ಗೋಣಿಕೊಪ್ಪ ವರದಿ, ಮಾ. ೨೫: ಮಾಯಮುಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಪುನೀತ್ ರಾಜ್‌ಕುಮಾರ್ ಅಭಿಮಾನಿ ಬಳಗ ಆಯೋಜಿಸಿದ್ದ ರಾಜ್ಯಮಟ್ಟದ ಟೆನ್ನಿಸ್‌ಬಾಲ್ ಕ್ರಿಕೆಟ್ ಟೂರ್ನಿಯಲ್ಲಿ ಹುಂಡಿ ಫ್ರೀಡಂ ಬಾಯ್ಸ್ ಪ್ರಥಮ, ಪೊನ್ನಂಪೇಟೆ ಅವೆಂಜರ್ಸ್ ದ್ವಿತೀಯ ಸ್ಥಾನ ಪಡೆದುಕೊಂಡಿತು.

ಫೈನಲ್ ಪಂದ್ಯದಲ್ಲಿ ಹುಂಡಿ ಫ್ರೀಡಂ ಬಾಯ್ಸ್ ೬ ವಿಕೆಟ್ ಗೆಲುವು ದಾಖಲಿಸಿತು. ಅವೆಂಜರ್ಸ್ ತಂಡ ನಿಗದಿತ ೭ ಓವರ್‌ಗಳಿಗೆ ೪೨ ರನ್ ಗಳಿಸಿತು. ಹುಂಡಿ ತಂಡವು ೪ ವಿಕೆಟ್ ಕಳೆದುಕೊಂಡು ಗುರಿ ಸಾಧಿಸಿತು.

ತೃತೀಯ ತಂಡವಾಗಿ ಧನುಗಾಲ ಟೈಗರ್ಸ್ ಬಾಯ್ಸ್, ನಾಲ್ಕನೇ ತಂಡವಾಗಿ ಮಡಿಕೆಬೀಡು ಬ್ಲಾö್ಯಕ್ ಕೋಬ್ರಾಸ್ ಹೊರ ಹೊಮ್ಮಿತು.

ಪೊನ್ನಂಪೇಟೆ ಅವೆಂಜರ್ಸ್ ತಂಡದ ಆಟಗಾರ ವಿಜಯ್ ಸರಣಿ ಶ್ರೇಷ್ಠ ಬಹುಮಾನ ಪಡೆದುಕೊಂಡರು. ಹುಂಡಿ ತಂಡದ ರಿಯಾಜ್ ಪಂದ್ಯ ಶ್ರೇಷ್ಠ, ಉಣ್ಣಿ ಬೆಸ್ಟ್ ಬ್ಯಾಟ್ಸ್ಮನ್, ಮಡಿಕೆಬೀಡು ತಂಡದ ಶಾರುಖ್ ಬೆಸ್ಟ್ ಬೌಲರ್ ಬಹುಮಾನ ಪಡೆದುಕೊಂಡರು.

ಗೋಣಿಕೊಪ್ಪ ಪೊಲೀಸ್ ವೃತ್ತ ನಿರೀಕ್ಷಕ ಜಯರಾಮ್, ಉದ್ಯಮಿ ಮಚ್ಚಮಾಡ ಅನೀಶ್ ಮಾದಪ್ಪ, ಸ್ಥಳೀಯ ದಾನಿಗಳಾದ ಚೆಪ್ಪುಡೀರ ಪ್ರದೀಪ್ ಪೂವಯ್ಯ, ಪುಚ್ಚಿಮಾಡ ರಾಯ್ ಮಾದಪ್ಪ, ಐಚೆಟ್ಟೀರ ಸುಬ್ರಮಣಿ, ಬಾನಂಡ ಪ್ರಥ್ಯು, ನಾಮೇರ ಅಂಕಿತ್ ಪೊನ್ನಪ್ಪ, ಜೆ.ಬಿ. ಮಲ್ಲೇಶ್, ಎಸ್.ಜಿ. ರವಿ ಬಹುಮಾನ ವಿತರಿಸಿದರು. ಬಳಗದ ಕಾರ್ಯ ಕರ್ತರಾದ ಬಾನಂಡ ಕ್ರಿಶ್‌ರಾಜ್, ಅನೀಶ್, ಮಲ್ಲಿಕಾ, ಪ್ರವೀಣ್, ಉಮ್ಮರ್, ಅನೀಶ್ ಇದ್ದರು.