ಗೋಣಿಕೊಪ್ಪಲು, ಮಾ. ೨೧: ಕೆ.ಬಾಡಗ ಗ್ರಾ.ಪಂ. ಮಹಿಳಾ ಅಧ್ಯಕ್ಷೆಗೆ ಅದೇ ಗ್ರಾಮದ ಪಿ. ನವೀನ್ ಎಂಬವರು ಮೊಬೈಲ್ ಮೂಲಕ ಕೊಲೆ ಬೆದರಿಕೆ ಹಾಕಿರುವದಾಗಿ ಆರೋಪಿಸಿ ತಾ. ೨೦.೦೧.೨೦೧೭ ರಂದು ಕುಟ್ಟ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು.
ಮಹಿಳಾ ಗ್ರಾ.ಪಂ. ಅಧ್ಯಕ್ಷೆ ನೀಡಿರುವ ದೂರಿನ ಮೇರೆ ಕುಟ್ಟ ಪೊಲೀಸರು ಆರೋಪಿ ವಿರುದ್ಧ ಸೆ. ೫೦೪/೫೦೬ ರನ್ವಯ ಪ್ರಕರಣ ದಾಖಲಿಸಿದ್ದರು.
ತಾ. ೫ ರಂದು ವಾದ-ಪ್ರತಿವಾದ ಆಲಿಸಿದ ಪೊನ್ನಂಪೇಟೆ ನ್ಯಾಯಾಧೀಶರಾದ ಎ.ಬಿ. ಗಿರಿಗೌಡರು ಸಾಕ್ಷಾö್ಯಧಾರಗಳ ಕೊರತೆಯಿಂದಾಗಿ ಆರೋಪಿ ಪೆಮ್ಮಣಮಾಡ ನವೀನ್ ನಿರ್ದೋಷಿಯೆಂದು ತೀರ್ಪಿತ್ತು ಪ್ರಕರಣ ಖುಲಾಸೆಗೊಳಿಸಿದ್ದಾರೆ.
ಆರೋಪಿ ಪರ ವಕೀಲರಾದ ದೇಯಂಡ ಟಿ. ಜಯರಾಮ್ ವಕಾಲತ್ತು ವಹಿಸಿದ್ದರು.
 
						