ಮಡಿಕೇರಿ, ಮಾ. ೨೪: ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಬಿಟ್ಟಂಗಾಲ ಹಾಗೂ ಬಿರುನಾಣಿ ಗ್ರಾ.ಪಂ. ವ್ಯಾಪ್ತಿಯ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಕೂಟಿಯಾಲ ಸೇತುವೆ ಹಾಗೂ ರಸ್ತೆ ಕಾಮಗಾರಿಗೆ ಸಂಬAಧಿಸಿದAತೆ ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ್ ಅವರು ಸರಕಾರದ ಪರವಾಗಿ ನೀಡಿರುವ ಉತ್ತರ ಸ್ಪಷ್ಟತೆ ಇಲ್ಲದಂತಿದೆ.
ವಿಧಾನಪರಿಷತ್‌ನಲ್ಲಿ ಸದಸ್ಯೆ ವೀಣಾ ಅಚ್ಚಯ್ಯ ಅವರು ಈ ಕುರಿತಾಗಿ ಕೇಳಿದ್ದ ಪ್ರಶ್ನೆಗೆ ಸಚಿವರು ಉತ್ತರ ನೀಡಿದ್ದು ಇದರಲ್ಲಿ ಮುಂದೇನು...? ಎಂಬ ಕುರಿತು ಯಾವುದೇ ಪ್ರಸ್ತಾಪವಿಲ್ಲ ದಿರುವುದು ಕಂಡುಬAದಿದೆ.
ಈ ಕಾಮಗಾರಿ ಅನುಮೋದನೆ ಗೊಂಡ ವರ್ಷ, ಅನುದಾನ, ಕಾಮಗಾರಿಯ ಪ್ರಗತಿ, ಪ್ರಸ್ತುತ ಇರುವ ಹಂತ, ಸ್ಥಗಿತಕ್ಕೆ ಕಾರಣ ಹಾಗೂ ಇದರ ಅಡೆ-ತಡೆ ನಿವಾರಣೆಗೆ ಸರಕಾರದ ಕ್ರಮಗಳೇನು ಎಂಬದಾಗಿ ವೀಣಾ ಪ್ರಶ್ನೆ ಮಾಡಿದ್ದರು.
ಸಚಿವರ ಉತ್ತರ : ಈ ಪ್ರಶ್ನೆಗೆ ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ್ ಅವರು ಒದಗಿಸಿರುವ ಉತ್ತರ ಇಂತಿದೆ. ಬಿಟ್ಟಂಗಾಲದಿAದ ಕೂಟಿಯಾಲದವರೆಗಿನ ಸರಪಳಿ ೦.೦೦ ರಿಂದ ೧೩.೬೦
(ಮೊದಲ ಪುಟದಿಂದ) ಕಿ.ಮೀ.ವರೆಗಿನ ಜಿಲ್ಲಾ ಮುಖ್ಯ ರಸ್ತೆಯಾಗಿರುತ್ತದೆ.
ಕೂಟಿಯಾಲದಿಂದ ಬರಪೊಳೆ ಸೇತುವೆ ಮುಖಾಂತರ ಕೂಡು ರಸ್ತೆ ಮೂಲಕ ಬಿರುನಾಣಿಗೆ ಸಂಪರ್ಕಿಸುವ ರಸ್ತೆಯು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ವ್ಯಾಪ್ತಿಗೆ ಒಳಪಡುತ್ತದೆ. ಬರಪೊಳೆ ಸೇತುವೆ ನಿರ್ಮಾಣ ಕಾಮಗಾರಿಯನ್ನು ಲೋಕೋಪಯೋಗಿ ಇಲಾಖೆ ವತಿಯಿಂದ ಆರ್.ಐ.ಡಿ.ಎಫ್. ೩ರಡಿಯಲ್ಲಿ ರೂ. ೬೯.೫೫ ಲಕ್ಷಗಳ ಅಂದಾಜು ಮೊತ್ತದಲ್ಲಿ ಕಾಮಗಾರಿ ಯನ್ನು ಕೈಗೊಂಡು ದಿನಾಂಕ ೩೦.೦೮.೨೦೦೩ರಲ್ಲಿ ಪೂರ್ಣ ಗೊಳಿಸಲಾಗಿರುತ್ತದೆ.
