ಮಡಿಕೇರಿ, ಮಾ. ೨೩: ಜಾಗತಿಕ ಮಟ್ಟದಲ್ಲಿ ಮನ್ನಣೆ ಪಡೆದಿರುವ ರೋಟರಿಯಂಥ ಸಾಮಾಜಿಕ ಸೇವಾ ಸಂಸ್ಥೆಯ ಸದಸ್ಯರಾಗುವುದರಿಂದ ಸಮಾಜ ಸೇವೆಯಲ್ಲಿ ಹೆಚ್ಚು ಸಕ್ರಿಯವಾಗಿ ಪಾಲ್ಗೊಳ್ಳಲು ಸಾಧ್ಯ ವಾಗುತ್ತದೆ. ಕೊಡಗು ಜಿಲ್ಲೆಯಲ್ಲಿಯೂ ರೋಟರಿ ಸಂಸ್ಥೆಗಳು ಮಾದರಿಯಾಗಿ ಸೇವಾ ಕಾರ್ಯಗಳಲ್ಲಿ ತೊಡಗಿಸಿ ಕೊಂಡಿದೆ ಎಂದು ಜಿಲ್ಲಾಧಿಕಾರಿ ಡಾ .ಬಿ.ಸಿ. ಸತೀಶ ಶ್ಲಾಘಿಸಿದ್ದಾರೆ.
ನಗರದ ರಾಜಾಸೀಟ್‌ನಲ್ಲಿ ಮಡಿಕೇರಿ ಮಿಸ್ಟಿ ಹಿಲ್ಸ್ ಮತ್ತು ಮಡಿಕೇರಿ ರೋಟರಿ ಕ್ಲಬ್‌ಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿತ ರೋಟರಿ ಜಿಲ್ಲೆ ೩೧೮೧ನ ಪಬ್ಲಿಕ್ ಇಮೇಜ್ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದ ಜಿಲ್ಲಾಧಿಕಾರಿ, ರೋಟರಿ ಸಂಸ್ಥೆಯು ವಿಶ್ವಾದದ್ಯಂತ ಸಾವಿರಾರು ಕ್ಲಬ್‌ಗಳ ಮೂಲಕ ಹಲವಷ್ಟು ಸಮಸ್ಯೆ, ಸಂಕಷ್ಟಗಳ ಪರಿಹಾರಕ್ಕೆ ಮುಂದಾಗಿದೆ. ರೋಟರಿ ಸದಸ್ಯರಿಗೆ ಧ್ಯೇಯ ಇದೆ. ಆದರ್ಶ ಇದೆ. ಹೀಗಾಗಿಯೇ ರೋಟರಿ ಮಾದರಿ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಹೆಮ್ಮೆ ವ್ಯಕ್ತಪಡಿಸಿದರು.
ಮಡಿಕೇರಿ ನಗರಸಭಾಧ್ಯಕ್ಷೆ ಮತ್ತು ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷೆ ಅನಿತಾ ಪೂವಯ್ಯ ಮಾತನಾಡಿ, ರೋಟರಿಯ ಸೇವಾ ಕಾರ್ಯಗಳ ಬಗ್ಗೆ ಜನತೆಗೆ ಹೆಚ್ಚಿನ ರೀತಿಯಲ್ಲಿ ಪ್ರಚುರ ಪಡಿಸಲು ಪಬ್ಲಿಕ್ ಇಮೇಜ್ ಜಾಥಾ ಆಯೋಜಿಸಲಾಗಿದ್ದು, ಈ ಮೂಲಕ ಮತ್ತಷ್ಟು ಜನ ರೋಟರಿಗೆ ಸೇರ್ಪಡೆಯಾಗಲು ಸಹಕಾರಿ ಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರೋಟರಿ ಮಿಸ್ಟಿ ಹಿಲ್ಸ್ ಸ್ಥಾಪಕಾಧ್ಯಕ್ಷ ಬಿ.ಜಿ. ಅನಂತಶಯನ ಮಾತನಾಡಿ, ಕೊಡಗಿನಲ್ಲಿ ಪ್ರಾಕೃತಿಕ ವಿಕೋಪ ಸಂಭವಿಸಿದ ಸಂದರ್ಭ ರೋಟರಿ ಸದಸ್ಯರ ತಂಡ ಭೂಕುಸಿತದಿಂದ ಸಂತ್ರಸ್ತರಾದ ಕುಟುಂಬಗಳಿಗೆ ನೆರವಿಗೆ ದೌಡಾಯಿಸಿತು. ಅಂತೆಯೇ ಮನೆ ಕಳೆದುಕೊಂಡವರಿಗಾಗಿ ರೋಟರಿ ಸಂಸ್ಥೆಯಿAದ ೫೦ ಮನೆಗಳನ್ನೂ ಮಾದಾಪುರ ಬಳಿ ನಿರ್ಮಿಸಿ ಕೊಡಲಾಯಿತು. ರೋಟರಿ ಸದಸ್ಯರು ಎಂದೂ ಸಮಾಜಸೇವಾ ಕಾರ್ಯಗಳಿಗೆ ಹಿಂದೇಟು ಹಾಕುವುದಿಲ್ಲ ಎಂದರು.
