ಸೋಮವಾರಪೇಟೆ, ಮಾ. ೨೪: ಬಿಸಿಲಿನ ಬೇಗೆಯಿಂದ ಧಗೆ ಎದ್ದಿದ್ದ ಸೋಮವಾರಪೇಟೆ ವಿಭಾಗಕ್ಕೆ ಮಧ್ಯಾಹ್ನ ಭರ್ಜರಿ ಮಳೆಯಾಗಿದ್ದು, ವಾತಾವರಣವನ್ನು ತಂಪಾಗಿಸಿತು.
ಮಧ್ಯಾಹ್ನ ೨ ಗಂಟೆಯಿAದ ೩ ಗಂಟೆಯವರೆಗೂ ಭರ್ಜರಿ ಮಳೆಯಾದ ಹಿನ್ನೆಲೆ ಇಳೆಯೂ ತಂಪಾಯಿತು. ಬೆಳಗ್ಗಿನಿಂದಲೂ ಮೋಡ ಕವಿದ ವಾತಾವರಣವಿತ್ತು. ಮಧ್ಯಾಹ್ನದ ಸಮಯಕ್ಕೆ ಭಾರೀ ಮಳೆಯಾದ್ದರಿಂದ ರಸ್ತೆ-ಚರಂಡಿಗಳಲ್ಲಿ ನೀರು ಹರಿದು ಪಟ್ಟಣ ಸ್ವಚ್ಛವಾಯಿತು.
ಇದರೊಂದಿಗೆ ಕಳೆದೆರಡು ದಿನಗಳಿಂದ ಒಮ್ಮೊಮ್ಮೆ ತುಂತುರು ಮಳೆಯಾದ್ದರಿಂದ ಅರೇಬಿಕಾ ಕಾಫಿ ತೋಟಗಳಲ್ಲಿ ಮೊಗ್ಗು ಮೂಡಿದ್ದವು. ಈ ಮೊಗ್ಗುಗಳನ್ನು ಉಳಿಸಿಕೊಳ್ಳಲು ಬೆಳೆಗಾರರು ಸ್ಪಿçಂಕ್ಲರ್ ಮೊರೆ ಹೋಗಿದ್ದರು. ಇಂದು ಉತ್ತಮ ಮಳೆಯಾದ್ದರಿಂದ ಬೆಳೆಗಾರರ ಮೊಗದಲ್ಲೂ ಸಂತಸಕ್ಕೆ ಕಾರಣವಾಯಿತು.
 
						