ಕುಶಾಲನಗರ, ಮಾ.೨೩: ಸ್ವಚ್ಛ ಕುಶಾಲನಗರ ನಿರ್ಮಾಣಕ್ಕಾಗಿ ಕಳೆದ ಕೆಲವು ಸಮಯಗಳಿಂದ ಹಲವು ಯೋಜನೆಗಳನ್ನು ರೂಪಿಸುತ್ತಿರುವ ಕುಶಾಲನಗರ ಪಟ್ಟಣ ಪಂಚಾಯಿತಿ ಆಡಳಿತ ಮಂಡಳಿ ಇದೀಗ ಸ್ವಚ್ಛ ಕಾವೇರಿ ನಿರ್ಮಾಣಕ್ಕಾಗಿ ಜನರಿಗೆ ಅರಿವು, ಜಾಗೃತಿ ಮೂಡಿಸುವ ಯೋಜನೆಯೊಂದನ್ನು ಕೈಗೆತ್ತಿ ಕೊಂಡಿದೆ.

ಕೊಡಗು ಮೈಸೂರು ಜಿಲ್ಲೆಯ ಗಡಿ ಭಾಗ ಕುಶಾಲನಗರ -ಕೊಪ್ಪ ಕಾವೇರಿ ನದಿ ಸೇತುವೆಯಿಂದ ನದಿಗೆ ಭಾರಿ ಪ್ರಮಾಣದ ತ್ಯಾಜ್ಯ ಎಸೆಯುವುದನ್ನು ತಪ್ಪಿಸಲು ಕುಶಾಲನಗರ ಪಟ್ಟಣ ಪಂಚಾಯಿತಿ ವಿನೂತನ ಯೋಜನೆಯೊಂದನ್ನು ರೂಪಿಸಿದೆ.

ಇತ್ತೀಚಿನ ದಿನಗಳಲ್ಲಿ ಸೇತುವೆ ಮೇಲ್ಭಾಗದಿಂದ ದಿನನಿತ್ಯ ಧಾರ್ಮಿಕ ತ್ಯಾಜ್ಯಗಳು ಸೇರಿದಂತೆ ಅನುಪಯುಕ್ತ ವಸ್ತುಗಳನ್ನು ಸೇತುವೆ ಮೇಲ್ಭಾಗದಿಂದ ಎಸೆಯುವುದು ಸಾಮಾನ್ಯ ದೃಶ್ಯವಾಗಿದೆ. ವಾಹನಗಳಲ್ಲಿ ತೆರಳುವ ಸಂದರ್ಭ ಹಲವರು ಪ್ಲಾಸ್ಟಿಕ್ ಮತ್ತಿತರ ಚೀಲಗಳಲ್ಲಿ ತುಂಬಿ ನದಿಗೆ ಎಸೆದು ಹೋಗುತ್ತಿರುವುದು ದಿನನಿತ್ಯದ ದೃಶ್ಯವಾಗಿದೆ. ನದಿಯಲ್ಲಿ ನೀರಿನ ಹರಿವಿನ ಪ್ರಮಾಣ ಕಡಿಮೆಯಾದ ಬೆನ್ನಲ್ಲೇ ಈ ಮೂಲಕ ಸಂಗ್ರಹವಾದ ತ್ಯಾಜ್ಯ ಗಳಲ್ಲಿ ಹುಳಗಳು ಸೃಷ್ಟಿಯಾಗಿ ನದಿ ನೀರು ಸಂಪೂರ್ಣವಾಗಿ ಮಲಿನವಾಗುತ್ತಿರುವುದು ಸಾಮಾನ್ಯ ಚಿತ್ರಣವಾಗಿದೆ. ಇದನ್ನು ಮನಗಂಡು ಸ್ಥಳೀಯ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಪ್ರತಿವರ್ಷ ಸೇತುವೆ ಕೆಳಭಾಗದಲ್ಲಿ ನದಿಯನ್ನು ಸ್ವಚ್ಛ ಮಾಡುವುದು ನಿರಂತರವಾಗಿ ನಡೆದುಕೊಂಡು ಬಂದಿದೆ. ವರ್ಷಂಪ್ರತಿ ಲಾರಿಗಟ್ಟಲೆ ತ್ಯಾಜ್ಯಗಳು ನದಿಯಲ್ಲಿ

