ಕುಶಾಲನಗರ, ಮಾ. ೨೩: ತಾಲೂಕು ಯೋಗಿ ನಾರಾಯಣ ಬಲಿಜ ಸಂಘದ ಆಶ್ರಯದಲ್ಲಿ ೨ನೇ ವರ್ಷದ ಕೈವಾರ ತಾತಯ್ಯ ಜಯಂತಿ ಆಚರಣೆ ನಡೆಯಿತು. ಸ್ಥಳೀಯ ಖಾಸಗಿ ಹೊಟೇಲ್ ಸಭಾಂಗಣದಲ್ಲಿ ನಡೆದ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಕೈವಾರ ತಾತಯ್ಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ನಮನ ಸಲ್ಲಿಸಲಾಯಿತು.
ಸಮುದಾಯದ ಮಹಿಳೆಯರು ಪೂಜೆ ಸಲ್ಲಿಸಿ ಆರತಿ ಬೆಳಗಿದರು. ಈ ಸಂದರ್ಭ ಮಾತನಾಡಿದ ಸಮುದಾಯದ ಪ್ರಮುಖ ಸುಬ್ರಮಣಿ, ಅಧಿಕೃತವಾಗಿ ಜಿಲ್ಲಾ ಸಂಘ ರಚಿಸಿ ಪದಾಧಿಕಾರಿಗಳ ನೇಮಕಾತಿ ಬಳಿಕ ಸದಸ್ಯತ್ವ ನೋಂದಣಿ, ಸಂಘಟನೆಯನ್ನು ಸಮರ್ಪಕವಾಗಿ ಮಾಡಲಾಗುತ್ತದೆ ಎಂದರು.
ಈ ಸಂದರ್ಭ ಪ್ರಮುಖರಾದ ಜಯರಾಂ, ದಯಾನಂದ್, ಟಿ.ಆರ್. ಜಗದೀಶ್, ಸತೀಶ್, ಮದನ್, ನರೇಂದ್ರ, ಪುನೀತ್, ಬಾಲಕೃಷ್ಣ, ಟಿ.ಎಸ್. ನಿರಂಜನ್, ಮೀನಾಕ್ಷಮ್ಮ, ಪ್ರಭಾವತಿ, ಯಶೋಧ, ಲೋಕೇಶ್ವರಿ ಭವ್ಯ ಮತ್ತಿತರರು ಇದ್ದರು.
 
						