ಸಿದ್ದಾಪುರ, ಮಾ. ೨೪: ರಂಗಸಮುದ್ರ ವಿರೂಪಾಕ್ಷಪುರಂ ಶ್ರೀ ಕುರುಂಬ ಭಗವತಿ ದೇವಸ್ಥಾನದ ೨೪ನೇ ಭರಣಿ ವಾರ್ಷಿಕ ಮಹೋತ್ಸವವು ತಾ. ೨೮ ರಿಂದ ೨೯ ರವರೆಗೆ ಕಿಶಾನ್ ವೆಳಿಚ್ಚಪಾಡ್ ನೇತೃತ್ವದಲ್ಲಿ ನಡೆಯಲಿದೆ.
ಉತ್ಸವದ ಅಂಗವಾಗಿ ತಾ. ೨೮ರ ಬೆಳಿಗ್ಗೆ ೧೧.೩೦ ಕ್ಕೆ ಮಹಾಮಂಗಳಾರತಿ, ಮಧ್ಯಾಹ್ನ ೧೨.೩೦ಕ್ಕೆ ಅನ್ನಸಂತರ್ಪಣೆ, ಸಂಜೆ ೪ ಗಂಟೆಗೆ ಮುತ್ತಪ್ಪನ ಪಯಂಗುತ್ತಿ ಪೂಜೆ, ರಾತ್ರಿ ೭.೩೦ಕ್ಕೆ ದೀಪಾರಾಧನೆ, ರಾತ್ರಿ ೮ ಗಂಟೆಗೆ ಅನ್ನಸಂತರ್ಪಣೆ. ತಾ. ೨೯ರ ಬೆಳಿಗ್ಗೆ ೬ ಗಂಟೆಗೆ ಉಷ ಪೂಜೆ, ೧೦.೩೦ ಕ್ಕೆ ಅಲಂಕಾರ ಪೂಜೆ ಮಹಾಮಂಗಳಾರತಿ, ೧೧ ಕ್ಕೆ ತಾಲಪೊಲಿ, ಮಧ್ಯಾಹ್ನ ೧೨ ಗಂಟೆಗೆ ಗುರುದಿ ದರ್ಪಣಂ, ಮಧ್ಯಾಹ್ನ ೧೨.೩೦ ಕ್ಕೆ ಅನ್ನಸಂತರ್ಪಣೆ ನಡೆಯಲಿದೆ. ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದೇವರ ಪೂಜಾ ಕೈಂಕರ್ಯಗಳಲ್ಲಿ ಭಾಗವಹಿಸಬೇಕೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.