ಹತ್ಯೆ ಪ್ರಕರಣ - ಟಿಎಂಸಿ ಅಧ್ಯಕ್ಷನ ಬಂಧನ
ರಾಮಪುರಹತ್, ಮಾ. ೨೪: ಪಶ್ಚಿಮ ಬಂಗಾಳದ ಬಿರ್ಭೂಮ್ ಜಿಲ್ಲೆಯ ಬೊಗ್ಟುಯಿ ಗ್ರಾಮದಲ್ಲಿ ನಡೆದ ಹತ್ಯೆಗಳಿಗೆ ಸಂಬAಧಿಸಿದAತೆ ತೃಣಮೂಲ ಕಾಂಗ್ರೆಸ್‌ನ ರಾಮ್‌ಪುರಹತ್-೧ ಬ್ಲಾಕ್ ಅಧ್ಯಕ್ಷ ಅನಾರುಲ್ ಹೊಸೈನ್ ಅವರನ್ನು ಗುರುವಾರ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಈ ಪ್ರದೇಶದಲ್ಲಿ ಸಂಭವನೀಯ ಗೊಂದಲದ ಬಗ್ಗೆ ಸ್ಥಳೀಯ ಜನರ ಆತಂಕದ ಬಗ್ಗೆ ಗಮನ ಹರಿಸದ ಕಾರಣ ಅವರನ್ನು ಬಂಧಿಸುವAತೆ ಪೊಲೀಸರಿಗೆ ಸೂಚಿಸಿದ ಕೆಲವೇ ಗಂಟೆಗಳಲ್ಲಿ ಹೊಸೈನ್ ಅವರನ್ನು ಜಿಲ್ಲೆಯ ತಾರಾಪೀಠದಲ್ಲಿ ಬಂಧಿಸಲಾಯಿತು, ಇದು ಅಂತಿಮವಾಗಿ ಹತ್ಯಾಕಾಂಡಕ್ಕೆ ಕಾರಣವಾಯಿತು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಹೊಸೈನ್ ಅವರ ನಿವಾಸ ಸೇರಿದಂತೆ ಜಿಲ್ಲೆಯ ವಿವಿಧ ಭಾಗಗಳಲ್ಲಿ ಶೋಧ ನಡೆಸಲಾಗಿದ್ದು, ನಂತರ ಅವರನ್ನು ತಾರಾಪೀಠದಲ್ಲಿ ಬಂಧಿಸಲಾಗಿದೆ. ಪೊಲೀಸರು ಆತನ ಮೊಬೈಲ್ ಫೋನ್ ಟವರ್ ಲೊಕೇಶನ್ ಟ್ರ‍್ಯಾಕ್ ಮಾಡಿದ ನಂತರ ಹೊಸೈನ್ ಅವರನ್ನು ಹೊಟೇಲ್ ಬಳಿಯಿಂದ ಕರೆದುಕೊಂಡು ಹೋಗಲಾಯಿತು ಎಂದು ಅವರು ಹೇಳಿದರು. ಮಂಗಳವಾರ ಎಂಟು ಜನರನ್ನು ಸಜೀವ ದಹನ ಮಾಡಿದ ಘಟನೆಯ ಕುರಿತು ಸ್ಥಳೀಯ ಟಿಎಂಸಿ ನಾಯಕನನ್ನು ವಿಚಾರಣೆ ನಡೆಸಲಾಗುವುದು ಅವರು ತಿಳಿಸಿದ್ದಾರೆ. ಏತನ್ಮಧ್ಯೆ, ರಾಮ್‌ಪುರಹತ್ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್-ಇನ್‌ಚಾರ್ಜ್ ತ್ರಿದಿಬ್ ಪ್ರಮಾಣಿಕ್ ಅವರನ್ನು ನಿರ್ಲಕ್ಷ್ಯಕ್ಕಾಗಿ ಅಮಾನತುಗೊಳಿಸಲಾಗಿದೆ.
