ಮಡಿಕೇರಿ ಮಾ.೨೩: ಸೋಮವಾರಪೇಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಮಹದೇಶ್ವರ ಬ್ಲಾಕ್ನಲ್ಲಿರುವ ಸೋಮವಾರಪೇಟೆ ಪಟ್ಟಣ ಪಂಚಾಯಿತಿಗೆ ಸೇರಿದ ಹೊಸ ಬಡಾವಣೆಯ ಸರ್ವೆ ನಂಬರ್-೬೪/೧, ೬೪/೨ ರಲ್ಲಿ ಈಗಾಗಲೇ ಪಟ್ಟಣ ಪಂಚಾಯಿತಿಯಿAದ ನಿವೇಶನ ರಹಿತ ಫಲಾನುಭವಿಗಳಿಗೆ ೨೦೧೦-೧೧ ನೇ ಸಾಲಿನಲ್ಲಿ ಹಕ್ಕುಪತ್ರ ನೀಡಲಾಗಿದೆ.
ಆದರೆ ಹಕ್ಕುಪತ್ರ ನೀಡಿರುವ ಫಲಾನುಭವಿಗಳು ಮನೆ ನಿರ್ಮಿಸದೇ ಖಾಲಿ ಜಾಗವನ್ನು ಬೇರೆಯವರಿಗೆ ಪರೆಬಾರೆ ಮಾಡುತ್ತಿರುವುದಾಗಿ ಕಚೇರಿಯ ಕೌನ್ಸಿಲ್ ಸಾಮಾನ್ಯ ಸಭೆಯಲ್ಲಿ ಚರ್ಚಿಸಲಾಗಿದೆ. ಆದ್ದರಿಂದ ಈಗಾಗಲೇ ಹಕ್ಕುಪತ್ರ ಪಡೆದಿರುವ ಪ್ರತಿ ಫಲಾನುಭವಿಗಳು ತಮ್ಮ ಹಕ್ಕುಪತ್ರ ಹಾಗೂ ಇತರೇ ದಾಖಲಾತಿಗಳನ್ನು ೭ ದಿನಗಳ ಒಳಗೆ ಸೋಮವಾರಪೇಟೆ ಪಟ್ಟಣ ಪಂಚಾಯಿತಿ ಕಚೇರಿಗೆ ಹಾಜರುಪಡಿಸಲು ತಿಳಿಸಿದೆ. ತಪ್ಪಿದ್ದಲ್ಲಿ ಈಗಾಗಲೇ ಈ ಕಚೇರಿಯಿಂದ ನೀಡಿರುವ ಹಕ್ಕು ಪತ್ರವನ್ನು ಮುಟ್ಟುಗೋಲು ಹಾಕಲಾಗುವುದು ಎಂದು ಸೋಮವಾರಪೇಟೆ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಅವರು ತಿಳಿಸಿದ್ದಾರೆ.