ಕೂಡಿಗೆ, ಮಾ. ೨೬: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬ್ಯಾಡಗೊಟ್ಟ ಗ್ರಾಮದಲ್ಲಿ ವನವಾಸಿ ಕಲ್ಯಾಣ ಕರ್ನಾಟಕ, ಕುಶಾಲನಗರ ತಾಲೂಕು ಘಟಕ ಹಾಗೂ ಕುಶಾಲನಗರ ಆರೋಗ್ಯ ಕೇಂದ್ರ ಸಂಯುಕ್ತ ಆಶ್ರಯದಲ್ಲಿ ಬ್ಯಾಡಗೊಟ್ಟ ಪುನರ್ವಸತಿ ಕೇಂದ್ರದ ಸಮುದಾಯ ಭವನದ ಸಭಾಂಗಣದಲ್ಲಿ ಉಚಿತ ಆರೋಗ್ಯ ತಪಾಸಣೆ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಪುನರ್ವಸತಿ ಕೇಂದ್ರದ ಮುಖ್ಯಸ್ಥ ಮುತ್ತ ನೆರವೇರಿಸಿದರು. ಈ ಸಂದರ್ಭ ವನವಾಸಿ ತಾಲೂಕು ಘಟಕದ ಕಾರ್ಯದರ್ಶಿ ಭರತ್ ಮಾಚಯ್ಯ, ಉಪಾಧ್ಯಕ್ಷ ಜಗದೀಶ್, ಆರೋಗ್ಯ ಪ್ರಮುಖ್ ಹರ್ಷ ಮತಾರಿ ಸೇರಿದಂತೆ ಕೇಂದ್ರದ ಪ್ರಮುಖರಾದ ಸಿದ್ದಪ್ಪ, ಮುತ್ತಣ್ಣ, ಮಂಜೇಶ್, ಹರೀಶ್ ಹಾಜರಿದ್ದರು. ಉಚಿತ ಅರೋಗ್ಯ ತಪಾಸಣೆಯನ್ನು ಪುನರ್ವಸತಿ ಕೇಂದ್ರದ ೨೦೦ಕ್ಕೂ ಹೆಚ್ಚು ಜನರು ಮಾಡಿಸಿಕೊಂಡು ಔಷಧಿ ಪಡೆದುಕೊಂಡರು.