ವೀರಾಜಪೇಟೆ, ಮಾ. ೨೩ : ಶಂಸುಲ್ ಉಲಮಾ ಅನಾಥ ಮತ್ತು ಬಡ ಬಾಲಕಿಯರ ವಸತಿ ನಿಲಯದ ೪ ಹೆಣ್ಣು ಮಕ್ಕಳ ವಿವಾಹ ಕಾರ್ಯ ಸಮಾಜ ಸೇವಕರು, ಧಾರ್ಮಿಕ ಪಂಡಿತರ ಸಮ್ಮುಖದಲ್ಲಿ ಪೆರುಂಬಾಡಿಯ ಶಂಸುಲ್ ಉಲಮಾ ಎಜುಕೇಶನಲ್ ಅಕಾಡೆಮಿ ಟ್ರಸ್ಟ್ ನ ಸಭಾಂಗಣದಲ್ಲಿ ನಡೆಯಿತು.
ಕೊಡಗು ಜಿಲ್ಲಾ ಉಪ ಖಾಝಿ ಎಂ.ಎA ಅಬ್ದುಲ್ಲಾ ಫೈಝಿ ಅವರು ನಿಖಾ ನೇತೃತ್ವ ವಹಿಸಿದ್ದರು.
ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಧಾರ್ಮಿಕ ಪಂಡಿತ ಪಾಣಕ್ಕಾಡ್ ಸೈಯದ್ ಜವ್ವರ್ ಅಲಿ ಶಿಹಾಬ್ ತಂಙಳ್ ಮಾತನಾಡಿ ಬಡ ಹಾಗೂ ನಿರ್ಗತಿಕ ಅನಾಥ ಮಕ್ಕಳ ಭವಿಷ್ಯ ರೂಪಿಸಲು ಪೆರುಂಬಾಡಿಯ ಸಂಶುಲ್ ಉಲಮಾ ಎಜುಕೇಶನಲ್ ಅಕಾಡೆಮಿ ಇದುವರೆಗೂ ೨೫ ಕ್ಕೂ ಹೆಚ್ಚು ಹೆಣ್ಣು ಮಕ್ಕಳ ವಿವಾಹ ಕಾರ್ಯ ನೆರವೇರಿಸಿ ದಾಂಪತ್ಯ ಜೀವನ ನಡೆಸಲು ಸಹಕಾರ ನೀಡಿದೆ. ಕಲಿಯುವ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ನೀಡುವ ಮೂಲಕ ಪ್ರತಿಭಾವಂತರಾಗಿ ಸಮಾಜದ ಮುಖ್ಯವಾಹಿನಿಗೆ ತರಲು ಶ್ರಮಿಸುತ್ತಿದೆ ಎಂದರು.
ಪ್ರವಾಸೋದ್ಯಮ ನಿಗಮದ ಮಾಜಿ ಅಧ್ಯಕ್ಷ ಹುಸೈನ್ ಮಾತನಾಡಿ. ಎಂಭತ್ತಕ್ಕೂ ಹೆಚ್ಚು ಬಡ ನಿರ್ಗತಿಕ ಅನಾಥ ಮಕ್ಕಳಿಗೆ ಆಶ್ರಯ ನೀಡಿ ಯಾವುದೇ ಕೊರತೆಯಿಲ್ಲದೆ ಎಲ್ಲಾ ಸೌಕರ್ಯಗಳನ್ನು ಕಲ್ಪಿಸುವುದ ರೊಂದಿಗೆ ಉಚಿತ ಉನ್ನತ ಶಿಕ್ಷಣ ನೀಡಿ ಭವಿಷ್ಯ ರೂಪಿಸಿಕೊಳ್ಳಲು ಸಹಕಾರ ನೀಡುತ್ತಿರುವ ಸಂಶುಲ್ ಉಲಮಾ ಎಜುಕೇಶನಲ್ ಅಕಾಡಮಿಯ ಸಮಾಜ ಸೇವೆ ಕಾರ್ಯಕ್ಕೆ ದಾನಿಗಳು ಹೆಚ್ಚು ಕೈಜೋಡಿಸಬೇಕಾಗಿದೆ ಎಂದು ಹೇಳಿದರು. ಸಂಶುಲ್ ಉಲಮಾ ಎಜುಕೇಶನಲ್ ಅಕಾಡೆಮಿಯ ಅಧ್ಯಕ್ಷ ಸಿ.