ಸಿಎಸ್‌ಕೆ ನಾಯಕ ಸ್ಥಾನಕ್ಕೆ ಧೋನಿ ರಾಜೀನಾಮೆ
ಮುಂಬೈ, ಮಾ. ೨೪: ಕೂಲ್ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಅವರು ಚೆನ್ನೆöÊ ಸೂಪರ್ ಕಿಂಗ್ಸ್ (ಸಿಎಸ್‌ಕೆ) ತಂಡದ ನಾಯಕ ಸ್ಥಾನಕ್ಕೆ ಗುರುವಾರ ರಾಜೀನಾಮೆ ನೀಡಿದ್ದು, ಚೆನ್ನೆöÊ ತಂಡದ ನೂತನ ನಾಯಕರಾಗಿ ರವೀಂದ್ರ ಜಡೇಜಾ ಅವರು ನೇಮಕಗೊಂಡಿದ್ದಾರೆ. ಈ ಬಗ್ಗೆ ಚೆನ್ನೆöÊ ಸೂಪರ್ ಕಿಂಗ್ಸ್ ಟ್ವೀಟ್ ಮಾಡಿದ್ದು, ಎಂಎಸ್ ಧೋನಿ ಅವರು ತಂಡದ ನಾಯಕತ್ವವನ್ನು ರವೀಂದ್ರ ಜಡೇಜಾ ಅವರಿಗೆ ವರ್ಗಾಯಿಸಿದ್ದಾರೆ ಎಂದು ಹೇಳಿದೆ. ೨೦೦೮ರಲ್ಲಿ ಆರಂಭವಾದ ಐಪಿಎಲ್ ಲೀಗ್‌ನ ಆರಂಭದಿAದಲೂ ಸಿಎಸ್‌ಕೆ ನಾಯಕರಾಗಿರುವ ಧೋನಿ ಅವರಿಗೆ ಇದು ಐಪಿಎಲ್ ಕೊನೆಯ ಆವೃತ್ತಿ ಆಗಬಹುದು. ಅವರು ಈಗಾಗಲೇ ಅಂರ‍್ರಾಷ್ಟಿçÃಯ ಕ್ರಿಕೆಟ್‌ನಿಂದ ನಿವೃತ್ತಿಯಾಗಿದ್ದಾರೆ.
ಇಂದು ಯೋಗಿ ಆದಿತ್ಯನಾಥ್ ಅಧಿಕಾರ ಸ್ವೀಕಾರ
ಲಖನೌ, ಮಾ. ೨೪: ಇತ್ತೀಚೆಗೆ ನಡೆದ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವಿನ ಸಂಭ್ರಮದ ಪಾಳಯದಲ್ಲಿರುವ ಯೋಗಿ ಆದಿತ್ಯನಾಥ್ ತಾ. ೨೫ ರಂದು (ಇಂದು) ಸತತ ಎರಡನೇ ಅವಧಿಗೆ ಮುಖ್ಯಮಂತ್ರಿ ಹುದ್ದೆಗೇರಲಿದ್ದಾರೆ. ಲಖನೌನದಲ್ಲಿ ನಡೆಯಲಿರುವ ಅದ್ಧೂರಿ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ, ರಾಜನಾಥ್ ಸಿಂಗ್, ಬಿಜೆಪಿ ಆಡಳಿತದ ಮುಖ್ಯಮಂತ್ರಿಗಳು, ಮುಖೇಶ್ ಅಂಬಾನಿ ಸೇರಿದಂತೆ ಹಲವು ಉದ್ಯಮಿಗಳು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಬಾಲಿವುಡ್ ನಟ ಅಕ್ಷಯ್ ಕುಮಾರ್, ಕಂಗನಾ ರಣಾವತ್, ಬೋನಿ ಕಪೂರ್ ಸೇರಿದಂತೆ ಹಲವಾರು ಬಾಲಿವುಡ್ ತಾರೆಯರಿಗೂ ಅಹ್ವಾನ ನೀಡಲಾಗಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ಇಂದು ನಡೆದ ಸಭೆಯಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ ನಾಯಕನಾಗಿ ಯೋಗಿ ಆದಿತ್ಯನಾಥ್ ಸರ್ವಾನುಮತದಿಂದ ಆಯ್ಕೆಯಾದರು. ರಾಜ್ಯಪಾಲ ಆನಂದಿಬೆನ್ ಪಾಟೀಲ್ ಅವರನ್ನು ಭೇಟಿ ಮಾಡಿ, ಸರ್ಕಾರ ರಚನೆಯ ಹಕ್ಕು ಮಂಡಿಸಲಿದ್ದಾರೆ.
