*ಸುಜಾ ಕುಶಾಲಪ್ಪ
ಶ್ರೀಮಂಗಲ, ಮಾ. ೨೫: ಮಲೆನಾಡು ಜಿಲ್ಲೆಗಳಲ್ಲಿ ವನ್ಯಪ್ರಾಣಿ-ಮಾನವ ಸಂಘರ್ಷ ತಡೆಗೆ ಪ್ರಸಕ್ತ ಬಜೆಟ್‌ನಲ್ಲಿ ರೂ. ೧೦೦ ಕೋಟಿ ಘೋಷಿಸಿದ್ದು, ಕೊಡಗು ಜಿಲ್ಲೆಯಲ್ಲಿ ವನ್ಯಪ್ರಾಣಿ ಹಾವಳಿ ತಡೆ ಯೋಜನೆ ಮುಂದುವರೆಸಲು ಸಹಕಾರಿ ಯಾಗಲಿದೆ ಎಂದು ವಿಧಾನ ಪರಿಷತ್ ಸದಸ್ಯ ಮಂಡೆಪAಡ ಸುಜಾ ಕುಶಾಲಪ್ಪ ಹೇಳಿದ್ದಾರೆ.
ಅವರನ್ನು ಜಿಲ್ಲೆಯ ವಿವಿಧ ಸಂಘಟನೆಯ ಪ್ರಮುಖರು ಗೋಣಿಕೊಪ್ಪದಲ್ಲಿ ಭೇಟಿ ಮಾಡಿ ಜಿಲ್ಲೆಯ ಸಮಸ್ಯೆಗಳ ಪರಿಹಾರಕ್ಕೆ ಸಮಾಲೋಚನೆ ನಡೆಸಿದ ಸಂದರ್ಭ ಅವರು ಮಾತನಾಡಿದರು.
ಈ ಸಂದರ್ಭ ಜಿಲ್ಲೆಯಲ್ಲಿ ಮಾನವ-ವನ್ಯಪ್ರಾಣಿ ಸಂಘರ್ಷ ತಡೆಗೆ ಶಾಶ್ವತ ಕ್ರಮಕ್ಕೆ ಮನವಿ ಮಾಡಿದರು. ಈಗಾಗಲೇ ರಾಜ್ಯ ಬಜೆಟ್‌ನಲ್ಲಿ ಮಲೆನಾಡು ಜಿಲ್ಲೆಗಳಿಗೆ ವನ್ಯಪ್ರಾಣಿ ಹಾವಳಿ ತಡೆಗೆ ರೂ. ೧೦೦ ಕೋಟಿ ಮೀಸಲಿಟ್ಟಿದ್ದು, ಅತಿ ಹೆಚ್ಚು ವನ್ಯಪ್ರಾಣಿ-ಮಾನವ ಸಂಘರ್ಷ ಎದುರಿಸುತ್ತಿರುವ ಕೊಡಗು ಜಿಲ್ಲೆಗೆ ಇದರಲ್ಲಿ ಹೆಚ್ಚಿನ ಪಾಲು ಸಿಗುವಂತೆ ಪ್ರಮುಖರು ಗಮನ ಸೆಳೆದರು. ತಿತಿಮತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಾಗರಹೊಳೆ ರಾಷ್ಟಿçÃಯ ಉದ್ಯಾನವನ ಸರಹದ್ದಿನಲ್ಲಿ ಈಗಾಗಲೇ ೯ ಕಿ.ಮೀ. ವಿಸ್ತೀರ್ಣದಲ್ಲಿ ರೈಲ್ವೆ ಬ್ಯಾರಿಕೇಡ್ ತಡೆ ಬೇಲಿ ನಿರ್ಮಾಣವಾಗಿದ್ದು, ಉಳಿದ ಮುಂದುವರೆದ ಕಾಮಗಾರಿ ೩.೫ ಕಿ.ಮೀ.