ಕೂಡಿಗೆ, ಮಾ. ೨೪ ಕೂಡುಮಂಗಳೂರು ಗ್ರಾಮದ ಶ್ರೀ ಬಸವೇಶ್ವರ ಯುವಕ ಸಂಘದ ವತಿಯಿಂದ ೪ನೇ ವರ್ಷದ ಕೂಡುಮಂಗಳೂರು ವಾಲಿಬಾಲ್ ಲೀಗ್ ಪಂದ್ಯಾಟವು ತಾ. ೨೬ ಮತ್ತು ೨೭ ರಂದು ನಡೆಯಲಿದೆ ಎಂದು ಶ್ರೀ ಬಸವೇಶ್ವರ ಯುವಕ ಸಂಘದ ಅಧ್ಯಕ್ಷ ಸುಭಾಷ್ ತಿಳಿಸಿದ್ದಾರೆ.

ಪಂದ್ಯಾಟದಲ್ಲಿ ಕೂಡುಮಂಗಳೂರು, ಕೂಡಿಗೆ, ಹೆಬ್ಬಾಲೆ, ತೊರೆನೂರು, ಶಿರಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆಯ್ದ ತಂಡಗಳು ಭಾಗವಹಿಸಲಿವೆ. ಪಂದ್ಯಾವಳಿಯು ಕೂಡುಮಂಗಳೂರು ಗ್ರಾಮದ ಬಸವೇಶ್ವರ ಆಟದ ಮೈದಾನದಲ್ಲಿ ನಡೆಯಲಿದೆ ಎಂದು ಮಾಹಿತಿ ನೀಡಿದ್ದಾರೆ.