ಐವರು ರಾಜ್ಯಸಭೆಗೆ ಅವಿರೋಧ ಆಯ್ಕೆ
ಚಂಡೀಗಡ, ಮಾ. ೨೪: ಪಂಜಾಬಿನಿAದ ರಾಜ್ಯಸಭೆಗೆ ನಾಮನಿರ್ದೇಶನಗೊಂಡಿದ್ದ ಐವರು ಆಮ್ ಆದ್ಮಿ ಪಕ್ಷದ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ. ಮಾಜಿ ಕ್ರಿಕೆಟ್ ಆಟಗಾರ ಹರ್ಭಜನ್ ಸಿಂಗ್, ಪಕ್ಷದ ಮುಖಂಡ ರಾಘವ್ ಚಾಡ್ಡಾ, ಲವ್ಲಿ ಪ್ರೊಫೆಸಲ್ ವಿವಿ ಸ್ಥಾಪಕ ಅಶೋಕ್ ಮಿತ್ತಲ್, ದೆಹಲಿ ಐಐಟಿ ಪ್ರೊಫೆಸರ್ ಸಂದೀಪ್ ಪಠಾಕ್, ಮತ್ತು ಉದ್ಯಮಿ ಸಂಜೀವ್ ಅವರನ್ನು ತಾ. ೩೧ ರಂದು ನಡೆಯಲಿರುವ ಚುನಾವಣೆಗಾಗಿ ಎಎಪಿ ನಾಮನಿರ್ದೇಶನ ಮಾಡಿತ್ತು. ಅಭ್ಯರ್ಥಿ ಹಿಂದಕ್ಕೆ ಪಡೆಯಲು ಗುರುವಾರ ಕೊನೆಯ ದಿನವಾಗಿತ್ತು. ಎಲ್ಲಾ ಐವರು ಅಭ್ಯರ್ಥಿಗಳು ಅವಿರೋಧವಾಗಿ ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಸುರಿಂದರ್ ಪಾಲ್ ತಿಳಿಸಿದ್ದಾರೆ. ರಾಜ್ಯಸಭಾ ಚುನಾವಣೆಗಾಗಿ ಪಂಜಾಬಿನಿAದ ಇತರ ರಾಜಕೀಯ ಪಕ್ಷಗಳು ಯಾವುದೇ ಅಭ್ಯರ್ಥಿಗಳನ್ನು ನಾಮನಿರ್ದೇಶನ ಮಾಡಿಲ್ಲ.
