ಮಡಿಕೇರಿ, ಮಾ. ೨೪: ಇಬ್ನಿವಳವಾಡಿ ಗ್ರಾಮದ ಶ್ರೀ ಭದ್ರಕಾಳಿ ದೇವರ ವಾರ್ಷಿಕೋತ್ಸವ ತಾ. ೨೬ ರಂದು ದೇವಾಲಯದಲ್ಲಿ ನಡೆಯಲಿದೆ. ದೇವಿಗೆ ವಿವಿಧ ಪೂಜಾ ಕೈಂಕರ್ಯಗಳು ನೆರವೇರಲಿದೆ.

ಇದೇ ಸಂದರ್ಭ ಕೊಡಿ ಆಟ್, ಆಂಗೋಲ ಪೋಂಗೊಲ, ಪೀಲಿ ಆಟ್, ಕೊಂಬಾಟ್ ಮತ್ತು ತೆಂಗಿನಕಾಯಿಗೆ ಗುಂಡು ಹೊಡೆಯುವ ಕಾರ್ಯಕ್ರಮ ನಡೆಯಲಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ದೇವಾಲಯದ ತಕ್ಕ ಮುಖ್ಯಸ್ಥರು ಮನವಿ ಮಾಡಿದ್ದಾರೆ.