ಮಡಿಕೇರಿ, ಮಾ. ೨೪: ಸಭಾಂಗಣಕ್ಕೆ ಬಂದ ಮಹಿಳಾ ಹುಲಿ, ಬೇಟೆಗಾರರು, ಪೇಟೆಗೆ ಬಂದ ಅಜ್ಜ-ಅಜ್ಜಿ, ಹಾಡು, ಹಾಸ್ಯ ಚಟಾಕಿ, ಕ್ರೀಡಾಸ್ಪರ್ಧೆ, ವಿಶೇಷವಾದ ಭಾಷಣ ಸ್ಪರ್ಧೆ, ವಾಲಗತಾಟ್ ನಂತಹ ವೈವಿಧ್ಯಮಯ ಕಾರ್ಯಕ್ರಮಗಳ ಮೂಲಕ ವೀರಾಜಪೇಟೆ ಕೊಡವ ಸಮಾಜ ಪೊಮ್ಮಕ್ಕಡ ಕೂಟದ ವಾರ್ಷಿಕ ಮಹಾಸಭೆ ವರ್ಣರಂಜಿತವಾಗಿ ಜರುಗಿತು.

ವೀರಾಜಪೇಟೆ ಕೊಡವ ಸಮಾಜದಲ್ಲಿ ಒಕ್ಕೂಟದ ಅಧ್ಯಕ್ಷೆ ಮನೆಯಪಂಡ ಕಾಂತಿ ಸತೀಶ್ ಹಾಗೂ ಆಡಳಿತ ಮಂಡಳಿ ಪ್ರಮುಖರ ಮುಂದಾಳತ್ವದಲ್ಲಿ ನಿನ್ನೆ ಕಾರ್ಯಕ್ರಮ ಆಯೋಜಿತವಾಗಿತ್ತು. ಕೇವಲ ಆಡಳಿತಾತ್ಮಕ ವಿಚಾರ ಹಾಗೂ ಕಾರ್ಯ ಚಟುವಟಿಕೆಗಳಿಗೆ ಸೀಮಿತವಾಗಿ ಕೂಟದ ವಾರ್ಷಿಕ ಮಹಾಸಭೆ ಜರುಗಿದರೆ, ಸಭೆಯ ಬಳಿಕ ವೈವಿಧ್ಯಮಯ ಕಾರ್ಯಕ್ರಮಗಳು ಜನ-ಮನ ರಂಜಿಸಿತು. ವಿಶೇಷವಾಗಿ ಮದುವೆ ಸಮಾರಂಭಕ್ಕೆ ಆಹ್ವಾನಿಸಲು ನೆಂಟರಿಷ್ಟರ ಮನೆಗೆ ತೆರಳುವ ಸಂದರ್ಭ ಆಹ್ವಾನಿಸುವ ಬಗೆ ಹೇಗೆ ಹಾಗೂ ಸಮಾರಂಭಕ್ಕೆ ಬಂದವರನ್ನು ಮಾತನಾಡಿಸುವ ಪರಿ ಹಾಗೂ ಉಪಚಾರ ಹೇಗಿರಬೇಕು ಎಂಬ ವಿಷಯಕ್ಕೆ ಸಂಬAಧಿಸಿದ ಭಾಷಣ ಸ್ಪರ್ಧೆ ಗಮನ ಸೆಳೆಯಿತು.

ಆರಂಭದಲ್ಲಿ ಅಲ್ಲಪಂಡ ತಾರ ಅವರು ದೇವರನ್ನು ಪ್ರಾರ್ಥಿಸಿ ತಪ್ಪಡ್‌ಕ ಕಟ್ಟಿದರು. ಚೇಂದAಡ ಸುಮಿ ಸುಬ್ಬಯ್ಯ ಪ್ರಾರ್ಥಿಸಿ, ಅಧ್ಯಕ್ಷೆ ಕಾಂತಿ ಸತೀಶ್ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಕಾರ್ಯದರ್ಶಿ ಬಯವಂಡ ಇಂದಿರಾ ಬೆಳ್ಯಪ್ಪ ಅವರಿಂದ ವರದಿ, ಸಹ ಖಜಾಂಚಿ ತಾತಂಡ ಯಶು ಕಬೀರ್ ಅವರಿಂದ ಲೆಕ್ಕಪತ್ರ ಮಂಡನೆ ಜರುಗಿತು.

ಈ ಸಂದರ್ಭ ಅಂರ‍್ರಾಷ್ಟಿçÃಯ ಚಿತ್ರೋತ್ಸವದಲ್ಲಿ ದೇವಕಾಡ್ ಕೊಡವ ಚಲನಚಿತ್ರಕ್ಕೆ ಪ್ರಶಸ್ತಿ ಪಡೆದ ನಟಿ ತಾತಂಡ ಪ್ರಭಾ ನಾಣಯ್ಯ ಅವರನ್ನು ಸನ್ಮಾನಿಸಲಾಯಿತು.

ಭಾಷಣ ಸ್ಪರ್ಧೆಯಲ್ಲಿ ಬಯವಂಡ ಇಂದಿರಾ, ತಾತಂಡ ಪ್ರಭಾ, ಬೊವ್ವೇರಿಯಂಡ ಆಶಾ ಬಹುಮಾನ ಪಡೆದರು. ವೇದಿಕೆಯಲ್ಲಿ ಉಪಾಧ್ಯಕ್ಷೆ ಅಮ್ಮುಣಿಚಂಡ ಈಶ್ವರಿ ಗಂಗಮ್ಮ, ಪ್ರಭಾ ನಾಣಯ್ಯ, ಖಜಾಂಚಿ ಪೊಯ್ಯೇಟಿರ ಭಾನು ಭೀಮಯ್ಯ, ಸಲಹಾ ಸಮಿತಿಯ ಕುಪ್ಪಂಡ ಪುಷ್ಪ ಮುತ್ತಣ್ಣ, ನಾಯಕಂಡ ಬೇಬಿ ಚಿಣ್ಣಪ್ಪ, ಸಹಕಾರ್ಯದರ್ಶಿ ಮಾಳೇಟಿರ ಕವಿತಾ ಶ್ರೀನಿವಾಸ್, ಸಹಖಜಾಂಚಿ ತಾತಂಡ ಯಶು ಕಬೀರ್ ಉಪಸ್ಥಿತರಿದ್ದರು. ವಾಲಗತಾಟ್‌ನ ಸಂಭ್ರಮದೊAದಿಗೆ ಕಾರ್ಯಕ್ರಮ ಮುಕ್ತಾಯ ಗೊಂಡಿತು.