ಸದರಿ ಬರಪೊಳೆ ಸೇತುವೆಯಿಂದ ಬಿರುನಾಣಿ ಸಂಪರ್ಕಿಸುವ ಕೂಡು ರಸ್ತೆ (ಗ್ರಾಮೀಣ ರಸ್ತೆ) ನಿರ್ಮಿಸುವ ಕಾಮಗಾರಿಯನ್ನು ಲೋಕೋಪಯೋಗಿ ಇಲಾಖೆ ವತಿಯಿಂದ ೨೦೦೪-೨೦೦೫ನೇ ಸಾಲಿನಲ್ಲಿ ನಬಾರ್ಡ್ ಆರ್ಥಿಕ ಸಹಾಯಧನ ಆರ್.ಐ.ಡಿ.ಎಫ್-೧೦ರ ಅಡಿಯಲ್ಲಿ ರೂ. ೯೩.೦೦ ಲಕ್ಷ ಅಂದಾಜು ಮೊತ್ತದಲ್ಲಿ ಕೈಗೊಳ್ಳಲು ಮಂಜೂರಾತಿಯಾಗಿರುತ್ತದೆ.
ಮAಜೂರಾದ ಕಾಮಗಾರಿಯನ್ನು ದಿನಾಂಕ ೨೨.೦೩.೨೦೦೭ರಂದು ಪ್ರಾರಂಭಿಸಲಾಗಿ ೧.೦೦ ಕಿ.ಮೀ. ರಸ್ತೆ ಪಾರ್ಮೇಶನ್ ಕಾಮಗಾರಿಯು ಪ್ರಗತಿಯಲ್ಲಿದ್ದ ಸಂದರ್ಭದಲ್ಲಿ ವಲಯ ಅರಣ್ಯ ಅಧಿಕಾರಿಗಳು, ಪೊನ್ನಂಪೇಟೆ ವಲಯ ಇವರ ಸೂಚನೆಯ ಮೇರೆಗೆ ಕಾಮಗಾರಿ ನಡೆಯುವ ಸ್ಥಳವು ಬ್ರಹ್ಮಗಿರಿ ವನ್ಯಜೀವಿ ಅರಣ್ಯ ಪ್ರದೇಶದಲ್ಲಿ ಹಾದು ಹೋಗುತ್ತಿರುವುದರಿಂದ ಕಾಮಗಾರಿ ಯನ್ನು ಸ್ಥಗಿತಗೊಳಸಲಾಗಿರುತ್ತದೆ.
ಅಂದಿನ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು, ಅರಣ್ಯ ಪರಿಸರ ಮತ್ತು ಜೀವಶಾಸ್ತç ಇಲಾಖೆಯವರ ಅಧ್ಯಕ್ಷತೆಯಲ್ಲಿ ದಿನಾಂಕ ೦೬.೦೨.೨೦೧೭ರಂದು ಕೊಡಗು ಜಿಲ್ಲೆ ವೀರಾಜಪೇಟೆ ತಾಲೂಕಿನ ಅರಣ್ಯ ಪ್ರದೇಶದ ಬರಪೊಳೆಯಲ್ಲಿ ಸೇತುವೆ ಮತ್ತು ಕೂಡು ರಸ್ತೆ ನಿರ್ಮಾಣ ಕಾಮಗಾರಿ ಕುರಿತು ನಡೆದ ಸಭೆಯಲ್ಲಿ ಪ್ರಸ್ತಾಪಿಸಿರುವ ರಸ್ತೆ ಪ್ರದೇಶವು ಜಿಲ್ಲಾ ಪಂಚಾಯತ್ ವ್ಯಾಪ್ತಿಗೆ ಒಳಪಡುತ್ತಿದ್ದು, ಸೇತುವೆ ಮತ್ತು ರಸ್ತೆಯ ನಿರ್ಮಾಣ ಕಾರ್ಯವನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ಕೈಗೊಳ್ಳ ಬೇಕಾಗುತ್ತದೆಂದು ನಿರ್ಣಯಿಸಲಾಗಿದೆ ಎಂದಷ್ಟೆ ಸಚಿವರ ಮಾಹಿತಿಯಲ್ಲಿದೆ.