ರೋಟರಿ ಜಿಲ್ಲೆಯ ಪಬ್ಲಿಕ್ ಇಮೇಜ್ ಸಮಿತಿ ಅಧ್ಯಕ್ಷ ಸತೀಶ್ ಬೊಳಾರ್ ಮಾತನಾಡಿ, ರೋಟರಿಯ ಸೇವಾ ಕಾರ್ಯಗಳನ್ನು ಜನತೆಗೆ ತಿಳಿಸಲು ದಕ್ಷಿಣ ಕನ್ನಡ, ಚಾಮರಾಜನಗರ, ಕೊಡಗು ಮತ್ತು ಮೈಸೂರು ಜಿಲ್ಲೆಗಳ ೮೬ ರೋಟರಿ ಸಂಸ್ಥೆಗಳ ವ್ಯಾಪ್ತಿಯಲ್ಲಿ ಜಾಥಾ ಹಮ್ಮಿಕೊಳ್ಳಲಾಗಿದ್ದು ಸಾರ್ವಜನಿಕರಿಂದ ಉತ್ತಮ ಸ್ಪಂದನ ದೊರಕಿದೆ ಎಂದರು.
ರೋಟರಿ ವಲಯ ೬ ರ ಉಪರಾಜ್ಯಪಾಲ ಅನಿಲ್ ಎಚ್.ಟಿ. ನಿರೂಪಿಸಿದ ಕಾರ್ಯಕ್ರಮದಲ್ಲಿ ಮಡಿಕೇರಿ ನಗರಸಭೆಯ ಪೌರಾಯುಕ್ತ ರಾಮದಾಸ್, ರೋಟರಿ ಕ್ಲಬ್ ಅಧ್ಯಕ್ಷ ನಡಿಕೇರಿಯಂಡ ಅಚ್ಚಯ್ಯ, ರೋಟರಿ ಮಿಸ್ಟಿ ಹಿಲ್ಸ್ ಕಾರ್ಯದರ್ಶಿ ಪಿ.ಆರ್. ರಾಜೇಶ್, ಮಡಿಕೇರಿ ರೋಟರಿ ಕಾರ್ಯದರ್ಶಿ ಲಲಿತಾ ರಾಘವನ್, ರೋಟರಿ ಜಿಲ್ಲೆಯ ಮಾಜಿ ಉಪರಾಜ್ಯಪಾಲರುಗಳಾದ ಡಾ. ರವಿ ಅಪ್ಪಾಜಿ, ಮಾತಂಡ ಸುರೇಶ್ ಚಂಗಪ್ಪ, ಮುಂದಿನ ಸಾಲಿನ ಉಪರಾಜ್ಯಪಾಲ ರತನ್ ತಮ್ಮಯ್ಯ, ರೆಡ್‌ಕ್ರಾಸ್ ಸಭಾಪತಿ ಬಿ.ಕೆ. ರವೀಂದ್ರ ರೈ, ವಲಯ ಸಾಮಾಜಿಕ ಜಾಲತಾಣಗಳ ಸಮಿತಿ ಅಧ್ಯಕ್ಷ ಮೋಹನ್ ಪ್ರಭು, ವಿನೋದ್ ಎ.ಕೆ. ಪ್ರಸಾದ್ ಗೌಡ, ಎಂ. ಧನಂಜಯ, ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಅಯ್ಯಪ್ಪ, ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಅಂಬೆಕಲ್ ನವೀನ್ ಕುಶಾಲಪ್ಪ ಸೇರಿದಂತೆ ರೋಟರಿ, ವಿವಿಧ ಸಂಘ-ಸAಸ್ಥೆಗಳ ನೂರಾರು ಮಂದಿ ಪಾಲ್ಗೊಂಡಿದ್ದರು. ಮಡಿಕೇರಿ ನಗರದ ಮುಖ್ಯ ರಸ್ತೆಯಲ್ಲಿ ರೋಟರಿ ಕಾರ್ಯಚಟುವಟಿಕೆಗಳ ಮಾಹಿತಿ ನೀಡುವ ಜಾಥಾ ಜನಮನ ಸೆಳೆಯಿತು.