(ಮೊದಲ ಪುಟದಿಂದ) ಸಂಗ್ರಹವಾಗುವುದ ರೊಂದಿಗೆ ನದಿ ನೀರು ಸಂಪೂರ್ಣ ಕಲುಷಿತಗೊಂಡು ನೀರಿನ ಗುಣಮಟ್ಟ ಸಂಪೂರ್ಣ ಕುಸಿತಕ್ಕೆ ಒಳಗಾಗುತ್ತಿದೆ. ಇದಕ್ಕೆ ಶಾಶ್ವತ ಪರಿಹಾರ ಕಂಡು ಹಿಡಿಯುವಂತೆ ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿಯ ಪ್ರಮುಖರು ಪಂಚಾಯಿತಿ ಆಡಳಿತ ಮಂಡಳಿಗೆ ಮನವಿ ಸಲ್ಲಿಸಿದ ಮೇರೆಗೆ ಕಳೆದ ವರ್ಷ ಬಜೆಟ್ ನಲ್ಲಿ ಅಲ್ಪ ಪ್ರಮಾಣದ ಅನುದಾನ ಕೂಡ ಕಲ್ಪಿಸಲಾಗಿತ್ತು. ಇದರ ಜೊತೆಗೆ ಕುಶಾಲನಗರ ಪಟ್ಟಣ ಪಂಚಾಯಿತಿ ಅಧ್ಯಕ್ಷರು ಆಡಳಿತ ಮಂಡಳಿ ಮತ್ತು ಮುಖ್ಯ ಅಧಿಕಾರಿಗಳು ಸೇರಿ ಯೋಜನೆಯನ್ನು ರೂಪಿಸಿ ಸೇತುವೆಯ ಎರಡು ಭಾಗಗಳಲ್ಲಿ ನದಿ ಸಂರಕ್ಷಣೆಗೆ ಮೆಶ್ ಅಳವಡಿಸುವ ಕ್ರಮಕ್ಕಾಗಿ ಕ್ರಿಯಾ ಯೋಜನೆ ರೂಪಿಸಿದರು. ೧೨೦ ಮೀಟರ್ ಉದ್ದದ ಸೇತುವೆಗೆ ೮ ಅಡಿ ಎತ್ತರಕ್ಕೆ ಚೈನ್ ಲಿಂಕ್ ಮೆಶ್ ಅಳವಡಿಸುವ ಯೋಜನೆ ಇದಾಗಿದೆ.

ಈ ಮೂಲಕ ನದಿಗೆ ಹಲವು ರೀತಿಯ ತ್ಯಾಜ್ಯ ಎಸೆದು ನದಿ ಕಲುಷಿತಗೊಳಿಸುವುದನ್ನು ತಪ್ಪಿಸುವುದರೊಂದಿಗೆ ಜನರಿಗೆ ನದಿ ಸಂರಕ್ಷಣೆಯ ಬಗ್ಗೆ ಅರಿವು ಮೂಡಿಸುವ ಕೆಲಸ ನಿರಂತರ ನಡೆಯಲಿದೆ ಎಂದು ಕುಶಾಲನಗರ ಪಟ್ಟಣ ಪಂಚಾಯಿತಿ ಅಧ್ಯಕ್ಷ ಜಯವರ್ಧನ್ ಶಕ್ತಿಯೊಂದಿಗೆ ತಮ್ಮ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.

ಯೋಜನೆಯ ಸಂಬAಧ ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ ಕೃಷ್ಣಪ್ರಸಾದ್ ಮತ್ತು ಪಂಚಾಯಿತಿ ಅಧ್ಯಕ್ಷ ಜಯವರ್ಧನ್ ಸ್ಥಳೀಯ ಫೆಡರಲ್ ಬ್ಯಾಂಕ್ ಅಧಿಕಾರಿಗಳ ಗಮನಕ್ಕೆ ತಂದು ಚರ್ಚಿಸಿ ಮನದಟ್ಟು ಮಾಡಿದ ಹಿನ್ನೆಲೆಯಲ್ಲಿ ಸಂಸ್ಥೆಯ ಲಾಭಾಂಶದ ಹಣದಲ್ಲಿ ರೂ ೯.೪೮ ಲಕ್ಷ ದೇಣಿಗೆ ನೀಡುವ ಭರವಸೆ ಮೇರೆಗೆ ಯೋಜನೆಗೆ ಸಂಬAಧಿಸಿದAತೆ ನೀಲಿನಕ್ಷೆ ರೂಪಿಸಲಾಗಿದೆ. ಈ ಬಗ್ಗೆ ಪಂಚಾಯಿತಿ ಆಡಳಿತ ಮಂಡಳಿಯ ಸಭೆಯ ಗಮನಕ್ಕೆ ತಂದು ನಂತರ ಕಾಮಗಾರಿ ಪ್ರಾರಂಭಕ್ಕೆ ಸಂಬAಧಿಸಿದ ರಾಷ್ಟಿçÃಯ ಹೆದ್ದಾರಿ ಅಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು ಕೂಡ ಇತ್ತೀಚೆಗೆ ಸ್ಥಳ ಪರಿಶೀಲನೆ ನಡೆಸಿದ್ದು ಕಾಮಗಾರಿಗೆ ಹಸಿರು ನಿಶಾನೆ ನೀಡಿದ್ದಾರೆ.

ಈ ಸಂಬAಧ ಜಿಲ್ಲಾಧಿಕಾರಿ ಡಾ.ಸತೀಶ್ ಅವರು ಕೂಡ ಯೋಜನೆ ಬಗ್ಗೆ ಕಾಳಜಿ ವಹಿಸಿದ್ದು ತಕ್ಷಣ ಕಾಮಗಾರಿ ಆರಂಭಿಸುವAತೆ ಕುಶಾಲನಗರ ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

-ಚಂದ್ರಮೋಹನ್