ಗೆ ರೂ. ೫ ಕೋಟಿ ಬಿಡುಗಡೆಯಾಗಿದೆ. ಈ ಕಾಮಗಾರಿ ಮುಂದುವರೆಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ಈ ಕಾಮಗಾರಿಗೆ ಉಂಟಾಗಿರುವ ಅಡ್ಡಿಯನ್ನು ನಿವಾರಿಸಿ, ಕಾಮಗಾರಿ ಮುಂದುವರಿಸಬೇಕು. ಇಲ್ಲದಿದ್ದರೆ ಅನುದಾನ ವಾಪಸ್ಸು ಹೋಗುವ ಅಪಾಯವಿದೆ ಎಂದು ಗಮನ ಸೆಳೆದರು. ಜಿಲ್ಲೆಗೆ ಚತುಷ್ಪಥ ರಸ್ತೆಯ ಅಗತ್ಯತೆ ಇಲ್ಲ. ದ್ವಿಪಥ ಹೆದ್ದಾರಿ ಗುಣ ಮಟ್ಟದಲ್ಲಿ ನಿರ್ಮಿಸಿದರೆ ಸಾಕು. ಜಿಲ್ಲೆಯ ಭೌಗೋಳಿಕ ಲಕ್ಷಣವನ್ನು ಗಮನದಲ್ಲಿಟ್ಟುಕೊಂಡು ಜಿಲ್ಲೆಯ ಅಭಿವೃದ್ಧಿ ರೂಪಿಸಬೇಕು ಎಂದು ಮನವಿ ಮಾಡಿದರು.
ಜಿಲ್ಲೆಯ ಭತ್ತದ ಗದ್ದೆಗಳು ಅಪಾರ ಪ್ರಮಾಣದಲ್ಲಿ ಪಾಳು ಬಿದ್ದಿದ್ದು, ಇವುಗಳಲ್ಲಿ ಮತ್ತೆ ಭತ್ತ ಕೃಷಿ ಆರಂಭಿಸಲು ಸರಕಾರ ರೈತರಿಗೆ ಸೂಕ್ತ ಸಹಾಯಧನದೊಂದಿಗೆ ಪ್ರೋತ್ಸಾಹ ನೀಡಬೇಕು. ಈ ಮೂಲಕ ಅಂತರ್ಜಲಮಟ್ಟ ಹೆಚ್ಚಿಸಿ ನೀರಿನ ಸಂರಕ್ಷಣೆಗೆ ಒತ್ತು ನೀಡಿದಂತಾಗುತ್ತದೆ ಎಂದು ಹೇಳಿದರು. ಈ ಸಂದರ್ಭ ಕೊಡಗು ವನ್ಯಜೀವಿ ಸಂಘದ ಮಾಜಿ ಅಧ್ಯಕ್ಷ ನಿವೃತ್ತ ಸೇನಾಧಿಕಾರಿ ಕರ್ನಲ್ ಚೆಪ್ಪುಡಿರ ಮುತ್ತಣ್ಣ, ರಾಜ್ಯ ಅರಣ್ಯ ಅಭಿವೃದ್ಧಿ ನಿಗಮದ ಮಾಜಿ ಉಪಾಧ್ಯಕ್ಷೆ ಮಾಂಗೇರ ಪದ್ಮಿನಿ ಪೊನ್ನಪ್ಪ, ಉದ್ಯಮಿ ಜಮ್ಮಡ ಗಣೇಶ್ ಅಯ್ಯಣ್ಣ, ಕೊಡಗು ಬೆಳೆಗಾರ ಒಕ್ಕೂಟದ ತಾಂತ್ರಿಕ ಸಲಹೆಗಾರ ಚೆಪ್ಪುಡಿರ ಶೆರಿ ಸುಬ್ಬಯ್ಯ, ಪ್ರಧಾನ ಕಾರ್ಯದರ್ಶಿ ಅಣ್ಣೀರ ಹರೀಶ್ ಮಾದಪ್ಪ, ಬಿ.ಜೆ.ಪಿ. ಪ್ರಮುಖರಾದ ಚೆಪ್ಪುಡಿರ ಮಾಚು ಹಾಜರಿದ್ದರು.