ಪಿ.ಎಂ. ಬಶೀರ್ ಹಾಜಿ ಮಾತನಾಡಿ ೧೫ ವರ್ಷಗಳ ಹಿಂದೆ ಬಡ ನಿರ್ಗತಿಕ ಮಕ್ಕಳಿಗೆ ಬೌದ್ಧಿಕ ಹಾಗೂ ಧಾರ್ಮಿಕ ಉನ್ನತ ಶಿಕ್ಷಣ ನೀಡುವ ಮೂಲಕ ಪ್ರತಿಭಾನ್ವಿತರಾಗಿ ಸಮಾಜದ ಮುಖ್ಯವಾಹಿನಿಗೆ ತರಲು ಅಕಾಡೆಮಿ ಟ್ರಸ್ಟ್ ಮುಂದಾಗಿದೆ. ೨೫ಕ್ಕೂ ಹೆಚ್ಚು ಹೆಣ್ಣು ಮಕ್ಕಳ ವಿವಾಹ ಕಾರ್ಯ ನೆರವೇರಿಸಲಾಗಿದೆ. ೮೦ಕ್ಕೂ ಹೆಚ್ಚು ಮಕ್ಕಳು ಕೇಂದ್ರದಲ್ಲಿದ್ದು ದಾನಿಗಳ ಸಹಕಾರವು ಅತ್ಯಗತ್ಯ ವಾಗಿದ್ದು ಟ್ರಸ್ಟ್ನೊಂದಿಗೆ ಕೈ ಜೋಡಿಸ ಬೇಕೆಂದು ಮನವಿ ಮಾಡಿದರು.
ಈ ಸಂದರ್ಭ ಜಿಲ್ಲಾ ವಕ್ಫ್ ಬೋರ್ಡ್ ಅಧ್ಯಕ್ಷ ಕೆ.ಎ. ಯಾಕೂಬ್, ಕೆ.ಎಂ.ಎ. ಅಧ್ಯಕ್ಷ ಸೂಫಿ ಹಾಜಿ, ಸಮಾಜ ಸೇವಕ ಪಯ್ಯನೂರು ಮುಸ್ತಫಾ ಹಾಜಿ, ಬೆಂಗಳೂರು ಸವೇರಾ ಗ್ರೂಪ್ ಮಾಲೀಕ ಮೂಸಾ ಹಾಜಿ, ಹಮೀದ್ ಪೆರಾವೂರ್, ಕೆ.ಪಿ ರಶೀದ್, ಮಹಮ್ಮದ್ ಅಲಿ ಫೈಝಿ, ಉಸ್ಮಾನ್ ಪೈಝಿ, ರಾಜೀಕ್, ಮೂಸ ಮೌಲವಿ, ಇಸ್ಮಾಯಿಲ್ ಉಸ್ತಾದ್, ಉಮರ್ ಫೈಝಿ, ನೌಫಲ್ ಹುದವಿ, ಸಿದ್ದಾಪುರ ಮುಸ್ಲಿಂ ಜಮಾಅತ್ ಅಧ್ಯಕ್ಷ ಯು.ಎಂ. ಮುಸ್ತಫಾ ಹಾಜಿ, ಕಾರ್ಯದರ್ಶಿ ರವೂಫ್ ಹಾಜಿ, ನಾಪೋಕ್ಲು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಇಸ್ಮಾಯಿಲ್, ಪ್ರಮುಖರಾದ ರವೂಫ್ ಹುದವಿ, ರಝಾಕ್ ಹಾಜಿ, ಬಶೀರ್ ಹಾಜಿ, ಸಲೀಂ ಹಾಜಿ, ಮಣಿ ಮೊಹಮ್ಮದ್, ಹುಸೈನ್, ಇಬ್ರಾಹಿಂ ಹಾಜಿ ಸೇರಿದಂತೆ ಮತ್ತಿತರರು ಹಾಜರಿದ್ದರು.