ಮಂಗಳಮುಖಿ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಹಾಸ್ಟೆಲ್‌ಗಾಗಿ ಅರ್ಜಿ
ಬೆಂಗಳೂರು, ಮಾ. ೨೪: ರಾಜ್ಯದ ಎಲ್ಲಾ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಮಂಗಳಮುಖಿ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಹಾಸ್ಟೆಲ್‌ಗಳನ್ನು ನೀಡಬೇಕೆಂದು ಮನವಿ ಮಾಡಿ ದಾಖಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಪ್ರತಿಕ್ರಿಯೆ ನೀಡಲು ರಾಜ್ಯ ಸರ್ಕಾರವನ್ನು ಹೈಕೋರ್ಟ್ ಕೇಳಿದೆ. ನ್ಯಾ. ರಿತುರಾಜ್ ಅವಸ್ಥಿ ಹಾಗೂ ನ್ಯಾ. ಎಸ್.ಆರ್. ಕೃಷ್ಣ ಕುಮಾರ್ ಅವರಿದ್ದ ವಿಭಾಗೀಯ ಪೀಠ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಉನ್ನತ ಶಿಕ್ಷಣ ಇಲಾಖೆ, ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯಕ್ಕೆ ನೋಟೀಸ್ ಜಾರಿಗೊಳಿಸಿದ್ದು, ರಾಷ್ಟಿçÃಯ ವೈದ್ಯಕೀಯ ಆಯೋಗಕ್ಕೆ ತುರ್ತು ನೋಟೀಸ್ ನೀಡಿ ವಿಚಾರಣೆಯನ್ನು ಜೂ.೦೬ ಕ್ಕೆ ಮುಂದೂಡಿದೆ. ತಮ್ಮ ಸ್ವಘೋಷಿತ ಲಿಂಗಕ್ಕೆ ಅನುಗುಣವಾಗಿ ವ್ಯವಸ್ಥೆಗಳನ್ನು ನೀಡಲು ನಿರಾಕರಿಸುವುದು ಆರ್ಟಿಕಲ್ ೧೪-೧೫ ರ ಅಡಿಯಲ್ಲಿ ಸಮಾನತೆಯ ಉಲ್ಲಂಘನೆಯಾಗುತ್ತದೆ ಎಂದು ಅರ್ಜಿದಾರರಾದ ಡಾ. ತ್ರಿನೇತ್ರ ಹಲಾದರ್ ಗುಮ್ಮರಾಜು ಮನವಿಯಲ್ಲಿ ಹೇಳಿ ಎಲ್ಲಾ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಲಿಂಗ ಗುರುತನ್ನು ಮಂಗಳಮುಖಿ ಎಂದು ನಮೂದಿಸಲು ಅವಕಾಶ ನೀಡಬೇಕು ಹಾಗೂ ಅವರಿಗಾಗಿ ಪ್ರತ್ಯೇಕ ಹಾಸ್ಟೆಲ್ ವ್ಯವಸ್ಥೆ ಮಾಡಬೇಕು ಎಂದು ಹೈಕೋರ್ಟ್ಗೆ ಮನವಿ ಮಾಡಿದ್ದರು.
ಜಡ್ಜ್ಗೆ ಬೆದರಿಕೆ - ಮತ್ತೋರ್ವ ವಶಕ್ಕೆ
ಬೆಂಗಳೂರು, ಮಾ. ೨೪: ಹಿಜಾಬ್ ವಿವಾದ ಸಂಬAಧ ತೀರ್ಪು ನೀಡಿದ್ದ ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ರಿತು ರಾಜ್ ಅವಸ್ತಿ ಅವರಿಗೆ ಜೀವ ಬೆದರಿಕೆ ಹಾಕಿದ್ದ ಮುಸ್ಲಿಂ ಸಂಘಟನೆ ಮುಖಂಡ ಕೋವೈ ಆರ್.