ವೀರಾಜಪೇಟೆ, ಮಾ. ೨೨: ಅನಾರೋಗ್ಯದಿಂದ ಜಿಗುಪ್ಸೆ ಹೊಂದಿ ಮಹಿಳೆಯೋರ್ವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಸಮೀಪದ ಕೆದಮುಳ್ಳೂರು ಗ್ರಾಮದಲ್ಲಿ ನಡೆದಿದೆ.
ರವಿ ಗಣಪತಿ ಎಂಬವರ ತೋಟದ ಮನೆಯಲ್ಲಿ ವಾಸವಿದ್ದ ಲಕ್ಷö್ಮಣ ಎಂಬವರ ಪತ್ನಿ ಜ್ಯೋತಿ (೪೮) ಆತ್ಮಹತ್ಯೆಗೆ ಯತ್ನಿಸಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.
ಮೃತ ಮಹಿಳೆ ಮತ್ತು ಪತಿ ಲಕ್ಷö್ಮಣ ಕೂಲಿ ಕಾರ್ಮಿಕರಾಗಿದ್ದು, ಮೃತ ಮಹಿಳೆಗೆ ತೀವ್ರ ರೀತಿಯ ತಲೆನೋವು ಕಾಣಿಸಿಕೊಂಡು ಚಿಕಿತ್ಸೆ ಪಡೆಯುತಿದ್ದರು. ಇದರಿಂದ ನೊಂದು ತಾ. ೧೪ ರಂದು ಮದÀ್ಯದೊಂದಿಗೆ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದರು. ಮನೆಗೆ ಬಂದ ಪತಿಯು ಪತ್ನಿಯ ನರಳಾಟವನ್ನು ಕಂಡು ಸ್ಥಳೀಯರೊಂದಿಗೆ ವೀರಾಜಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಪ್ರಥಮ ಚಿಕಿತ್ಸೆಯ ನಂತರ ಮಡಿಕೇರಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ತಾ. ೨೧ ರಂದು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮರಣಹೊಂದಿದ್ದಾರೆ. ವೀರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಮೃತಳ ಪತಿ ಲಕ್ಷಣ ಅವರು ನೀಡಿದ ದೂರಿನ ಮೇರೆಗೆ ಆತ್ಮಹತ್ಯೆ ಪ್ರಕರಣ ದಾಖಲಾಗಿದ್ದು ಮುಂದಿನ ಕ್ರಮ ಕೈಗೊಂಡಿದ್ದಾರೆ.
ನಿಯAತ್ರಣ ತಪ್ಪಿದ ಕಾರು: ಈರ್ವರಿಗೆ ಗಾಯ
ವೀರಾಜಪೇಟೆ, ಮಾ. ೨೨: ಜಿಲ್ಲಾ ವೈದÀ್ಯಕೀಯ ಕಾಲೇಜಿನಲ್ಲಿ ನಡೆಯುವ ಪರೀಕ್ಷೆಗೆ ಮೇಲ್ವಿಚಾರಣೆ ಮಾಡಲು ಆಗಮಿಸಿ ಹಿಂದಿರುಗುವ ಸಮಯದಲ್ಲಿ ಕಾರು ಅಫಘಾತಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ವೀರಾಜಪೇಟೆ ಮಾಕುಟ್ಟ ಸಮೀಪ ನಡೆದಿದೆ.
ಕೇರಳ ರಾಜ್ಯದ ಎರ್ನಾಕುಲಂ ನಗರದ ನಿವಾಸಿ ಡಾ. ಮನೋಜ್ ಮ್ಯಾಥ್ಯೂ (೫೫) ಮತ್ತು ಮಗ ಜಯಜ್ (೧೦) ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿಗಳು.
ಡಾ. ಮನೋಜ್ ಈಪನ್ ಮ್ಯಾಥ್ಯೂ ಮತ್ತು ತಮ್ಮ ಈರ್ವರು ಪುತ್ರರಾದ ಜೋಹನ್ ಹಾಗೂ ಜಯಜ್ ಅವರೊಂದಿಗೆ ತಮ್ಮ ಸ್ಕೋಡ ಕಾರಿನಲ್ಲಿ ಕೇರಳ ರಾಜ್ಯದ ಎರ್ನಾಕುಲಂನಿAದ ಮಾಕುಟ್ಟ ಮಾರ್ಗವಾಗಿ ಮಡಿಕೇರಿ ವೈದÀ್ಯಕೀಯ ಕಾಲೇಜಿಗೆ ಅಗಮಿಸಿದ್ದಾರೆ. ವೈದÀ್ಯಕೀಯ ಕಾಲೇಜಿನಲ್ಲಿ ಡಾ. ಮನೋಜ್ ಅವರು ಪರೀಕ್ಷಾ ಮೇಲ್ವಿಚಾರಕರಾಗಿ ನೇಮಕಗೊಂಡಿದ್ದರು. ಕಾಲೇಜಿನಲ್ಲಿ ಪರೀಕ್ಷಾ ಪ್ರಕ್ರಿಯೆಯನ್ನು ಮುಗಿಸಿ ಮನೆಗೆ ಹಿಂದಿರುಗುತ್ತಿದ್ದಾಗ ವೀರಾಜಪೇಟೆ ಮಾಕುಟ್ಟ ಪೊಲೀಸ್ ತಪಾಸಣೆ ಕೇಂದ್ರದಿAದ ಅನತಿ ದೂರದಲ್ಲಿ ಸುಮಾರು ಸಂಜೆ ೪ ಗಂಟೆಯ ವೇಳೆಗೆ ವಾಹನವು ನಿಯಂತ್ರಣ ತಪ್ಪಿ ರಸ್ತೆ ಬದಿಯ ಮೋರಿಗೆ ಅಪ್ಪಳಿಸಿದೆ. ಪರಿಣಾಮ ಡಾ. ಮನೋಜ್ ಅವರಿಗೆ ಮುಖದ ಭಾಗಕ್ಕೆ ಗಾಯಗಳಾಗಿವೆ ಅದರಂತೆ ಹಿಂಬದಿ ಆಸನದಲ್ಲಿ ಕುಳಿತಿದ್ದ ಜಯಜ್‌ಗೂ ತಲೆ ಭಾಗಕ್ಕೆ ಗಾಯಗಳಾಗಿವೆ. ಗಾಯಾಳುಗಳನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರಿನ ಮುಂದಿನ ಭಾಗ ಸಂಪೂರ್ಣ ಜಖಂಗೊAಡಿದೆ.