ಶನಿವಾರಸಂತೆ, ಮಾ. ೨೩: ಗೌಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದಿಣೇಕೊಪ್ಪ ಗ್ರಾಮದ ನಿವಾಸಿ ಎಂ.ಪಿ. ಲಿಂಗರಾಜು ಅವರ ಪತ್ನಿ ಜಯಲಕ್ಷಿö್ಮ (೫೨) ಅವರು ತಾ. ೨೧ ರಂದು ತಮ್ಮ ಮನೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟ ಪ್ರಕರಣ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ಎಂ.ಪಿ. ಲಿಂಗರಾಜು ಅವರು ೩೦ ವರ್ಷಗಳ ಹಿಂದೆ ಜಯಲಕ್ಷಿö್ಮ ಅವರನ್ನು ಮದುವೆಯಾಗಿದ್ದು, ಅನ್ಯೋನ್ಯತೆಯಿಂದ ಇದ್ದರು. ತಾ. ೨೧ ರಂದು ಗಂಡ - ಹೆಂಡತಿಯರಿಗೆ ತೋಟದ ವಿಚಾರದಲ್ಲಿ ಭಿನ್ನಾಭಿಪ್ರಾಯಗಳು ಉಂಟಾಗಿ ಇದೇ ವಿಚಾರದಲ್ಲಿ ಗಂಡ ಮನನೊಂದು ತೋಟಕ್ಕೆ ಹೋಗಿ ವಾಪಾಸು ಮನೆಗೆ ಬಂದು ನೋಡಿದಾಗ ಪತ್ನಿ ಜಯಲಕ್ಷಿö್ಮ ವಿಷ ಸೇವಿಸಿ ಅಸ್ವಸ್ತಗೊಂಡಿರುವುದನ್ನು ನೋಡಿ ಚಿಕಿತ್ಸೆಗಾಗಿ ಸೋಮವಾರಪೇಟೆ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಹಾಸನದ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದು, ತಾ. ೨೩ ರಂದು ಬೆಳಿಗ್ಗೆ ಚಿಕಿತ್ಸೆ ಫಲಕಾರಿ ಆಗದೆ ಜಯಲಕ್ಷಿö್ಮ ಮೃತಪಟ್ಟಿದ್ದಾರೆ. ಪತ್ನಿ ಮಾನಸಿಕವಾಗಿ ಜಿಗುಪ್ಸೆಗೊಂಡು ವಿಷ ಸೇವನೆ ಮಾಡಿರುವುದಾಗಿ ಗಂಡ ಶನಿವಾರಸಂತೆ ಪೊಲೀಸ್ ಠಾಣೆಗೆ ನೀಡಿದ ದೂರಿನ ಮೇರೆ, ಠಾಣಾ ಹೆಡ್‌ಕಾನ್ಸ್ಟೇಬಲ್ ನೆಹರು ಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಕಲಂ U/S -೧೭೪ ಪ್ರಕರಣ ದಾಖಲಿಸಿದ್ದಾರೆ.