ವೀರಾಜಪೇಟೆ, ಮಾ. ೨೩: ಮೈಸೂರಿನ ಕಾರ್ಪೆಡ್ ಹಾಲ್‌ನಲ್ಲಿ ಜರುಗಿದ ಮೈಸೂರು ವಿಶ್ವವಿದ್ಯಾನಿಲಯದ ೧೦೨ನೇ ಘಟಿಕೋತ್ಸವದಲ್ಲಿ ಶೈಕ್ಷಣಿಕ ಸಾಧನೆಗೆ ಐದು ಚಿನ್ನದ ಪದಕ ನಗದು ಬಹುಮಾನವನ್ನು ಶಬರೀಶ್ ಅವರು ಪಡೆದುಕೊಂಡಿದ್ದಾರೆ.

ವೀರಾಜಪೇಟೆ ಸಮೀಪದ ಕೋಟೆಕೊಪ್ಪ ಗ್ರಾಮದ ಒಕ್ಕಲಿಗರ ರಘು ಮತ್ತು ರೇಣುಕಾ ದಂಪತಿ ದ್ವಿತೀಯ ಪುತ್ರರಾಗಿರುವ ಇವರು ಪ್ರಸ್ತುತ ಮೊದಲನೆಯ ವರ್ಷದ ಎಂಪಿಎಡ್ ವ್ಯಾಸಾಂಗ ಮಾಡುತ್ತಿದ್ದಾರೆ.