ಮಡಿಕೇರಿ, ಮಾ.೨೧: ಇಲ್ಲಿಗೆ ಸಮೀಪದ ಮಕ್ಕಂದೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹೆಮ್ಮೆತ್ತಾಳು ಗ್ರಾಮದಲ್ಲಿ ಹೆಜ್ಜೇನು ದಾಳಿ ಮಾಡಿ ಈರ್ವರಿಗೆ ಕಚ್ಚಿರುವ ಘಟನೆ ನಡೆದಿದೆ.

ನಿನ್ನೆ ಮಧ್ಯಾಹ್ನ ವೇಳೆ ಅಲ್ಲಿನ ಶ್ರೀ ಚಾಮುಂಡೇಶ್ವರಿ ದೇವಾಲಯದ ಬಳಿ ನಿನ್ನೆ ಸಂಜೆ ವೇಳೆ ಸಮುದಾಯಭವನ ನಿರ್ಮಾಣ ಕಾರ್ಯದಲ್ಲಿ ನಿರತರಾಗಿದ್ದ ಸಂದರ್ಭ ದಿಢೀರನೆ ಹೆಜ್ಜೇನು ದಾಳಿ ಮಾಡಿದೆ. ಸ್ಥಳೀಯರಾದ ಧರ್ಮರಾಜ ಹಾಗೂ ನಾಗೇಶ್ ಎಂಬವರನ್ನು ಬೆನ್ನಟ್ಟಿ ಕಚ್ಚಿದೆ. ನಾಗೇಶ್‌ಗೆ ೨೫ರಷ್ಟು ಜೇನು ಕಚ್ಚಿದರೆ, ಧರ್ಮರಾಜನನ್ನು ಸುಮಾರು ಒಂದು ಕಿ.ಮೀ.ವರೆಗೆ ಬೆನ್ನಟ್ಟಿಕೊಂಡು ಹೋಗಿ ೨೦೦ಕ್ಕು ಹೆಚ್ಚು ಜೇನು ಹುಳುಗಳು ಕಚ್ಚಿವೆ. ರಕ್ಷಣೆಗಾಗಿ ಶೇಡ್ ನೆಟ್ ಮೈಮೇಲೆ ಎಳೆದುಕೊಂಡರೂ ಬಿಡದೆ ಕಚ್ಚಿವೆ. ಅಸ್ವಸ್ಥರಾದ ಇಬ್ಬರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.