ರಹಮತುಲ್ಲಾ ಎಂಬಾತನನ್ನು ವಿಧಾನಸೌಧ ಪೊಲೀಸರು ಬುಧವಾರ ವಿಚಾರಣೆಗೊಳಪಡಿಸಿದರು. ರಹಮತುಲ್ಲಾ ವಿಚಾರಣೆ ನಡೆಸಲು ವಶಕ್ಕೆ ನೀಡುವಂತೆ ತಮಿಳುನಾಡು ಪೊಲೀಸರಿಗೆ ನಗರದ ಪೊಲೀಸರು ಮನವಿ ಮಾಡಿಕೊಂಡಿದ್ದರು. ಇದರಂತೆ ಪ್ರಕರಣದ ತನಿಖಾಧಿಕಾರಿಯಾಗಿರುವ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯ ಸಹಾಯಕ ಪೊಲೀಸ್ ಆಯುಕ್ತ ರಾಜೇಂದ್ರ ಡಿ.ಎಸ್. ಅವರು, ರಹಮತುಲ್ಲಾ ಅವರನ್ನು ಒಂದು ವಾರಗಳ ಕಾಲ ವಶಕ್ಕೆ ಪಡೆದುಕೊಂಡಿದ್ದು, ವಿಚಾರಣೆಗೊಳಪಡಿಸಿದ್ದಾರೆಂದು ತಿಳಿದುಬಂದಿದೆ. ಸಮಾಜಘಾತುಕ ಶಕ್ತಿಗಳ ಕೈವಾಡವಿರುವ ಕುರಿತು ಸೇರಿದಂತೆ ಎಲ್ಲಾ ಆಯಾಮಗಳಲ್ಲೂ ಪ್ರಕರಣದ ತನಿಖೆ ನಡೆಸಲಾಗುತ್ತಿದೆ. ಇದೀಗ ಆರೋಪಿಯಿಂದ ೨ ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡಿದ್ದೇವೆ. ಈ ಹಿಂದೆ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿರುವ ಕುರಿತು, ರಾಜಕೀಯ ನಾಯಕರು ಅಥವಾ ನ್ಯಾಯಾಂಗಕ್ಕೆ ಸೇರಿದ ಅಧಿಕಾರಿಗಳಿಗೆ ಬೆದರಿಕೆ ಹಾಕಿರುವ ಕುರಿತಂತೆಯೂ ತನಿಖೆ ನಡೆಸುತ್ತಿದ್ದೇವೆ. ವಿಚಾರಣೆ ಪೂರ್ಣಗೊಂಡ ಬಳಿಕ ಮರಳಿ ಆರೋಪಿಯನ್ನು ತಮಿಳುನಾಡು ಪೊಲೀಸರ ವಶಕ್ಕೆ ನೀಡಲಾಗುತ್ತದೆ ಎಂದು ರಾಜೇಂದ್ರ ಅವರು ಹೇಳಿದ್ದಾರೆ.
ರಷ್ಯಾ ದಾಳಿಯಲ್ಲಿ ಪತ್ರಕರ್ತೆ ದುರ್ಮರಣ
ಕೀವ್, ಮಾ. ೨೪: ಉಕ್ರೇನ್ ಮೇಲೆ ರಷ್ಯಾ ಸಾರಿರುವ ಯುದ್ಧ ಒಂದು ತಿಂಗಳು ಪೂರ್ಣಗೊಳಿಸಿದ್ದು, ಇಂದು ಉಕ್ರೇನ್ ಸೈನಿಕರ ಶೆಲ್ ದಾಳಿಯಲ್ಲಿ ರಷ್ಯಾ ಮೂಲದ ಓರ್ವ ಪತ್ರಕರ್ತೆ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ರಷ್ಯಾ ಮಾಧ್ಯಮಗಳು ವರದಿ ಮಾಡಿದ್ದು, ರಷ್ಯಾದ ಸ್ವತಂತ್ರ ಸುದ್ದಿ ಸಂಸ್ಥೆ ದಿ ಇನ್‌ಸೈಡರ್ ಪತ್ರಕರ್ತೆ ಒಕ್ಸಾನಾ ಬೌಲಿನಾ ಅವರು ಉಕ್ರೇನ್‌ನಲ್ಲಿ ಶೆಲ್ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಇದಲ್ಲದೆ, ಕೊಲೆಯಾದ ಪತ್ರಕರ್ತೆಯ ಜೊತೆಯಲ್ಲಿದ್ದ ಇಬ್ಬರು ಸಹಾಯಕರೂ ಕೂಡ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ ಎನ್ನಲಾಗಿದೆ. ಬೌಲಿನಾ ಎಲ್ವಿವ್ ಮತ್ತು ಉಕ್ರೇನ್‌ನ ರಾಜಧಾನಿ ಕೈವ್‌ನಿಂದ ಸುದ್ದಿಗಳನ್ನು ವರದಿ ಮಾಡುತ್ತಿದ್ದರು.