ಮಡಿಕೇರಿ, ಮಾ. ೨೪: ಮಡಿಕೇರಿ ನಗರ ಸಭಾ ವ್ಯಾಪ್ತಿಗೊಳಪಡುವ ಮಾರುಕಟ್ಟೆ ಆವರಣದಲ್ಲಿರುವ ಕೋಳಿ, ಕುರಿ, ಹಸಿಮೀನು ಮಾರಾಟ ಮಳಿಗೆಗಳ ಬಹಿರಂಗ ಹರಾಜು ಪ್ರಕ್ರಿಯೆ ಇಂದು ನಡೆಯಿತು. ಮೀನು ಮಾರಾಟ ಮಳಿಗೆಗಳನ್ನು ಪಡೆದುಕೊಳ್ಳಲು ಪೈಪೋಟಿಯೊಂದಿಗೆ ವ್ಯಾಪಾರಿಗಳು ಹರಾಜಿನಲ್ಲಿ ಭಾಗವಹಿಸಿದ್ದರು. ಅಂತಿಮವಾಗಿ ಮೀನು ಮಾರಾಟ ಮಳಿಗೆ ಅಧಿಕ ಬೆಲೆಗೆ ಮಾರಾಟವಾಗಿದೆ. ಕಳೆದ ಬಾರಿ ಕುರಿ, ಕೋಳಿ, ಮೀನು ಮಾರಾಟ ಮಳಿಗೆಗಳು ಸೇರಿ ಒಟ್ಟು ರೂ. ೧೨,೩೯,೦೨೫ಕ್ಕೆ ಮಾರಾಟವಾಗಿತ್ತು. ಈ ಬಾರಿ ಎರಡು ಕುರಿಮಾಂಸ ಮಳಿಗೆ ಹೊರತುಪಡಿಸಿ ೨೦.೨ ಲಕ್ಷಕ್ಕೆ ಮಾರಾಟವಾಗಿದ್ದು, ಎಲ್ಲ ಒಟ್ಟು ಸೇರಿ ನಗರಸಭೆಗೆ ರೂ. ೭,೬೨,೯೭೫ ಲಾಭವಾಗಿದೆ.

ಕಾವೇರಿ ಕಲಾ ಕ್ಷೇತ್ರದಲ್ಲಿ ನಡೆದ ಹರಾಜು ಪ್ರಕ್ರಿಯೆಯಲ್ಲಿ ಮೊದಲಿಗೆ ಮೀನು ಮಾರಾಟ ಮಳಿಗೆಗಳ ಹರಾಜು ಆರಂಭಗೊAಡಿತು. ಒಂದು ಮತ್ತು ಎರಡನೇ ಮಳಿಗೆಗಳು ಸರಕಾರದ ದರಕ್ಕಿಂತ ಕೊಂಚ ಹೆಚ್ಚಿಗೆ ಮೊತ್ತಕ್ಕೆ ಮಾರಾಟವಾಯಿತು. ಮೂರನೇ ಮಳಿಗೆ ಸ್ವಲ್ಪ ದುಬಾರಿಯಾಗಿ ಮಾರಾಟವಾಯಿತು. ಆದರೆ ನಾಲ್ಕನೇ ಮಳಿಗೆಗೆ ತೀವ್ರ ಪೈಪೋಟಿ ಕಂಡುಬAದಿತು. ಸರಕಾರದ ದರ ರೂ. ೧.೫ ಲಕ್ಷವಾಗಿದ್ದು, ಬಿಡ್ಡುದಾರರು ತನಗೆ ಬೇಕೆಂಬ ಹಠದೊಂದಿಗೆ ಹರಾಜು ಕೂಗಿದರು. ಹರಾಜು ಮೊತ್ತ ರೂ.೩ಲಕ್ಷ ದಾಟುತ್ತಿದ್ದಂತೆ ಕೆಲವರು ಸುಮ್ಮನಾದರು. ನಂತರದಲ್ಲಿ ಮಕ್ಬೂಲ್ ಹಾಗೂ ಚಂದ್ರಕಿರಣ್ ಅವರ ನಡುವೆ ಜಿದ್ದಾ ಜಿದ್ದಿನ ಪೈಪೋಟಿ ಕಂಡು ಬಂದಿತು. ಇಬ್ಬರೂ ಬಿಡ್ ಹಣ ಏರಿಸುತ್ತಲೇ ಸಾಗಿದರು. ಕೊನೆಗೆ ಮಳಿಗೆ ರೂ.೪ಲಕ್ಷಕ್ಕೆ ಮಾರಾಟವಾಗಿ ಮಕ್ಬೂಲ್ ಅವರ ಪಾಲಾಯಿತು. ಬಿಡ್‌ದಾರರ

