರ್ನಾಡಿನ ಮೂಡೆರ ಅಶೋಕ್ ಅವರುಗಳನ್ನು ಗುರುತಿಸಿ ಪ್ರಶಸ್ತಿ ನೀಡಲಾಗಿದೆ. ಮುಂದಿನ ದಿನಗಳಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ತಿಳಿಸಿದ್ದಾರೆ.