ಶನಿವಾರಸಂತೆ, ಮಾ. ೨೩: ಸಮೀಪದ ದುಂಡಳ್ಳಿ ಗ್ರಾ. ಪಂ. ವತಿಯಿಂದ ಸುಳುಗಳಲೆ ಗ್ರಾಮದ ಸಮುದಾಯ ಭವನದಲ್ಲಿ ಜಲಜೀವನ ಮಿಷನ್ ಯೋಜನೆ ವತಿಯಿಂದ ಕುಡಿಯುವ ನೀರು, ಸ್ವಚ್ಛ ಭಾರತ್ ಮಿಷನ್ ವತಿಯಿಂದ ಬೂದು ನೀರು ಮತ್ತು ಕಪ್ಪು ನೀರಿನ ಬಗ್ಗೆ ತರಬೇತಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಪಂಚಾಯಿತಿ ಅಧ್ಯಕ್ಷೆ ಪೂರ್ಣಿಮಾ ಕಿರಣ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸೋಮವಾರಪೇಟೆ ನೋಡೆಲ್ ಅಧಿಕಾರಿ ಜಗದೀಶ್ ಪಂಚಾಯಿತಿ ಸದಸ್ಯರಿಗೆ, ಸಿಬ್ಬಂದಿಗೆ, ಆದಿಶಕ್ತಿ ಸ್ತಿçÃಶಕ್ತಿ ಸಂಘದವರಿಗೆ, ಆಶಾ ಕಾರ್ಯಕರ್ತೆಯರು ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೆ ಕಾರ್ಯಾಗಾರ ನಡೆಸಿದರು. ನಂತರ ಸಮುದಾಯ ಭವನದಿಂದ ನೀರಿನ ಟ್ಯಾಂಕ್‌ವರೆಗೆ ಮೆರವಣಿಗೆ ಸಾಗಿ ನೀರನ್ನು ಹಿತ-ಮಿತವಾಗಿ ಬಳಸುವ ಬಗ್ಗೆ ಸಂದೇಶ ಸಾರಿ ಸಾರ್ವಜನಿಕ ರಿಂದ ಪ್ರಮಾಣ ವಚನ ಮಾಡಿಸ ಲಾಯಿತು. ಪಂಚಾಯಿತಿ ಉಪಾಧ್ಯಕ್ಷ ನಿತಿನ್, ಸದಸ್ಯರಾದ ಡಿ.ಪಿ. ಬೋಜಪ್ಪ, ಗೋಪಿಕಾ, ನಂದಿನಿ ನಾಗರತ್ನ, ಪಿಡಿಓ ರಾಜೇಂದ್ರ, ಕಾರ್ಯದರ್ಶಿ ವೇಣುಗೋಪಾಲ್ ಹಾಜರಿದ್ದರು.