(ಮೊದಲ ಪುಟದಿಂದ) ಮುಖದಲ್ಲಿ ದುಗುಡ, ಆವೇಶ ಕಂಡುಬAದರೆ, ನಗರಸಭಾ ಪ್ರತಿನಿಧಿಗಳು, ಅಧಿಕಾರಿಗಳ ಮೊಗದಲ್ಲಿ ನಗು ಅರಳಿತ್ತು..! ಒಟ್ಟು ೫ಮಳಿಗೆಗಳು ರೂ.೧೦,೪೨,೦೦೦ಕ್ಕೆ ಮಾರಾಟವಾದವು. ಕಳೆದ ಸಾಲಿನಲ್ಲಿ ರೂ.೫,೧೫,೫೫೦ಕ್ಕೆ ಮಾರಾಟವಾಗಿತ್ತು.

ಕೋಳಿ ಮಾಂಸ ಮಾರಾಟ ಮಾಡುವ ಆರು ಮಳಿಗೆಗಳು ಒಟ್ಟು ರೂ.೮,೫೯,೦೦೦ಕ್ಕೆ ಮಾರಾಟವಾದವು. ಕಳೆದ ಸಾಲಿನಲ್ಲಿ ರೂ.೭,೨೩,೪೭೫ಕ್ಕೆ ಮಾರಾಟವಾಗಿದ್ದವು. ಇದರಲ್ಲಿ ಹೆಚ್ಚಿನ ಪೈಪೋಟಿ ಕಂಡುಬರಲಿಲ್ಲ. ಇನ್ನೂ ಕುರಿ ಮಾಂಸದ ಮೂರು ಮಳಿಗೆಗಳ ಪೈಕಿ ಒಂದು ಮಳಿಗೆ ಮಾತ್ರ ರೂ.೮೬ಸಾವಿರಕ್ಕೆ ಮಾರಾಟವಾಯಿತು. ಕಳೆದ ಸಾಲಿನಲ್ಲಿ ಈ ಮಳಿಗೆ ೧.೧ಲಕ್ಷಕ್ಕೆ ಮಾರಾಟವಾಗಿತ್ತು. ಇನ್ನೆರಡು ಮಳಿಗೆಗಳ ಹರಾಜಿನಲ್ಲಿ ಯಾರೂ ಭಾಗವಹಿಸದ ಕಾರಣ ಬಾಕಿ ಉಳಿಯುವಂತಾಯಿತು.

ಮಾತಿನ ಚಕಮಕಿ..!

ಹಸಿ ಮೀನು ಮಾರಾಟ ಮಳಿಗೆಗಳ ಹರಾಜು ನಡೆಯುತ್ತಿದ್ದ ಸಂದರ್ಭ ನಾಲ್ಕನೇ ಮಳಿಗೆಯ ಹರಾಜು ಮುಗಿದು ಎಲ್ಲರೂ ಹೊರಬಂದ ಬಳಿಕ ಹೊರಗಡೆ ಬಿಡ್ ಕೂಗಿದವರ ನಡುವೆ ಮಾತಿನ ಚಕಮಕಿ ನಡೆಯಿತು. ಮಧ್ಯ ಪ್ರವೇಶಿಸಿದ ಇತರ ವ್ಯಾಪಾರಸ್ಥರು ಸಮಾಧಾನಪಡಿಸಿ ವಾತಾವರಣ ತಿಳಿಗೊಳಿಸಿದರು.

ಹರಾಜು ಪ್ರಕ್ರಿಯೆ ಸಂದರ್ಭ ನಗರ ಸಭಾಧ್ಯಕ್ಷೆ ಅನಿತಾ ಪೂವಯ್ಯ, ಉಪಾಧ್ಯಕ್ಷೆ ಸವಿತಾ ರಾಖೇಶ್, ಪೌರಾಯುಕ್ತ ಹೆಚ್.ವಿ.ರಾಮ್‌ದಾಸ್, ಸದಸ್ಯರುಗಳಾದ ಮಹೇಶ್ ಜೈನಿ, ಉಮೇಶ್ ಸುಬ್ರಮಣಿ, ಅರುಣ್ ಶೆಟ್ಟಿ, ಮಂಜುಳಾ, ಶಾರದಾ ನಾಗರಾಜ್, ಶ್ವೇತಾ ಪ್ರಶಾಂತ್, ಸಬಿತಾ ಹಾಜರಿದ್ದರು. ನಗರಸಭಾ ಕಂದಾಯ ನಿರೀಕ್ಷಕ ತಾಹಿರ್ ಹರಾಜು ಪ್ರಕ್ರಿಯೆ ನಡೆಸಿಕೊಟ್ಟರು. ಸಿಬ್ಬಂದಿ ಬಶೀರ್ ಅಹ್ಮದ್ ಸಹಕರಿಸಿದರು.

?ಸಂತೋಷ್