ಮಡಿಕೇರಿ, ಮಾ. ೨೩: ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಮತ್ತು ಬೇಗೂರು ಪೂಳೆಮಾಡ್ ಈಶ್ವರ ದೇವಸ್ಥಾನ ಅಭಿವೃದ್ಧಿ ಸಮಿತಿ ವತಿಯಿಂದ ತಾ. ೨೬ ರಂದು ಬೆಳಿಗ್ಗೆ ೧೦ ಗಂಟೆಗೆ ಪೊನ್ನಂಪೇಟೆಯ ಬೇಗೂರು ಗ್ರಾಮದಲ್ಲಿ “ಮಂದ್ ತೊರ್‌ಪೊ ಕಾರ್ಯಕ್ರಮ” ನಡೆಯಲಿದೆ.
ಬೇಗೂರು ಊರು ತಕ್ಕರಾಗಿರುವ ಬೈರಂಡ ಪೂಣಚ್ಚ ಅವರು ಮಂದ್ ಉದ್ಘಾಟನೆ ಮಾಡಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷೆ ಡಾ. ಅಮ್ಮಾಟಂಡ ಪಾರ್ವತಿ ಅಪ್ಪಯ್ಯ ಅವರು ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಪೂಳೆಮಾಡು ಈಶ್ವರ ದೇವಸ್ಥಾನದ ಅಧ್ಯಕ್ಷ ಬೊಳ್ಳಿಯಂಗಡ ದಾದು ಪೂವಯ್ಯ, ಪೂಳೆಮಾಡು ಈಶ್ವರ ದೇವಸ್ಥಾನದ ದೇವತಕ್ಕ ಮುಖ್ಯಸ್ಥರಾಗಿರುವ ಮತ್ರಂಡ ಪೂಣಚ್ಚ, ತಕ್ಕರಾದ ಚೇಂದೀರ ಮಧು ಕರುಂಬಯ್ಯ, ಮಲ್ಲಂಡ ಗಿರೀಶ್ ಹಾಗೂ ಬೇಗೂರುವಿನ ಕೃಷಿಕರಾಗಿರುವ ಕಾರಪಂಡ ಗಿರೀಶ್ ಅವರು ಭಾಗವಹಿಸಲಿದ್ದಾರೆ.
ಪೂಮಾಲೆ ವಾರಪತ್ರಿಕೆಯ ಸಂಪಾದಕ ಅಜ್ಜಿನಿಕಂಡ ಮಹೇಶ್ ನಾಚಯ್ಯ ಅವರು ‘ಕೊಡಗ್‌ರ ಮಂದ್ ಮಾನಿ’ ಎಂಬ ವಿಚಾರದ ಬಗ್ಗೆ ವಿಚಾರ ಮಂಡನೆ ಮಾಡಲಿದ್ದಾರೆ. ಅಲ್ಲದೆ ಸಾಂಸ್ಕೃತಿಕ ಕಾರ್ಯಕ್ರಮವನ್ನು ನಡೆಸಲಿದ್ದಾರೆ. ಮಾಚಿಮಾಡ ಜಾನಕಿ ಮಾಚಯ್ಯ ಹಾಗೂ ಪಡಿಞÁರಂಡ ಪ್ರಭುಕುಮಾರ್ ಅವರು ಸಂಚಾಲಕರಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಡಾ. ಅಮ್ಮಾಟಂಡ ಪಾರ್ವತಿ ಅಪ್ಪಯ್ಯ ಅವರು ತಿಳಿಸಿದ್ದಾರೆ.