ಮಡಿಕೇರಿ, ಮಾ. ೨೩: ಮೂರ್ನಾಡು ಸಮೀಪದ ಕಿಗ್ಗಾಲು ಗ್ರಾಮದ ಶ್ರೀ ಚಾಮುಂಡೇಶ್ವರಿ ವಾರ್ಷಿಕ ಹಬ್ಬವು ತಾ. ೨೮, ೨೯, ೩೦ ರಂದು ನಡೆಯಲಿದೆ. ತಾ. ೨೮ ರಂದು ಕೊಟ್ಟಿಹಾಡುವುದು, ತಾ. ೨೯ ರಂದು ತಕ್ಕರ ಮನೆಯಿಂದ ಭಂಡಾರ ತೆಗೆದುಕೊಂಡು ಅಂಬಲಕ್ಕೆ ತರುವುದು. ತದನಂತರ ದೇವತಾಕಾರ್ಯ ಅಂದೇ ರಾತ್ರಿ ಮೇಲೆರಿಗೆ ಬೆಂಕಿ ಹಾಕುವುದು. ೩೦ರ ಬೆಳಗ್ಗಿನ ಜಾವ ವಿಷ್ಣುಮೂರ್ತಿ ತೆರೆ, ಮೇಲೇರಿಗೆ ಬೀಳುವುದು ಮತ್ತು ಹನ್ನೊಂದು ಗಂಟೆಗೆ ಕಿಗ್ಗಾಲು ಶ್ರೀ ಚಾಮುಂಡೇಶ್ವರಿ ದೊಡ್ಡಮುಡಿ ತೆರೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.